ನವದೆಹಲಿ: ರಂಜಾನ್ ಮಾಸದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಲಾಗುತ್ತದೆ ಎಂಬ ವಿಚಾರಗಳಿಗೆ ತೆರೆ ಎಳೆದಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಕೂಟವನ್ನು ನಿರಾಕರಿಸಿದ್ದಾರೆ.
ಈ ವಿಚಾರದ ಕುರಿತಾಗಿ ರಾಷ್ಟ್ರದಾದ್ಯಂತ ತೀವ್ರ ಚರ್ಚೆಗಳು, ವಾದ ವಿವಾದಗಳು ನಡೆದಿದ್ದವು. ಆದರೆ, ಈ ವಿಚಾರಗಳ ಕುರಿತಾಗಿ ಸ್ಪಷ್ಟನೆ ನೀಡಿರುವ ರಾಷ್ಟ್ರಪತಿಗಳ ಮಾಧ್ಯಮ ಕಾರ್ಯದರ್ಶಿ ಅಶೋಕ್ ಮಲ್ಲಿಕ್, ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸುವ ವೇಳೆ, ರಾಷ್ಟ್ರಪತಿ ಭವನದಲ್ಲಿ ಯಾವುದೇ ರೀತಿಯ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಬೇಡ ಎಂದು ನಿರ್ಧರಿಸಿದ್ದರು. ಇದರಂತೆ, ಯಾವುದೇ ಧರ್ಮಗಳ ಹಬ್ಬಗಳನ್ನು ಆಚರಣೆ ಮಾಡಿಲ್ಲ. ಹೀಗಾಗಿ, ಇಫ್ತಾರ್ ಕೂಟವನ್ನೂ ಸಹ ಆಯೋಜನೆ ಮಾಡುವುದಿಲ್ಲ ಎಂದಿದ್ದಾರೆ.
ಈ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳು ಎಲ್ಲ ಧರ್ಮೀಯರ ಹಬ್ಬಗಳಿಗೂ ಅಧಿಕೃತವಾಗಿ ಶುಭ ಕೋರುತ್ತಾರೆ. ಆದರೆ, ಅದಕ್ಕೆಂದು ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಮಾಡಲು ಅವರು ಬಯಸುವುದಿಲ್ಲ ಎಂದಿದ್ದಾರೆ.
Discussion about this post