ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆಕಾಶದ ನೀಳಿಯಲ್ಲಿ… ಚಂದ್ರತಾರೆ ತೊಟ್ಟಿಲಲ್ಲಿ… ಬೆಳಕನಿಟ್ಟು ತೂಗಿದಾಕೆ… ನಿನಗೆ ಬೇರೆ ಹೆಸರು ಬೇಕೆ… ಸ್ತ್ರೀ ಅಂದರೆ ಅಷ್ಟೇ ಸಾಕೆ…
ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತದ್ದು, ಕನ್ನಡದಲ್ಲಿ ಈ ಪದಕ್ಕೆ ಹೆಣ್ಣು ಎಂಬ ಅರ್ಥವಿದೆ. ಒಂದು ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ.

ಸ್ತ್ರೀ ಎಂದರೆ ಕನಸೂ ಹೌದು, ವಾಸ್ತವವೂ ಹೌದು. ಹಾಗೆ ಪ್ರಕೃತಿಗೂ – ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಆಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ದಿಯ ಸಂಕೇತವೆಂದು ಪರಿಭಾವಿಸಲಾಗುವುದು ಎಂದರೆ ತಪ್ಪಿಲ್ಲ.

ಕೆಲವೊಮ್ಮೆ ಅನ್ಸುತ್ತೆ ಮಹಿಳೆಯರು ಇಲ್ಲದಿದ್ದರೆ ಈ ಪ್ರಪಂಚ ಹೇಗೆ ಸೃಷ್ಟಿಯಾಗುವುದಕ್ಕೆ ಸಾಧ್ಯವಾಗಿತ್ತು ಅಂತ ಯೋಚಿಸಬೇಕು ಅನ್ಸುತ್ತೆ?
ನಮಗೆಲ್ಲ ಸ್ವತಂತ್ರ ತಂದು ಕೊಟ್ಟವರು ಯಾರು ಎಂದರೆ ಬಹುಬೇಗನೆ ಗಾಂಧೀಜಿ ಅಂತ ಹೇಳ್ತೀವಿ ಅಲ್ವಾ. ಆದ್ರೆ ಹನ್ನೆರಡನೆಯ ಶತಮಾನದ ನಂತರ ಸಾಮೂಹಿಕವಾಗಿ ಮಹಿಳೆಯರು ಹೊರಬಂದು ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ದುಡಿದಂತೆ ಆಧುನಿಕ ಕಾಲದಲ್ಲಿ ಗಾಂಧೀಜಿಯ ಒತ್ತಾಸೆಯಿಂದಲೇ ಮಹಿಳೆಯರು ಮನೆಯ ಹೊಸಿಲು ದಾಟಿ ಹೊರಬಂದು ರಾಷ್ಟ್ರೀಯ ಚಳುವಳಿಗಳಲ್ಲಿ ತೊಡಗಿಸಿಕೊಳ್ಳುವಂತಾಯಿತೆಂಬುಹುದು ಹೆಮ್ಮೆಯ ವಿಷಯವೆಂದ್ರೆ ತಪ್ಪಾಗಲಾರದು.

ಮಹಿಳೆಯರಿಗೆ ಸ್ವಾತಂತ್ರ್ಯ ,ಪ್ರತಿನಿತ್ಯ ಹಾಗೂ ಸ್ವಾವಲಂಬಿಯಾಗಲು ಸಮಾಜ ಅವ್ರಿಗೆ ಅವಕಾಶ ಮಾಡಿಕೊಟ್ಟಿದಿಯಾ? ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಈಗಲೂ ನಮ್ಮ ಸಮಾಜದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಹೀಗೆ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಯ ಮೇಲೆ ಹಲವಾರು ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಏರುತ್ತ ಬಂದಿದೆ ಈ ನಮ್ಮ ಸಮಾಜ…!
ಸಾಮಾನ್ಯವಾಗಿ ಮಹಿಳೆಯರಿಗೆ ಸಮಾಜ ಗೌರವ ಕೊಡುವುದಿಲ್ಲ ಎಂಬುದನ್ನು ಹುಟ್ಟಿದಾಗಿನಿಂದ ನೋಡುತ್ತಾ ಬೆಳೆದಿರುತ್ತೇವೆ. ಮಹಿಳೆಯರು ದೊಡ್ಡ ಸಾಧನೆಗಳನ್ನೇನೂ ಮಾಡಿಲ್ಲ ಹಾಗೂ ಮಾಡಲಾರರು ಎಂಬಂತೆಯೇ ನಮ್ಮ ಸುತ್ತಲಿನ ಜನರು ಮಹಿಳೆಯರನ್ನು ನಡೆಸಿಕೊಳ್ಳುತ್ತಾರೆ. ಆದರೆ ಜಗತ್ತಿನಲ್ಲಿ ಅತಿ ಹೆಚ್ಚಿನ ಶ್ರಮ ದುಡಿಮೆ ಮಾಡುವವರು, ಅತಿ ಹೆಚ್ಚು ತಾಳಿಕೆಯ ಶಕ್ತಿ ಹೊಂದಿರುವವರು ಹಾಗೂ ನಿರಂತರವಾಗಿ ದುಡಿಯುತ್ತ ಇರುವವರು ಮಹಿಳೆಯರು. ಅಷ್ಟೇ ಅಲ್ಲ ನಾವೆಲ್ಲರೂ ಹೆಮ್ಮೆಪಡುವಂತಹ ಅನೇಕ ವಿಷಯಗಳನ್ನು ಮಹಿಳೆಯರು ಮಾಡಿದ್ದಾರೆ.
ಆದರೆ ಅವುಗಳನ್ನು ಗುರುತಿಸಿ ಗೌರವಿಸುವ ಕೆಲಸಗಳನ್ನು ಪುರುಷಪ್ರಧಾನವಾದ ಈ ಸಮಾಜ ಹೆಚ್ಚಾಗಿ ಮಾಡಿಲ್ಲ. ಇತ್ತೀಚಿಗಷ್ಟೇ ಅಂಥವರನ್ನು ಗುರುತಿಸಿ ದಾಖಲಿಸುವ ಕೆಲಸ ನಡೆಯುತ್ತಿದೆ. ಆದರೂ ಮಹಿಳೆಯರಿಗೆ ಯಾವುದೇ ರೀತಿಯ ಸಮಾನತೆ ಪ್ರತಿನಿತ್ಯ, ಸ್ವಾತಂತ್ರ್ಯ ದೊರೆಯುತ್ತಿಲ್ಲ ಎಂಬುವುದು ವಿಷದಕಾರವಾದ ಸಂಗತಿ.
ಜಾಗತೀಕರಣದಿಂದ ಮಹಿಳೆ ಅನೇಕ ಪ್ರಯೋಜನ ಪಡೆದಿದ್ದರೂ, ಶೋಷಣೆಯಿಂದ ಮಾತ್ರ ಮುಕ್ತವಾಗಿಲ್ಲ….!
ತನ್ನ ಸ್ವಂತ ಬೆಳಕಲ್ಲಿ ತನಗೆ ತಾನೇ ವಿನುಗುವ ಮೂಲಕ ತನ್ನ ಸ್ಥಾನವನ್ನು ತಾನೇ ದೊರಕಿಸಿಕೊಳ್ಳುತ್ತಾ ಹೋಗುತ್ತಾಳೆ. ಇಂಥ ಮಹಿಳೆಯರಿಗೊಂದು ಸಲಾಂ…!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post