ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಸದ್ದಿಲ್ಲದೇ ತಂತ್ರಗಾರಿಕೆ ರೂಪಿಸಿ, ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ವಾಯುಸೇನೆಯ ತಾಕತ್ತು ಈಗ, ಭಾರತವೇ ಹೆಮ್ಮೆಯಿಂದ ಬೀಗುವಂತೆ ಮಾಡಿದೆ.
ದಾಳಿ ನಡೆಸಲು ಫೆ.15ರಿಂದಲೇ ಯೋಜನೆ ರೂಪಿಸಲಾಗಿತ್ತು. ಅಂತೆಯೇ, ವಾಯುಸೇನೆಯ ಮೂಲಕ ದಾಳಿ ನಡೆಸಬೇಕು ಎಂದು ನಿರ್ಧರಿಸಿದಾಕ್ಷಣ ಮುಖ್ಯ ವಿಚಾರ ಬಂದದ್ದು ಮಿರಾಜ್ 2000 ಯುದ್ಧ ವಿಮಾನ.
ಯೋಜನೆಯ ಕಾರ್ಯಗತಕ್ಕೆ ಮಿರಾಜ್ 2000 ಯುದ್ಧ ವಿಮಾನವನ್ನೆ ಬಳಸಬೇಕು ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದ ಸೇನೆ ಇದನ್ನು ಪ್ರಧಾನಿ ಸೇರಿದಂತೆ ಪ್ರಮುಖವೊಂದಿಗಿನ ಸಭೆಯಲ್ಲಿ ಅನುಮತಿಯನ್ನೂ ಸಹ ಪಡೆದುಕೊಂಡಿತು. ಅಷ್ಟಕ್ಕೂ ಸೇನೆಯಲ್ಲಿ ತರಹೇವಾರಿ ಯುದ್ಧ ವಿಮಾನಗಳಿರುವಾಗ ಈ ಮಿರಾಜ್ 2000 ಯುದ್ಧ ವಿಮಾನವನ್ನೆ ಆಯ್ಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ:
ಎಲ್ಲಾ ರೀತಿಯ ವಾತಾವರಣದಲ್ಲೂ ಪ್ರತಿಬಂಧಕ ಸಾಮರ್ಥ್ಯ ಹೊಂದಿರುವ ಮಿರಾಜ್-2000 ಫೈಟರ್ ಜೆಟ್, ಕಾರ್ಗಿಲ್ ಯುದ್ಧದ ವಿಜಯದಲ್ಲೂ ಮಹತ್ವದ ಪಾತ್ರ ಮಹತ್ವದ್ದು. ಥೇಲ್ಸ್ ಆರ್’ಡಿಎಕ್ಸ್ 2 ರೇಡಾರ್ ನ್ನು ಹೊಂದಿರುವ ಮಿರಾಜ್-2000 ಟಾರ್ಗೆಟ್’ನ್ನು ಸ್ವಯಂ ಚಾಲಿತವಾಗಿ ಟ್ರಾಕ್ ಮಾಡುವ ಸಾಮರ್ಥ್ಯ ಹೊಂದಿದೆ.
ಡಸಾಲ್ಟ್ ಏವಿಯೇಷನ್ ಬಹುಪಯೋಗಿ ಯುದ್ಧ ವಿಮಾನ ತಯಾರಿಕಾ ಕಂಪನಿಯಾಗಿದೆ. ಡಸಾಲ್ಟ್ ಏವಿಯೇಷನ್ ಫ್ರಾನ್ಸ್ ಮೂಲದ ಕಂಪನಿ. 1978ರಲ್ಲಿ ಮೊತ್ತ ಮೊದಲ ಯುದ್ಧ ವಿಮಾನಗಳನ್ನು ಇದು ಪರಿಚಯಿಸಿತ್ತು. 1984ರಲ್ಲಿ ಫ್ರಾನ್ಸ್ ವಾಯುಪಡೆ, ಯುಎಇ ವಾಯುಪಡೆ, ಚೀನಾ ವಾಯುಪಡೆ ಹಾಗೂ ಭಾರತದ ವಾಯುಪಡೆಗೆ ಮಿರಾಜ್ ಯುದ್ಧ ವಿಮಾನಗಳನ್ನು ಪೂರೈಸಿತ್ತು. ಭಾರತದ ಬಳಿ ಇದೀಗ ಆಧುನಿಕ(ಅಪ್ ಗ್ರೇಡ್) ಮಿರಾಜ್ 2000ಎಚ್, ಮಿರಾಜ್ 2000ಟಿಐ ಸೇರಿದಂತೆ ಒಟ್ಟು 50 ಮಿರಾಜ್ ಯುದ್ಧ ವಿಮಾನಗಳಿವೆ.
ಇದು ಮಿರಾಜ್ ಯುದ್ಧ ವಿಮಾನದ ತಾಕತ್ತು:
- ಕಾರ್ಗಿಲ್ ಯುದ್ಧದಲ್ಲಿ ಬಳಕೆಯಾಗಿತ್ತು ಈ ಮಿರಾಜ್ 2000
- 1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಮಿರಾಜ್ 2000 ಶತ್ರುಗಳ ಹೆಡೆಮುರಿ ಕಟ್ಟಿಹಾಕುವಲ್ಲಿ ಮಹತ್ವದ ಪಾತ್ರ
- ಹಿಮಾಲಯದ ತುತ್ತತುದಿಯಲ್ಲಿ ಮಿರಾಜ್ 2000 ಯುದ್ಧ ವಿಮಾನ ಕರಾರುವಕ್ಕು ದಾಳಿ ನಡೆಸಲು ವಾಯುಸೇನೆ ಯಶಸ್ವಿ
- ಮಿರಾಜ್ 2000 ಮೂಲಕ ಲೇಸರ್ ಗೈಡೆಡ್ ಬಾಂಬ್ ಗಳ ದಾಳಿ ಬಳಕೆಗೆ
ಡಸಾಲ್ಟ್ ಏವಿಯೇಷನ್ ಕಂಪನಿ ಮಿರಾಜ್ 2000ಸಿ, ಮಿರಾಜ್ 2000ಬಿ, ಮಿರಾಜ್ 2000ಎನ್, ಮಿರಾಜ್ 2000ಡಿ, ಮಿರಾಜ್ 2000 5ಎಫ್, ಮಿರಾಜ್ 5ಮಾರ್ಕ್ 2, ಮಿರಾಜ್ 2000ಇ, ಮಿರಾಜ್ ಬಿಆರ್, ಮಿರಾಜ್ 9ಹೀಗೆ ವಿವಿಧ ಶ್ರೇಣಿಯ ಯುದ್ಧ ವಿಮಾನ ತಯಾರಿಸಿತ್ತು.
ಭಾರತದ ಬಳಿ ಇದೀಗ ಆಧುನಿಕ(ಅಪ್ ಗ್ರೇಡ್) ಮಿರಾಜ್ 2000ಎಚ್, ಮಿರಾಜ್ 2000ಟಿಐ ಸೇರಿದಂತೆ ಒಟ್ಟು 50 ಮಿರಾಜ್ ಯುದ್ಧ ವಿಮಾನಗಳಿವೆ.
ಹೀಗಿರುತ್ತದೆ ಮಿರಾಜ್ 2000:
-
ಈ ವಿಮಾನದಲ್ಲಿ ಒಬ್ಬರೇ ಒಬ್ಬರು ಕ್ರ‍್ಯೂ(ಪೈಲಟ್) ಇರುತ್ತಾರೆ
-
ಉದ್ದ 14.36 ಮೀಟರ್ (47 ಅಡಿ ಉದ್ದ)
-
ರೆಕ್ಕೆಯ ಉದ್ದ 9.13 ಮೀಟರ್(29 ಅಡಿ ಅಗಲ)
-
ಸುಮಾರು 5,20 ಮೀಟರ್ ಎತ್ತರ
-
ರೆಕ್ಕೆಯ ವಿಸ್ತಾರ 41 ಮೀಟರ್
-
ವಿಮಾನದ (ಖಾಲಿ) ತೂಕ 7,500 ಕೆಜಿ
-
ಲೋಡೆಡ್ ವಿಮಾನದ ತೂಕ 13,800 ಕೆಜಿ
-
ಗರಿಷ್ಠ 2,336 ಕಿಲೋ ಮೀಟರ್ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ
-
1,550 ಕಿಲೋ ಮೀಟರ್ ದೂರದವರೆಗೆ ಬಾಂಬ್ ಹಾಕಬಲ್ಲ ಶಕ್ತಿ
-
56 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವ ತಾಕತ್ತು
ಇದೆಲ್ಲದರ ಜೊತೆಗೆ ಟಾರ್ಗೆಟ್’ಗಳನ್ನು ನಿಖರವಾಗಿ ಫಿಕ್ಸ್ ಮಾಡಲು ಹಿರೋನ್ ಸರ್ವೇಕ್ಷಣಾ ವಿಮಾನವೂ ಸಹ ಸಾಥ್ ನೀಡಿದೆ.
Discussion about this post