Saturday, August 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ನನ್ನ ಯೋಧರನ್ನು War Criminals ಎನ್ನುವ ನಾಯಿಗಳನ್ನು ಶಿಕ್ಷಿಸುವ ತಾಕತ್ತು ಈ ವ್ಯವಸ್ಥೆಗಿಲ್ಲವೇಕೆ?

ಆ ಯೋಧ ಬಯಸಿದ ಕೆಲಸ ಕಾಲ ಬಳಿ ಬಿದ್ದಿರುತ್ತಿತ್ತು. ಆದರೆ, ಅವರು ಆರಿಸಿಕೊಂಡಿದ್ದು ವೀರಸ್ವರ್ಗವನ್ನು

May 7, 2020
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಪ್ರಪಂಚದಲ್ಲಿ ಎಲ್ಲದಕ್ಕಿಂತ ದೊಡ್ಡ ನೋವು ಯಾವುದು ಗೊತ್ತಾ? ಮಗನ ಶವಕ್ಕೆ ತಂದೆ ಸಂಸ್ಕಾರ ಮಾಡುವುದು. ಅಂತಹ ನೋವನ್ನು ನುಂಗಿದ ಅಪ್ಪ, ನನ್ನ ಮಗ ಅತ್ಯುನ್ನತ ತ್ಯಾಗ ಮಾಡಿದ್ದಾನೆ. ಅದಕ್ಕಾಗಿಯೇ ಅವನು ತರಬೇತಿ ಪಡೆದಿದ್ದ ಮತ್ತು ಅದನ್ನೇ ಸಾಧಿಸಿದ್ದಾನೆ ಎಂದರೆ ಏನರ್ಥ? ಒಂದೋ ಆ ತಂದೆ ಸೈನಿಕನಾಗಿರಬೇಕು ಅಥವಾ ಆ ಮಗ ವೀರ ಯೋಧನಾಗಿರಬೇಕು. ವಿಶೇಷ ಎಂದರೆ ಈ ಸಮಯದಲ್ಲಿ ಈ ಎರಡೂ ಸತ್ಯ. ಮೊನ್ನೆಯಷ್ಟೇ ಹಂದ್ವಾರಾ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಮೇಜರ್ ಅನೂಜ್ ಸೂದರ ತಂದೆ ನಿವೃತ್ತ ಬ್ರಿಗೇಡಿಯರ್ ಚಂದ್ರಕಾಂತ್ ಸೂದ್‌ರ ಮಾತು. ಅಬ್ಬಾ ಅದೆಂತಹ ದೇಶವಿದ್ದೀತು ಭಾರತ? ಇಂತಹ ಶ್ರೇಷ್ಠ ಮಕ್ಕಳ ಪಡೆಯಲು.

ಅವತ್ತು ಮೇ ಎರಡರ ಶನಿವಾರ. ಮಧ್ಯಾಹ್ನ ಮೂರುವರೆ ಗಂಟೆ ಸುಮಾರಿಗೆ ಉತ್ತರ ಕಾಶ್ಮೀರದ ಹಂದ್ವಾರಾ ಬಳಿ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಕಾಳಗ ಆರಂಭವಾಯಿತು. ಸಂಜೆಯ ಹೊತ್ತಿಗೆ ಇಬ್ಬರು ಮುಖ್ಯ ಸೇನಾಧಿಕಾರಿಗಳು ಲಷ್ಕರ್ ಉಗ್ರರೊಂದಿಗೆ ಒಂದು ಮನೆಯಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ಬಂದಾಗ ಅವರನ್ನು ಸಂಪರ್ಕಿಸುವ ಎಲ್ಲಾ ಪ್ರಯತ್ನಗಳು ಆರಂಭವಾದವು. ದುರಾದೃಷ್ಟವಶಾತ್ ಯಾವ ಯಶಸ್ಸು ಸಿಗದಿದ್ದಾಗ ಕರ್ನಲ್ ಅಶುತೋಷ್ ಶರ್ಮಾರ ಮೊಬೈಲಿಗೆ ಕರೆ ಮಾಡಿದಾಗ ಅಸ್ಸಲಾಮ್ ವಾಲೇಕುಮ್ ಎಂದು ದುರುಳನೊಬ್ಬ ಪ್ರತಿಕ್ರಿಯಿಸಿದ. ಅಲ್ಲಿಗೆ ಭರವಸೆಗಳು ಕರಗಿದ್ದವು. ಮೇಜರ್ ಅನೂಜ್ ಸೂದ್’ರೊಂದಿಗೆ ಕರ್ನಲ್ ಅಶುತೋಷ್ ಶರ್ಮಾ, ನಾಯಕ್ ರಾಜೇಶ್, ಲ್ಯಾನ್ಸ್‌ ನಾಯಕ್ ದಿನೇಶ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಬ್ ಇನ್ಸ್‌ಪೆಕ್ಟರ್ ಶಕೀಲ್ ಖಾಜಿ ಹುತಾತ್ಮರಾದರು.

ಅನೂಜ್ ಸೂದರ ತಂದೆಯವರ ಮಗನ ಸಾವಿನ ಬಗ್ಗೆ ಕೇಳಿದರೆ ಇಲ್ಲ ಅವನು ಅದಕ್ಕೆಂದೇ ಇದ್ದವನು. ನಮ್ಮ ಕಾಯುವುದೇ ಅವನ ಹೊಣೆ. ಆದರೆ ಆತನ ವಿವಾಹವಾಗಿ ಕೆಲವು ತಿಂಗಳು ಅಷ್ಟೇ ಆಗಿತ್ತು. ಅದಕ್ಕೆ ನನ್ನ ಸೊಸೆಯನ್ನು ನೆನೆದು ದುಃಖವಾಗುತ್ತಿದೆ ಎಂದರು. ಸ್ವತಃ ಚಂದ್ರಕಾಂತ್ ಅವರು ನಿವೃತ್ತ ಬ್ರಿಗೇಡಿಯರ್. ನಿಜಕ್ಕೂ ಹೆಮ್ಮೆ ಅನ್ನಿಸುತ್ತದೆ. ಆದರೆ ಮುವತ್ತೊಂದರ ಹರೆಯದ ಅನೂಜ್ ಸೂದರ ಕುರಿತು ನಿಮಗೆ ಹೇಳಬೇಕಿದೆ.

Internet Image

“When you’re older, you will realise the only thing that matters, the only thing, is that you had courage and honour. Lose those things and you won’t die any quicker, but you’ll be less than the dirt from your boots. You’ll still be dust, but you’ll have wasted a short time in the light.”. ಇದು ಅನೂಜ್ ಸೂದರ ಇನ್ಸ್ಟಾಗ್ರಾಂನಲ್ಲಿ ಹಾಕಿದ ಸಾಲುಗಳು, ನೀನು ವೃದ್ಧನಾದಾಗ ಒಂದು ವಿಷಯ ಅರ್ಥ ಆಗುತ್ತೆ. ಅದೇನೆಂದರೆ ನಿಜಕ್ಕೂ ಮಹತ್ವ ಅಂತಿದ್ದರೆ ಅದು ಧೈರ್ಯ ಮತ್ತು ಗೌರವಕ್ಕೆ ಅಷ್ಟೇ ಅಂತ. ಅವನ್ನು ಕಳೆದುಕೊಂಡರೆ ನೀನೇನು ಬೇಗ ಸಾಯದೇ ಇರಬಹುದು. ಆದರೆ ನಿನ್ನ ಕಾಲ ಧೂಳಿಗೂ ತೃಣ ಆಗ ನೀನು. ನಿಜವಾಗಿಯೂ ನೀನು ಮಹತ್ತರವಾದದ್ದು ಕಳೆದುಕೊಂಡಿರ್ತಿಯಾ. ಒಬ್ಬ ವೀರನ ಪುತ್ರನಿಂದ, ಪುತ್ರನೂ ಮಹಾವೀರನಾದಾಗ ಅವನಿಂದ ಇದನ್ನಲ್ಲದೆ ಮತ್ತೇನು ನಿರೀಕ್ಷಿಸಲು ಸಾಧ್ಯ?

ರೋಮಾಂಚನವಾಗುತ್ತದೆ ವೀರನ ಕಥೆ ಹೇಳಲು, ಇನ್ನೆಷ್ಟು ಚಂದವಿರಬೇಡ ಆ ಬದುಕು.?! ಬದುಕಿದರೆ ಹಾಗೆ ಬದುಕಬೇಕು. Indian Institute of Science (IISc)ನಲ್ಲಿ, M.Tech ಪದವೀಧರ. Indian Institute of Technology (IIT) ಪಾಸ್ ಆದವರು. ಅವರು ಹೇಳಿದ ಉದ್ಯೋಗ ಅವರ ಅರಸಿ ಬರುತ್ತಿತ್ತು. ಎಲ್ಲಾ ಬಿಟ್ಟು ಜೀವ ಪಣಕ್ಕಿಟ್ಟು ಸೇನೆ ಸೇರಿದರು. ತಂದೆಯ ಬದುಕು, ಉದ್ಯೋಗ ಕಣ್ಣಾರೆ ಕಂಡು ನಂತರ ಇಂತಹ ಪ್ರತಿಭಾವಂತ ಯುವಕ ಈ ಹಾದಿಯನ್ನು ತುಳಿದಿದ್ದರೆ ಅದು ಖಂಡಿತ ಅವರಲ್ಲಿನ ರಾಷ್ಟ್ರ ಪ್ರೇಮವೇ ಆಗಿರುತ್ತದೆ. ಒಮ್ಮೊಮ್ಮೆ ಬೇಸರವಾಗುತ್ತದೆ. ಈ ನಮ್ಮ ಭಾರತದಲ್ಲಿ ಸೈನಿಕರ ಬಲಿದಾನಗಳಿಗೆ ಸಾಕ್ಷಿ ಕೇಳುವವರು ಇದ್ದಾರಲ್ಲ ಅಂತ. ಈಗಲೂ ಅಂತಹುದೇ ಒಂದು ಘಟನೆ ನಡೆಯಿತು. ಅವರ ಬಗ್ಗೆ ಜಾಮಿಯ ವಿವಿಯ ಒಂದು ಎಡಬಿಡಂಗಿ ಹೇಳ್ತಾಳೆ ಅವರೆಲ್ಲ War Criminals ಅಂದರೆ ಯುದ್ಧಾಪರಾಧಿಗಳು. ಅವರಿಗೆ ಯಾಕೆ ನೀವು ಇಷ್ಟು ರೋಧಿಸುವಿರಿ? ಅಂತ. ರಕ್ತ ಕುದ್ದು ಬಿಡುತ್ತದೆ. ಯಾರನ್ನು ನೋಡಿ ಅನಕ್ಷರಸ್ಥ ಗ್ರಾಮ ಭಾರತ ಕಂಬನಿ ಮಿಡಿಯುತ್ತೋ, ವಿದ್ಯಾವಂತರಲ್ಲದ ಅಕ್ಷರಸ್ಥ ಅನಾಗರೀಕರು ತಮ್ಮ ಪ್ರಚಾರದ ಹುಚ್ಚಿಗೆ ವೀರರ ಹೀಗಳೆಯುವ ಕಾಯಕ ಮಾಡುತ್ತಾರೆ. ಅವರಿಗೆ ಕೊನೆಗೆ ಒಂದು ಶಿಕ್ಷೆಯೂ ನಮ್ಮ ಸಂವಿಧಾನ ನೀಡುವುದಿಲ್ಲ.

ಮಂಗಳವಾರ ಬೆಳಿಗ್ಗೆ ಪಂಚಕುಲಾಗೆ ಹುತಾತ್ಮ ಯೋಧ ಅನೂಜರ ದೇಹ ತಂದಾಗ ಆಕ್ರಂದನ ಹೃದಯ ತಟ್ಟುತ್ತಿತ್ತು. ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಪತ್ನಿ ಆಕೃತಿ, ಮಗನ ಶವಕ್ಕೆ ಸಂಸ್ಕಾರ ಮಾಡಬೇಕಾದ ತಂದೆ. ತುಂಬಾ ಕಠಿಣವಾದ ಘಳಿಗೆ. ಲಾಕ್‌ಡೌನ್ ಮುಗಿದ ಮೇಲೆ ಬರುವ ಭರವಸೆ ಕೊಟ್ಟು ಹೋದ ಮನೆಯ ಮಗ ಬಂದಿದ್ದು ಹುತಾತ್ಮನಾಗಿ. ಇದು ಕೇವಲ ಅನೂಜ್ ಸೂದ್ ಒಬ್ಬರ ಕಥೆಯಲ್ಲ. ಭಾರತೀಯ ಪ್ರತಿ ಯೋಧನ ಜೀವನ. ಅವರ ಹೃದಯದಲ್ಲಿ ರಾಷ್ಟ್ರಪ್ರೇಮ ಬಿಟ್ಟರೆ ಮತ್ತೇನು ಇರಲು ಸಾಧ್ಯವೇ ಇಲ್ಲ. ಹೃದಯದ ಪ್ರತಿ ಬಡಿತವೂ ಮತ್ತಷ್ಟು ದೇಶಭಕ್ತಿಯನ್ನೇ ಸ್ಪುರಿಸುತ್ತದೆ.

ಅನೂಜರ ದಿಟ್ಟಿಸಿ ನೋಡುತ್ತಾ, ಮತ್ತೊಮ್ಮೆ ಬಾಚಿ ಅಳುತ್ತಾ ಇದ್ದ ಆಕೃತಿಯವರ ನೋಡುತ್ತಿದ್ದರೆ ಯಾಕಾದರೂ ಅನೂಜ್ ಸೂದ್ ಎದ್ದು ಬರಬಾರದೋ ಎನ್ನಿಸುತ್ತಿತ್ತು. ಅವರಿಗೇನಿತ್ತು ಅಂತಹ ಜವಾಬ್ದಾರಿ? ಕೈ ತುಂಬಾ ಸಂಬಳ ಪಡೆಯಲು ಎಂದೋ ಕಳಿಸಬಹುದಿತ್ತು. ವೀರರ ಕುಟುಂಬಗಳೇ ಹಾಗೆ. ಅವರು ಅನನ್ಯ ದೇಶಭಕ್ತರರೇ ಆಗಿರುತ್ತಾರೆ. ಅಂತಹುದರಲ್ಲಿ ಅವರಿಗೆ ಸಾಕ್ಷಿ ಪುರಾವೆ ಕೇಳುವುದು, ಯುದ್ಧ ಅಪರಾಧಿಗಳು ಅಂತ ಹೀಗಳೆಯುವುದು ಅಥವಾ ಹೊಟ್ಟೆಪಾಡಿಗಾಗಿ ವೃತ್ತಿ ಮಾಡುವವರು ಎನ್ನುವುದು ತುಂಬಾ ದೊಡ್ಡ ಅಪರಾಧ. ಸಂವಿಧಾನಾತ್ಮಕ ಶಿಕ್ಷೆ ವಿಧಿಸುವ ಕ್ರಮ ಆರಂಭವಾಗಲಿ.

ನಿಜಕ್ಕೂ ಇಂತಹ ವೀರ ಪುತ್ರರ ಪಡೆದ ಭಾರತ ಮಾತೆ ಧನ್ಯಳು. ಅವರ ಕಾಲ ಧೂಳಿಗೂ ನಾವು ಸಮಾನರಲ್ಲ. ಈ ಪೀಳಿಗೆ ಅಸಂಖ್ಯವಾಗಲಿ. ಈ ಸಂದರ್ಭದಲ್ಲಿ ಶ್ರೇಷ್ಠ ಸಂತ ವಿದ್ಯಾನಂದ ಶೆಣೈಯವರ ಕೆಲ ಸಾಲುಗಳು ನೆನಪಿಗೆ ಬರುತ್ತಿದೆ.

ಮೂರು ಸಾಗರ, ನೂರು ಮಂದಿರ ದೈವ ಸಾಸಿರವಿದ್ದರೆ,
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿ ಹಿಮಾಲಯವಿದ್ದರೆ,
ವೇದವಿದ್ದರೆ ಭೂಮಿಯಿದ್ದರೆ ಘನ ಪರಂಪರೆಯಿದ್ದರೆ,
ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ?
ಅರ್ಥ ಆಗುವವರಿಗೆ ಅರ್ಥ ಆಗಿದೆ.


Get in Touch With Us info@kalpa.news Whatsapp: 9481252093

Tags: Bharat Ke VeerBrave WarriorIITindian armyKannadaNewsWebsiteLatestNewsKannadaMajor anuj soodSachin ParshwanathWar Criminalsಬ್ರಿಗೇಡಿಯರ್ಭಾರತ ಮಾತೆಭಾರತೀಯ ಸೇನೆಮೇಜರ್ ಅನೂಜ್ ಸೂದ್ವೀರ ಯೋಧ
Previous Post

ನಾಲ್ಕು ದಿನದಲ್ಲಿ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲಾಗಿದೆ: ಡಿಸಿಎಂ ಸವದಿ

Next Post

ಕ್ವಾರಂಟೈನ್ ಅವಧಿ ಮುಗಿಸಿ ವಿಧಾನಸೌಧಕ್ಕೆ ಬಂದ ಸಚಿವರು ಹೇಳಿದ್ದೇನು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕ್ವಾರಂಟೈನ್ ಅವಧಿ ಮುಗಿಸಿ ವಿಧಾನಸೌಧಕ್ಕೆ ಬಂದ ಸಚಿವರು ಹೇಳಿದ್ದೇನು?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬಿಜೆಪಿ – ಜೆಡಿಎಸ್ ಮುಖಂಡರಿಗೆ ವಿವಾದಗಳೇ ಮುಖ್ಯ: ಆಯನೂರು ಮಂಜುನಾಥ್ ವಾಗ್ಧಾಳಿ

August 30, 2025

ಮಹಾನಗರ ಪಾಲಿಕೆ ಭ್ರಷ್ಟಾಚಾರ ಮುಕ್ತವಾಗಲಿ: ಈ. ವಿಶ್ವಾಸ್

August 30, 2025

ವಿದ್ಯುತ್ ಅಭಾವ ನೀಗಿಸಲಿದೆ ಪರಿಸರ ಸ್ನೇಹಿ ಆಧುನಿಕ ಬೃಹತ್ ಜಲವಿದ್ಯುತ್ ಉತ್ಪಾದನಾ ಘಟಕ

August 30, 2025

ಗೋಕರ್ಣ | ಅಶೋಕೆಯಲ್ಲಿ ಸಾಮವೇದ ಸಂಹಿತಾ ಯಾಗ, ಘನ ಪಾರಾಯಣ ಆರಂಭ

August 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬಿಜೆಪಿ – ಜೆಡಿಎಸ್ ಮುಖಂಡರಿಗೆ ವಿವಾದಗಳೇ ಮುಖ್ಯ: ಆಯನೂರು ಮಂಜುನಾಥ್ ವಾಗ್ಧಾಳಿ

August 30, 2025

ಮಹಾನಗರ ಪಾಲಿಕೆ ಭ್ರಷ್ಟಾಚಾರ ಮುಕ್ತವಾಗಲಿ: ಈ. ವಿಶ್ವಾಸ್

August 30, 2025

ವಿದ್ಯುತ್ ಅಭಾವ ನೀಗಿಸಲಿದೆ ಪರಿಸರ ಸ್ನೇಹಿ ಆಧುನಿಕ ಬೃಹತ್ ಜಲವಿದ್ಯುತ್ ಉತ್ಪಾದನಾ ಘಟಕ

August 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!