ಕನ್ನಡ ರೋಮಾಂಚನವೀ ಕನ್ನಡ…
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ…
ಇವೆಲ್ಲವೂ ಕನ್ನಡ ಅಂದ ತಕ್ಷಣ ಅಪ್ಪಟ ಕನ್ನಡಿಗರಿಗೆ ನೆನಪಾಗುವಂತಹ ಹಾಡುಗಳು… ನಮ್ಮ ಕನ್ನಡನೆ ಹಾಗೇ ರೀ…, ಆ ಮೂರು ಅಕ್ಷರಗಳಲ್ಲಿ ಪ್ರೀತಿ, ಕಾಳಜಿ, ಸ್ನೇಹ, ವಿಶ್ವಾಸ ಎಲ್ಲ ಅಡಗಿದೆ.
ನಮ್ಮ ರಾಷ್ಟ್ರಭಾಷೆ ಹಿಂದಿ(Hindi)ಗಿಂತ ಮೊದಲೇ ನಮ್ಮ ಕನ್ನಡ ಸಂಸ್ಕೃತಿ ಇತ್ತು ಎಂದು ಹೇಳುವುದಕ್ಕೆ ಬಹಳ ಹೆಮ್ಮೆಯಾಗುತ್ತೇ, ಪ್ರತಿ ಒಬ್ಬರು ಇಷ್ಟ ಪಡುವಂತಹ ಆಮೃತ ಸಾಗರ ಈ ನಮ್ಮ ಕನ್ನಡ ಭಾಷೆ.
ಹೆಣ್ಣು ಮಕ್ಕಳು ಧರಿಸುವ ಅರಶಿನ ಕುಂಕುಮಯನ್ನೇ ಸೀರೆಯಾನ್ನಾಗಿಸಿ ನಿಂತಿರುವ ನಮ್ಮ ಭುವನೇಶ್ವರಿ’, ‘ನನ್ನನ್ನು ಮರೆಯದಿರಿ’ ಎಂದು ನೆನಪಿಸುವ ದಿನವೇ ಇಂದು ನಾವು ಆಚರಿಸುವ ಕನ್ನಡ ರಾಜ್ಯೋತ್ಸವ ಇಂದು.
ತನ್ನ ತವರಿನಲ್ಲಿಯೇ ಅನ್ಯರ ಭಾಷೆ ಮಧ್ಯೆ ಸಿಲುಕಿ ತಬ್ಬಲಿಯಾಗಿದೆ. ನಮ್ಮವರೇ ಐ ಡೋಂಟ್ ನೋ ಕನ್ನಡ ಅಂದಾಗ ಕನ್ನಡಿಗರ ಬಾಯಿಂದ ಇಂತಹ ಮಾತುಗಳನ್ನು ಕೇಳುವುದಕ್ಕೆ ಬಹಳ ಕಷ್ಟ.
ಅದೊಂದು ಸಂಜೆ, ಹೀಗೆ ಒಂದು ದಿನ ಮನೆಯ ಹೊರಗೆ ಅಕ್ಕಪಕ್ಕದ ಮನೆಯವರೆಲ್ಲಾ ಒಟ್ಟು ಸೇರಿ ಮಾತಾಡುತ್ತಾ ಕೂತಿದ್ವಿ. ಅಲ್ಲಿಗೆ ಬಂದ ಒಬ್ಬ ವ್ಯಕ್ತಿ ಮೇಡಂ ಈ ಅಡ್ರೆಸ್ ಎಲ್ಲಿ ಬರುತ್ತೆ? ಅಂತ ಇಂಗ್ಲೀಷ್ ಅಲ್ಲಿ ಕೇಳಿದ, ನೋಡೊದಕ್ಕೆ ಕನ್ನಡದವನ ಥರ ಇದ್ದಾನೆ. ಆದರೆ ಇಂಗ್ಲಿಷ್ ನಲ್ಲಿ ಯಾಕ್ ಕೇಳ್ತಿದಾನೆ, ಅಂದ್ಕೊಂಡು ಅವರ ಪ್ರಶ್ನೆಗೆ ಉತ್ತರಿಸಿದೆ. ಅವನಿಗೆ ಏನೋ ಉತ್ತರ ಸಿಕ್ಕು ಅದರೆ ನಂಗೆ, ಇವನು ಕನ್ನಡದವನು ಹೌದಾ ಅಥವಾ ಅಲ್ವಾ ಅನ್ನುವ ಗೊಂದಲದ ಜೊತೆಗೆ ಕೇಳಿಯೇ ಬಿಟ್ಟೆ.
ಸಾರ್ ನಿಮ್ಗೆ ಕನ್ನಡ ಬರೋಲ್ವಾ ಅಂತಾ?
ಅದಕ್ಕೆ ಆತ ಹುಂ ಸ್ವಲ್ಪ ಬರುತ್ತೆ.
ಮತ್ತೆ ನಾನು ನೀವು ಬೇರೆ ರಾಜ್ಯದವರ? ಅಂದಾಗ ಇಲ್ಲಾ ಮೇಂಡಮ್ ನಾವು ಮೂಲತಃ ಬೆಳಗಾವಿ, ನಾವು ಕನ್ನಡಿಗರು ಆದ್ರೆ ನಂಗೆ ಕನ್ನಡ ಬರೋದಿಲ್ಲ… ಬೇರೆ ಭಾಷೆ ಎಲ್ಲ ಬರುತ್ತೆ ಅನ್ನೋದ! ಅಷ್ಟಕ್ಕೆ ಸುಮ್ಮನಾಗದ ನಾನು ಮತ್ತೆ ಯಾಕೆ ಕನ್ನಡ ಭಾಷೆ ಬರೋದಿಲ್ಲ ಅಂತ ಕೇಳಿದಕ್ಕೆ ಅವನ ಉತ್ತರ ನೋಡಿ ಹೇಗ್ ಇದೇ ಅಂತಾ.
ಓದೋಕೆ ಬರುತ್ತೇ, ಮೇಡಮ್ ಬರಿಯೋದಕ್ಕೇ ಬರೋದಿಲ್ಲ. ನನಗೆ ಬೇರೆ ಭಾಷೆ ಸುಲಭ ಅಂದಾಗ, ನನ್ನ ಮನಸ್ಸಲ್ಲಿ ಅರೇ ಇವನಾರು ಗುರು! ಮಾತೃಭಾಷೆನಾ ಮರೆತು ಬೇರೆ ಭಾಷೆನೇ ಸುಲಭ ಅಂತಿದ್ದಾನಲ್ಲ ಶಿವಾ! ಅಂದುಕೊಂಡು ಸರಿ ನೀನು ಹೋಗಪ್ಪ ಅಂತ ಕಳುಹಿಸಿಕೊಟ್ಟೆ.
ಇದು ಬೆಂಗಳೂರಿನಲ್ಲಿ ಬರೀ ಒಬ್ಬರ ಕಥೆಯಲ್ಲ. ಇಲ್ಲೇ ಹುಟ್ಟಿ ಇಲ್ಲೇ ಬೆಳೆದು. ನನಗೆ ಕನ್ನಡ ಓದೋಕೆ ಬರುತ್ತೆ ಬರಿಯೋಕೆ ಬರಲ್ಲ, ಮಾತಾಡೋಕೆ ಬರಲ್ಲ ಅಂತ ಹೇಳುವ ಒಂದು ದೊಡ್ಡ ವರ್ಗವೇ ಇದೆ ಅಂತವರನ್ನು ನೋಡೋಕೆ ಬಹಳ ಕಷ್ಟ ಆಗುತ್ತೆ. ಇದನ್ನೆಲ್ಲಾ ನೋಡ್ದಾಗ ನಮ್ ದೇಶದ್ ಕಥೆ ಇಷ್ಟೇ ಕನ್ನಮ್ಮೋ ಅನ್ನೋ ಹಾಡು ನೆನಪಾಗುತ್ತೇ.
ಆದರೂ ಅಪ್ಪಟ ಕನ್ನಡಿಗರು ಇರೋ ತನಕ ಕನ್ನಡವನ್ನು ಅಳಿಯೋಕೆ ಬಿಡಲ್ಲ ಬಿಡಿ.
ಈ ಘಟನೆ ನಡೆದ ಎರಡು ದಿನಗಳ ನಂತರ ಸ್ವಾತಂತ್ರ ಉದ್ಯಾನವಕ್ಕೆ ಹೋಗಿದ್ದೆ. ಕಾಲೇಜಿಗೆ ಹತ್ತಿರ ಇದ್ದ ಕಾರಣಕ್ಕೆ ನಮ್ಮ ಸ್ನೇಹಿತರ ಅಡ್ಡ ಅದೇ ಆಗಿತ್ತು.
ಅಲ್ಲಿ ಕೂತು ಹರೆಟೆ ಹೊಡೆತಿದ್ವಿ. ಅದೇ ಸಮಯಕ್ಕೆ ನಾವು ಕೂತಿದ್ದ ಸ್ಥಳಕ್ಕೆ ಒಬ್ಬ ಫಾರಿನ್ ವ್ಯಕ್ತಿ ಬಂದು, ನಮಸ್ಕಾರ ಮೇಡಮ್, ನಮ್ದು ಒಂದು ಪೋಟೋ ತೆಗಿತೀರಾ? ಅಂದಾಗ ‘ಅವರ ಬಾಯಲ್ಲಿ ನಮ್ಮ ಕನ್ನಡ ಭಾಷೆ, ವ್ಹಾ ಎಂತ ಆನಂದ ಮನಸ್ಸಿನಲ್ಲಿ… ಹಾಗೆ ಒಂದ್ಸಲ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಎನ್ನುವ ಹಾಡು ಮನದಲ್ಲಿ ರಪ್ ಅಂತ ತೇಲಿ ಹೋದ ಹಾಗೆ ಆಯಿತು ನೋಡಿ.
ಅದೇ ಆಶ್ಚರ್ಯದಿಂದ ನಾನು, ಏನ್ ಸಾರ್ ನಿಮ್ಗೆ ಕನ್ನಡ ಬರುತ್ತಾ ಅಂದೆ. ಅದಕ್ಕೆ ಆತ ನಿಧಾನವಾಗಿ ನನಗೆ ಕನ್ನಡ ಬರುತ್ತೆ, ನನಗೆ ಕನ್ನಡ ಭಾಷೆ ತುಂಬಾ ಇಷ್ಟ, ನಿಮ್ಮ Culture, ನಿಮ್ಮ ನಾಡು ಆಹಾ! ಮತ್ತೆ ನಾನು ಮನಸ್ಸಿಂದ ಹೇಳ್ತಿದ್ದಿನೀ ಎಂದರು.
I PROUD To BE TALK ಕನ್ನಡ, ಮತ್ತೆ ನಮ್ಮ ದೇಶದಲ್ಲಿ ಕನ್ನಡಿಗರ ಸಂಘಗಳು ಇದೆ. ನಮಗೆ ಅಣ್ಣವ್ರಾ ಸಾಂಗ್ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು, ಮೆಟ್ಟಿದರೆ ಕನ್ನಡ ನೆಲದಲ್ಲಿ ಮೆಟ್ಟಬೇಕು… ಅನ್ನೋ ಹಾಡು ತುಂಬಾ ಇಷ್ಟ ಅಂದ್ರು… ಅಬ್ಬಾ! ಅಪ್ಪಟ್ಟ ಕನ್ನಡತಿಯಾದ ನನಗೆ ಒಬ್ಬ ವಿದೇಶಿ ವ್ಯಕ್ತಿಯ ಬಾಯಲ್ಲಿ ಇಂತಹ ಮಾತುಗಳನ್ನು ಕೇಳಿದಾಗ ಕರುನಾಡಿನಲ್ಲಿ ಹುಟ್ಟಿದ ನನ್ನ ಜನ್ಮ ಸಾರ್ಥಕವಾಯ್ತು ಅನ್ಕೊಂಡೆ.
ಯಾರೋ ಬೇರೆ ದೇಶದವ್ರು ನಮ್ಮ ಭಾಷೆಯನ್ನು ಇಷ್ಟೊಂದು ಪ್ರೀತಿಸಬೇಕಾದ್ರೆ, ಇನ್ನು ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ನಾವುಗಳು ನಮ್ಮ ಭಾಷೆಯನ್ನು ತಿಳಿದೋ ತಿಳಿಯದೆನೋ ತಬ್ಬಲಿ ಮಾಡ್ತಿದೀವಿ.
ಶೋಕಿಗೋಸ್ಕರ ಅಥವಾ ಒಂದು ದಿನಗೋಸ್ಕರ ಕನ್ನಡಿಗರಗಾಬೇಡಿ, ಪ್ರತಿ ಕ್ಷಣ, ಪ್ರತಿ ದಿನ ನಾವು ಕನ್ನಡಿಗರಾಬೇಕು. ನಮ್ಮ ಭಾಷೆಯನ್ನು ನಾವೇ ಬೆಳೆಸಿ, ಉಳಿಸಬೇಕು.
ನಾವು ಬದುಕುವುದಕ್ಕೆ ನೆಲ, ಜಲ, ಆಹಾರ, ಭಾಷೆ ಎಲ್ಲವನ್ನೂ ತಾಯಿ ಭುವನೇಶ್ವರಿ ನಮಗೆ ಕರುಣಿಸಿದ್ದಾಳೆ. ಆದರೆ ನಾವು ಆ ತಾಯಿಯನ್ನು ತಬ್ಬಲಿ ಮಾಡ್ತಿದೀವಿ, ಕನ್ನಡ ಬೆಳಸಿ ಕನ್ನಡ ಉಳಿಸಿ.
ತೊರೆಯದಿರು ನಿನ್ನ ಮಾತೃ ಭಾಷೆಯನ್ನು
ಇನ್ಯಾರು ಪ್ರೀತಿಸುವರು ಅವಳನ್ನು…
ಜೈ ಭುವನೇಶ್ವರಿ
ಬರಹ: ಮೋಕ್ಷ, ಬೆಂಗಳೂರು
Discussion about this post