ನವದೆಹಲಿ: ಮೂಲತಃ ಕ್ರೀಡಾಪಟುವಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸದ್ಯ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕ್ರೀಡಾ ಸಚಿವರಾಗಿದ್ದಾರೆ. ರಾಜ್ಯವರ್ಧನ್ ಕ್ರೀಡಾ ಸಚಿವರಾದ ನಂತರ ಕ್ರೀಡಾಪಟುಗಳು ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಪ್ರಶಂಸನೀಯವಾದುದು. ಇಂತಹ ಸಚಿವರು ಇಂದು ಬಾಕ್ಸಿಂಗ್ ಮಾಡಿದ್ದಾರೆ. ಅದೂ ಮೇರಿ ಕೋಂ ಜೊತೆಯಲ್ಲಿ.
ಹೌದು.. ಇಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ವೇಳೆ ವಿಶ್ವ ಬಾಕ್ಸಿಂಗ್ ಕ್ರೀಡಾಪಟು ಮೇರಿ ಕೋಂ ಅವರನ್ನು ಸಚಿವರು ಭೇಟಿಯಾಗಿದ್ದಾರೆ. ಈ ವೇಳೆ ತಮ್ಮ ಕ್ರೀಡಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಸಚಿವರು.
#WATCH: Sports Minister Rajyavardhan Singh Rathore in a friendly boxing bout with boxing champion Mary Kom at Indira Gandhi Stadium in Delhi. pic.twitter.com/NXRaxqAkPQ
— ANI (@ANI) November 1, 2018
ಅಲ್ಲದೇ, ಮೋರಿ ಕೋಂ ಅವರೊಂದಿಗೆ ಆತ್ಮೀಯವಾಗಿ ಬಾಕ್ಸಿಂಗ್ ಪಟ್ಟುಗಳನ್ನು ಪ್ರದರ್ಶಿಸಿದ್ದಾರೆ. ಸಚಿವರ ಪಟ್ಟುಗಳಿಗೆ ಪ್ರತಿಯಾಗಿ ಪಟ್ಟುಗಳನ್ನು ನೀಡಿದ ಮೇರಿ ಕೋಂ ಅಂತಿಮವಾಗಿ ಸಚಿವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.
ಈ ಪ್ರಸಂಗ ಇಬ್ಬರು ಕ್ರೀಡಾಪಟುಗಳ ಅನ್ಯೋನ್ಯತೆಯನ್ನು ಪ್ರದರ್ಶಿಸಿದ್ದು, ಮಾತ್ರವಲ್ಲ, ಕೇಂದ್ರ ಸಚಿವರೊಬ್ಬರು ಕ್ರೀಡಾಪಟುಗಳೊಂದಿಗೆ ಆತ್ಮೀಯವಾಗಿ ಬೆರೆಯುವುದನ್ನು ತೆರೆದಿಟ್ಟಿದೆ.
Discussion about this post