ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಳೆಯಿಂದಾಗಿ ಮನೆ ಕಳೆದುಕೊಂಡಿದ್ದ ನಮಗೆ ರಾಜ್ಯ ಸರ್ಕಾರ ನೀಡಿದ ನೆರವಿನಿಂದಾಗಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ಕಳೆದ ಸಾಲಿನಲ್ಲಿ ಮಳೆಯಿಂದಾಗಿ ಮನೆಯನ್ನು ಕಳೆದುಕೊಂಡಿದ್ದ ಹೊನ್ನವಿಲೆಯ ಮಂಜುಳ ಶಿವಪ್ಪ ಹೇಳಿದರು.
ಇಂದು ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ಡಿಜಿಟಲ್ ಸಂವಾದದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮಳೆಯಿಂದಾಗಿ ಮನೆಯನ್ನು ಕಳೆದುಕೊಂಡ ತಮಗೆ ಸಕಾಲದಲ್ಲಿ ಸರ್ಕಾರವು ನೀಡಿದ 5.00 ಲಕ್ಷ ರೂ.ಗಳ ಆರ್ಥಿಕ ನೆರವಿನಿಂದ ಸುಂದರವಾದ ಮನೆಯನ್ನು ಮರಳಿ ನಿರ್ಮಿಸಿಕೊಳ್ಳಲು ಸಾಧ್ಯವಾಯಿತು. ಈ ಯೋಜನೆಯನ್ನು ರೂಪಿಸಿ, ನೊಂದ ಬಡಜನರ ನೆಮ್ಮದಿಗೆ ಕಾರಣವಾದ ಸರ್ಕಾರವನ್ನು ಅಭಿನಂದಿಸುವುದಾಗಿ ತಿಳಿಸಿದರು.
Get In Touch With Us info@kalpa.news Whatsapp: 9481252093















