ಹಿಂದೆ ಅಟಲ್ ಜೀಯವರ ಸಾಧನೆಗಳನ್ನು ಪರಿಗಣಿಸದೆ, ಮರು ಆಯ್ಕೆ ಮಾಡದೆ, ಅಟಲ್ ಜೀ ಮೌನಕ್ಕೆ ತೆರಳಿದರು. ಪರಿಣಾಮವಾಗಿ ಯುಪಿಎ ಹತ್ತು ವರ್ಷ ನಿರಾತಂಕದಿಂದ ಅಟಲ್ ಜೀ ಕೂಡಿಟ್ಟ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಆಡಳಿತ ಮಾಡಿದ್ದು ಮಾತ್ರವಲ್ಲದೆ, ಹಿಂದುತ್ವದ ನಾಶವಾಗುವ ಒಂದು ವ್ಯವಸ್ಥಿತ ಸಂಚನ್ನೂ ಮಾಡಿತು. ಭಯೋತ್ಪಾದಕರ ಧಾಳಿ ನಡೆದಾಗ ನಡೆದಾಗ ಅವರ ಬಾಯಿಮುಚ್ಚಿಸಿದ್ದು ಕೇವಲ ಸೂಟ್ ಕೇಸ್ ರವಾನಿಸುವ ಮೂಲಕ! ವಿದೇಶದಲ್ಲಿ ಭಾರತದ ಹೆಸರು ನಾಮಾವಶೇಷ ಆಗುತ್ತಾ, ಪಥನದತ್ತ ಸರಿಯಲಾರಂಭಿಸಿತು.
ಅದೇ ಸರ್ಕಾರ ಇನ್ನೂ ಹತ್ತು ವರ್ಷ ಇರುತ್ತಿದ್ದರೆ ನಾವು ನಮ್ಮ ನಮ್ಮ ದೇವಸ್ಥಾನಗಳಿಗೆ ಹೋಗುವುದೂ ತಪ್ಪುತ್ತಿತ್ತೋ ಏನೊ. ಒಟ್ಟಿನಲ್ಲಿ ಸಾಧನೆ ಶೂನ್ಯವಾಗಿತ್ತು. ಪಾಕಿನಲ್ಲಿ ಸಾಕಷ್ಟು ನಮ್ಮ ಕರೆನ್ಸಿಗಳು ಮುದ್ರಣವಾಗಲೂ ಶುರುವಾಯ್ತು. ಒಂದು ಸೆಂಟ್ಸ್ ಭೂಮಿಯ ಬೆಲೆ ಗಗನಕ್ಕೇರಿದ್ದೇ ಈ ಕಪ್ಪು ಹಣದ ಪ್ರಭಾವದಿಂದ! ಬಡವನಿಗೆ ಭೂಮಿ ಎಂಬುದು ಗಗನ ಕುಸುಮವಾಗುತ್ತಾ ಹೋಗಿ, ರೈತರ ಆತ್ಮಹತ್ಯೆಯೂ ಅಧಿಕವಾಗತೊಡಗಿತು.
ಅಷ್ಟರಲ್ಲಿ ಗುಜರಾತಿನಲ್ಲಿ ಬಿಜೆಪಿಯ ನೇತೃತ್ವದ ಮೋದಿ ಸರಕಾರ ಉದಯವಾಗಿ, ಕೇಂದ್ರಕ್ಕೆ ಸಡ್ಡು ಹೊಡೆಯಲಾರಂಭಿಸಿತು. ಇದರ ಪರಿಣಾಮವಾಗಿ, ಕಾಂಗ್ರೆಸ್ ಎಷ್ಟು ಕೆಲಸ ಮಾಡಿತು ಅಂದರೆ, ಮೋದಿಯವರಿಗೆ ನರಹಂತಕ ಬಿರುದು ನೀಡಿದ್ದು ಮಾತ್ರವಲ್ಲದೆ, ಅಮೆರಿಕಾ ಆಡಳಿತದ ಮೂಲಕ ಮೋದಿಗೆ ನಿಷೇಧವನ್ನೂ ಹೇರುವಂತೆ ಮಾಡಿತು. ಎಲ್ಲಾದರೂ ಮೋದಿ ಅಮೆರಿಕಾಕ್ಕೆ ಹೋಗಿ ಕಾಂಗ್ರೆಸ್ಸಿಗೆ ತೊಂದರೆಯಾದರೆ ಎಂದು ಈ ನಿರ್ಬಂಧದ ಕೆಲಸ ಮಾಡಿತ್ತು.
ದೈವ ಚಿತ್ತವೇ ಬೇರೆ. ಯಾವ ಅಮೆರಿಕಾ ದೇಶವು ನಿರ್ಬಂಧ ಹೇರಿತ್ತೋ ಅದೇ ಅಮೆರಿಕಾವು ಕೆಂಪು ಹಾಸು ನೀಡಿ ಮೋದಿಯವರನ್ನು ಸ್ವಾಗತಿಸಿದ್ದು ಈಗಾಗಲೇ ಭವ್ಯ ಇತಿಹಾಸವಾಗಿರುವುದು ಎಲ್ಲರಿಗೂ ತಿಳಿದಿದೆ. ನರಹಂತಕ ಪಟ್ಟ ಕಟ್ಟಿದ ಕಾಂಗ್ರ‍್ರೆಸ್ ಕಣ್ಣೆದುರಿಗೇ ನರೇಂದ್ರ ಪಟ್ಟ ಲಭಿಸಿದ್ದು ಈ ಕಾಂಗ್ರೆಸ್ ಕಣ್ಣಿಗೆ ಖಾರ ಪುಡಿ ಎರಚಿದಂತಾಯ್ತು. ಇಷ್ಟಕ್ಕೂ ನಿಲ್ಲದ ಈ ವಿರೋಧಿಗಳು ಕೆಲ ಮೂರ್ಖ ಅಸಹಿಷ್ಣು ಸಾಹಿತಿಗಳ ಮೂಲಕ ಹಿಂದುತ್ವಕ್ಕೆ, ಮೋದಿಯವರ ಧೋರಣೆಗಳಿಗೆ ಠೀಕೆ ಮಾಲಾರಂಭಿಸಿದವು. ಒಂದು ನಾಯಿಯು ವಾಹನದಡಿಗೆ ಬಿದ್ದು ಸತ್ತರೂ ಮೋದಿಯೇ ಕಾರಣ ಎಂದು ಪ್ರಚಾರಕ್ಕಿಳಿದವು!!
ಪಾಕ್ ಸ್ವರ್ಗ, ಭಾರತ ನರಕ ಎಂದೂ ಬೊಗಳಿದವು. ಸರ್ಜಿಕಲ್ ಸ್ಟ್ರೈಕ್ ಮೂಲಕ ಭಯೋತ್ಪಾದಕರ ಮಾರಣ ಹೋಮ ನಡೆದರೆ, ಕೆಲವರು ಸುಳ್ಳು ಎಂದರು. ಇನ್ನು ಕೆಲ ಸಾಹಿತಿಗಳು,’ ಅಯ್ಯೋ ಸತ್ತವರ ಹೆಂಡತಿ ಮಕ್ಕಳು ಅನಾಥರಾದರು ಎಂದು ಗೋಳಿಟ್ಟರು. ಪ್ರಶಸ್ತಿ ಪತ್ರಗಳನ್ನು ವಾಪಾಸ್ ನೀಡಿ(ಅದರ ಜತೆ ನೀಡಿದ್ದ ಹಣವನ್ನಲ್ಲ) ಪ್ರತಿಭಟನೆ ಮಾಡಿದರು. Currency Demonetize ಆದಾಗ,’ ಇಲ್ಲಿಗೆ ಭಾರತ ಕಥೆ ಮುಗಿಯಿತು’ ಎಂದು ಗೋಳಿಟ್ಟು, ATM ಮುಂದೆ, ಸುಸ್ತಾಗಿ ಬಿದ್ದು ತೋರಿಸಿ ನಡೆಯಿತು ಪ್ರತಿಭಟನೆ! ಇದಾದ ಮೇಲೆ GST ಬಂತು. ಇಡೀ ಅರ್ಥ ವ್ಯವಸ್ಥೆಯ ನಾಶವಾಯ್ತು ಎಂದು ಬೊಬ್ಬೆ ಹಾಕಿದರು. ಇಂಧನ ಬೆಲೆ ಏರುತ್ತಿದ್ದಂತೆ, ದೇಶ ಬಂದ್ ಮಾಡಲು ಯತ್ನಿಸಿದರು! ತ್ರಿತಲಾಕ್ ನಿಷೇಧ ಮಸೂದೆಗೆ ಸುಗ್ರಿವಾಜ್ಞೆ ಹೊರಡಿಸಿದಾಗ, ಭಾರತದಲ್ಲಿ ಮುಸ್ಲಿಮರಿಗೆ ಬದುಕಲು ಕಷ್ಟ ಎಂದೂ ಕೆಲ ಸಾಹಿತಿಗಳ ಮೂಲಕ, ಚಿತ್ರ ನಟರ ಮೂಲಕ ಪ್ರಚಾರ ಮಾಡಿದರು.
ಇದೆಲ್ಲದರ ಪರಿಣಾಮ ಪಂಚ ರಾಜ್ಯ ಚುನಾವಣೆಯ ಹಿನ್ನಡೆಯೂ ಇವರಿಗೆ ಬಲ ಸಿಕ್ಕಂತಾಯ್ತು.
ಆದರೆ ಇಲ್ಲಿಗೇ ಮೋದಿ ಶಕ ಮುಗಿಯೋಲ್ಲ. ಒಂದು ಹಿನ್ನಡೆ ಹಲವು ಮುನ್ನಡೆಗೆ ಮೂಲವಾಗಬಹುದು ಮತ್ತು ಈ ವಿರೋಧಿಗಳ ಒಂದು ಮುನ್ನಡೆ ವಿನಾಶಕ್ಕೆ ನಾಂದಿಯೂ ಆಗಬಹುದು ಎಂಬುದು ಮುಂದಿನ ಲೋಕಸಭಾ ಚುನಾವಣೆಯು ನಿರ್ಧರಿಸಲಿದೆ. ಸತ್ಯವು ಯಾವಾಗಲೂ ಕಹಿಯೆ. ಆದರೆ ಸತ್ಯಾಂಶ ಗೊತ್ತಾಗುವುದು ಸ್ವಲ್ಪ ತಡ. ಸುಳ್ಳು ಬೇಗನೆ ಹರಡಬಹುದು. ಆದರೆ ಅಷ್ಟೇ ವೇಗದಲ್ಲಿ ವಿನಾಶವೂ ಆಗುತ್ತದೆ.
ಈಗ ಸತ್ಯದ ಯೋಗ ಬಂದಿದೆ. ಅದನ್ನು ಉಳಿಸಿಕೊಳ್ಳುವುದು ದೇಶದ ಪ್ರಜೆಗಳ ಕರ್ತವ್ಯ. ಇದನ್ನೇ ‘ಯೋಗಸ್ಯ ಪರಿರಕ್ಷಣಂ ಕ್ಷೇಮಃ’ ಎಂದು ಪ್ರಾಜ್ಞರು ಹೇಳಿದರು. ಏನೇ ಆಗಲಿ ವಿಧಿ ಲಿಖಿತವನ್ನು ತಪ್ಪಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ. ಅಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ 285 ಸ್ಥಾನಗಳೊಂದಿಗೆ ಬಿಜೆಪಿಯು ಮೋದಿಯವನ್ನೇ ಪ್ರಮುಖ ಪೀಠದಲ್ಲಿರಿಸಿ ಪ್ರಧಾನ ಮಂತ್ರಿಯನ್ನಾಗಿಸುವುದಂತೂ ಸತ್ಯ. ಎನ್‌ಡಿಎ ಕೂಟವು 325 ಸಂಖ್ಯಾ ಬಲದಲ್ಲಿ, ಕಾಂಗ್ರ‍್ರೆಸಿನ ನಿರ್ನಾಮ ಮಾಡುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ.
ಮೋದಿ ಮತ್ತೆ ಬಾರದಿದ್ದರೆ ಏನಾದೀತು ಎಂಬುದಕ್ಕೆ ಒಂದು ಪ್ರಧಾನ ಉದಾಹರಣೆ- ಅಸ್ಸಾಮಿನ ಭೋಗಿ ಬಿಲ್ಲ್ ಸೇತುವೆ. ದೇವೇಗೌಡರು ಶಿಲಾನ್ಯಾಸ(1997) ಮಾಡಿದ್ರೂ, 2002 ರಲ್ಲಿ ಅಟಲ್ ಜೀ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಿದ್ದರೂ ಮತ್ತೆ ಬಂದ ಯುಪಿಎ ಸರಕಾರದ ನಿರ್ಲಕ್ಷ್ಯದಿಂದ ಕಾಮಗಾರಿ ನಿಂತೇ ಹೋಯ್ತು. ಆದರೆ ಮೋದಿ ಬಂದ ಮೇಲೆ ಇದು 2018 ರ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು ಈ ನಾಲ್ಕು ಕಿಮೀ ಉದ್ದದ ಸೇತುವೆ ಉದ್ಘಾಟನೆ ಆಗಬೇಕಾಯ್ತು.
ಯಾಕೆ ಇಷ್ಟು ತಡವಾಯ್ತು? ಅಂದರೆ ಇದು ಕಾಂಗ್ರೆಸಿನ ಬೇಜವಬ್ದಾರಿ ಆಡಳಿತದ ಫಲ. ಒಂದು ವೇಳೆ ಅಟಲ್ ಜೀ ಮತ್ತೆ ಆಯ್ಕೆ ಆಗಿರುತ್ತಿದ್ದರೆ ಈಗ ಇದು ಹಳೆಯ ಸೇತುವೆ ಆಗಿರುತ್ತಿತ್ತು. ಜನ ಮತ್ತೆ ಅಟಲ್ ಜೀಯವರನ್ನು ಆಯ್ಕೆ ಮಾಡದ ಕಾರಣ ಹೀಗಾಗಿದೆ. ಇದೇ ರೀತಿ ಇನ್ನೂ ಅನೇಕ ಕೆಲಸಗಳು ಮೋದಿಯವರಿಂದ ಉದ್ಘಾಟನೆ ಆಗಲಿಕ್ಕಿದೆ. ಎಲ್ಲಾದರೂ ಮೋದಿಯವರು ಪ್ರಧಾನ ಮಂತ್ರಿ ಆಗದಿದ್ದರೆ ಮತ್ತೆ ಇದೇ ಹಳೇ ಚಾಳಿಗಳೇ ಮರುಕಳಿಸಬಹುದು. ಹಾಗಾಗಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತ್ತೆ ಮೋದಿ ಬರಲೇಬೇಕು.
ಲೇಖನ: ಪ್ರಕಾಶ್ ಅಮ್ಮಣ್ಣಾಯ
Discussion about this post