No Result
View All Result
South Western Railway, Mysuru Division Hosts Inter Department Drama Competition
English Articles

South Western Railway, Mysuru Division Hosts Inter Department Drama Competition

by ಕಲ್ಪ ನ್ಯೂಸ್
May 16, 2026
0

Kalpa Media House  |  Bengaluru  | The South Western Railway, Mysuru Division, successfully organized the much-awaited Inter Department Drama Competition,...

Read moreDetails
PCCF Kumar Pushkar Warns Human Intolerance Fueling Biodiversity Crisis

PCCF Kumar Pushkar Warns Human Intolerance Fueling Biodiversity Crisis

May 15, 2026
Annual Disaster Management Mock Drill Conducted at Harihar Railway Station

Annual Disaster Management Mock Drill Conducted at Harihar Railway Station

May 14, 2026
AESL Launches Victory Batch at Rs 99 to support students appearing for RE-NEET

AESL Launches Victory Batch at Rs 99 to support students appearing for RE-NEET

May 13, 2026
Why The Hell Did You Make Manya Surve a Hero?: Sanjay Gupta Opens Up on Underworld Threats

Why The Hell Did You Make Manya Surve a Hero?: Sanjay Gupta Opens Up on Underworld Threats

May 13, 2026
  • Advertise With Us
  • Grievances
  • About Us
  • Contact Us
Monday, May 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಕೊಪ್ಪಳ: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್‌ನಲ್ಲಿ 50ನೇಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 8, 2021
in Small Bytes, ಕೊಪ್ಪಳ
0
ಕೊಪ್ಪಳ: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್‌ನಲ್ಲಿ 50ನೇಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕೊಪ್ಪಳ: ನಗರದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಮಾರ್ಚ್ 4ರಂದು ಆಡಳಿತ ಕಛೇರಿಯ ಮುಂಭಾಗ 50ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಅವರು ಸುರಕ್ಷತಾ ಧ್ವಜವನ್ನು ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.


1992ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮವಾಗಿ ಈ ಕಾರ್ಖಾನೆ ಪ್ರಾರಂಭಿಸಲಾಯಿತು. ಆರಂಭದಿಂದಲೂ ಸುರಕ್ಷತೆ, ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಗಮನ ಹರಿಸಿ, ಉತ್ಪಾದನೆ ಮಾಡುತ್ತ ಪ್ರತಿ ಹಂತದಲ್ಲಿ ಉನ್ನತ ಮಟ್ಟಕ್ಕೆ ಏರಿದೆ. ಅದರಂತೆ ಪ್ರತಿ ವರ್ಷ ಮಾರ್ಚ್ 4 ರಿಂದ 10 ರವರೆಗೆ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಮತ್ತು ಸಪ್ತಾಹ ಆಚರಣೆ ಮಾಡುತ್ತ ಬಂದಿದೆ ಎಂದು ಹೇಳಿದರು.

14 ವರ್ಷದಲ್ಲಿ ಗುಲ್ಬರ್ಗ ವಲಯ ಮತ್ತು ಬಳ್ಳಾರಿ ಕೊಪ್ಪಳ ವಲಯ ಸುರಕ್ಷತಾ ಸಮಿತಿಯ ಸಹಯೋಗದಿಂದ ವಲಯ ಮಟ್ಟದಲ್ಲಿ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗಿದೆ. ಒಂದು ವರ್ಷದಲ್ಲಿ ಅನುಭವಿಸಿದ ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಸರ್ಕಾರದ ಕಟ್ಟುನಿಟ್ಟಿನ ನಿಯಮ ನಿಬಂಧನೆಗಳನ್ನು ಅಳವಡಿಸಿ ಸುರಕ್ಷತೆ ಹೆಚ್ಚಾಗಿ ಗಮನಹರಿಸಲಾಗಿದ್ದು, 2006-07ನೇ ಸಾಲಿನಲ್ಲಿ ಮೆ. ಜಿಂದಾಲ್ ಕಾರ್ಖಾನೆಯ ಸಹಾಯದಿಂದ ಒಂದು ಬಾರಿ ರಾಜ್ಯ ಮಟ್ಟದ ಸುರಕ್ಷತಾ ದಿನಾಚರಣೆ ಆಚರಿಸಲಾಗಿದೆ. ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವುದು ಮತ್ತು ಕಾರ್ಖಾನೆಗಳಲ್ಲಿ ಅಪಘಾತವನ್ನು ತಗ್ಗಿಸಿ, ಶೂನ್ಯ ಅಪಘಾತಕ್ಕೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.


ಪ್ರತಿದಿನ ಸುರಕ್ಷತಾ ಪ್ರತಿಜ್ಞೆ, ಸುರಕ್ಷತಾ ಕಾರ್ಯಸ್ಥಾನದ ಬಗ್ಗೆ ಒಟ್ಟಾಗಿ ಸೇರಿ ಮಾತನಾಡುವುದು, ವಿಭಾಗಗಳಲ್ಲಿ ಅಸುರಕ್ಷಿತ ಕಾರ್ಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವುದು. ಹಿರಿಯ ಆಡಳಿತ ಅಧಿಕಾರಿಗಳ ಸಮೇತ ವಿಭಾಗಳ ವೀಕ್ಷಣೆ ಮಾಡಿ ಸುರಕ್ಷತೆ ಬಗ್ಗೆ ಸಲಹೆ ಪಡೆಯುವುದರ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ವಿವರಿಸಿದರು.

ಕಾರ್ಖಾನೆಯ ಉದ್ಯೋಗಿಗಳು, ಕಾರ್ಮಿಕರ ಸಹಕಾರದಿಂದ ಉತ್ತಮ ಸುರಕ್ಷತಾ ವಾತಾವರಣ ಹೊಂದಲು ಪ್ರತಿದಿನ ಪ್ರಯತ್ನ ಮಾಡಲಾಗುತ್ತಿದೆ. 2016 ಮತ್ತು 2018ನೇ ಸಾಲಿನಲ್ಲಿ ಎನ್‌ಎಸ್‌ಸಿ ಬೆಂಗಳೂರು ವತಿಯಿಂದ ಕಾರ್ಖಾನೆಗೆ ಉತ್ತಮ ಸುರಕ್ಷಾ ಪುರಸ್ಕಾರ ಪ್ರಶಸ್ತಿಯನ್ನು ನೀಡಲಾಗಿದ್ದು, ಅತ್ಯುತ್ತಮ ಸುರಕ್ಷಾ ಕಾರ್ಖಾನೆ ಪುರಸ್ಕಾರಕ್ಕಾಗಿ ಶ್ರಮಪಡಬೇಕಾಗಿದೆ ಮತ್ತು ಎಲ್ಲರ ಸಹಕಾರದಿಂದ ಮಾತ್ರ ಅಪಘಾತ ರಹಿತ ಕಂಪನಿಯಾಗಿ ಮುಂದುವರೆಯಲು ಸಾಧ್ಯವಾಗಿ ಎಂದರು.


ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹತ್ತಿರ ಇದ್ದ ವಿಎಸ್‌ಎಲ್ ಲಿಮಿಟೆಡ್ ಕಾರ್ಖಾನೆಯನ್ನು ಎರಡು ತಿಂಗಳ ಹಿಂದೆ ಸ್ವಾಧೀನ ಪಡಿಸಿಕೂಳ್ಳಲಾಗಿದೆ. ಈಗ ನಮ್ಮ ಕಾರ್ಖಾನೆ ಜೊತೆ ಆ ಕಾರ್ಖಾನೆಯನ್ನು 15 ದಿನಗಳ ಹಿಂದೆ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಿ ಉತ್ಪಾದನೆ ಪ್ರಾರಂಭಿಸಲಾಯಿತು. ಈ ಕಾರ್ಖಾನೆಯಿಂದ ಆ ಭಾಗದಲ್ಲಿ ಉತ್ತಮವಾದ ಕೆಲಸ ಮಾಡಲು ಅನುಕೂಲ ಸಿಕ್ಕಿದೆ. ಇದು ತಮ್ಮೆಲ್ಲಾರ ಸಹಕಾರದಿಂದ ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.

ಹಿರಿಯೂರು ಪ್ಲಾಂಟ್ ಕಾರ್ಖಾನೆಯಲ್ಲಿ ಸುರಕ್ಷತಾ ಅಧಿಕಾರಿಗಳನ್ನು ಹೆಚ್ಚಿಸಿ ಅವರ ಮಾರ್ಗದರ್ಶನದಿಂದ ತರಬೇತಿ, ಸುರಕ್ಷತಾ ಕಾರ್ಯಾಚರಣೆ ಮಾಡುವುದರ ಮೂಲಕ ಯಾವುದೇ ಅಪಘಾತ ಇಲ್ಲದೆ 9 ತಿಂಗಳಿನಿಂದ ಉತ್ಪಾದನೆ ನಿಲ್ಲಿಸಿದ್ದ ಕಾರ್ಖಾನೆಯನ್ನು ಪ್ರಾರಂಭಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹಾಗೂ ಪ್ರತಿಯೊಬ್ಬರು ಸಹ ಕೊವೀಡ್ ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದರು.

ಸುರಕ್ಷತಾ ಅಧಿಕಾರಿ ಮುರಳೀಧರ್ ನಾಡಿಗೇರ್ ಮಾತನಾಡಿ, ಸುರಕ್ಷತಾ ವರದಿಯನ್ನು ಎಲ್ಲರಿಗೂ ತಿಳಿಸಿದರು. ಕಾರ್ಖಾನೆಯು ಯಾವುದೇ ಅಪಘಾತ ಇಲ್ಲದೆ ಕೋಕ್ ಓವನ್ ಮತ್ತು ಹಿರಿಯೂರು ಪ್ಲಾಂಟ್‌ಗಳನ್ನು ಪ್ರಾರಂಭ ಮಾಡಲಾಗಿದೆ. ಪ್ರತಿ ಹಂತದಲ್ಲಿ ಕೋವಿಡ್ ಸುರಕ್ಷ ಕಟ್ಟುನಿಟ್ಟಿನ ನೀತಿಯನ್ನು ಜಾರಿಗೆ ಮಾಡಿ ಗಣನೀಯ ಸಾಧನೆಯನ್ನು ಮಾಡಲಾಗಿದೆ. ಸಕಾಲದಲ್ಲಿ ಪ್ರತಿದಿನ ಸುರಕ್ಷತಾ ತರಬೇತಿ ನೀಡಿ ಅಪಘಾತಗಳನ್ನು ತಡೆಯಲು ಪ್ರಯತ್ನ ನಡೆಸಲಾಗುತ್ತದೆ ಎಂದರು.

ವಿಭಾಗದ ಅಧಿಕಾರಿಗಳು ಮತ್ತು ಉದ್ಯೋಗಿಗಳ ಸಹಕಾರದಿಂದ ಪ್ರತಿ ತಿಂಗಳು ಸುರಕ್ಷತಾ ಅಣಕು ಪ್ರದರ್ಶನ ನಡೆಸುವುದರ ಮೂಲಕ ತಿಳುವಳಿಕೆಯನ್ನು ಹೆಚ್ಚಿಸಲಾಗುತ್ತಿದೆ. ಸುರಕ್ಷತಾ ಸಾಧನ ಸಾಮಾಗ್ರಿಗಳ ಬಳಕೆಯಲ್ಲಿ ಗಣನೀಯವಾಗಿ ಸಾಧನೆಯನ್ನು ಮಾಡಿದೆ. ಸುರಕ್ಷತೆಗೆ ಮೊದಲ ಆದ್ಯತೆಯ ಫಲವಾಗಿ ಕಾರ್ಖಾನೆಯಲ್ಲಿ ರಿಪೋರ್ಟಬಲ್ ಅಪಘಾತ ಶೂನ್ಯ ಪ್ರಮಾಣಕ್ಕೆ ಇಳಿಕೆಯಾಗಿದೆ. ಸುರಕ್ಷತಾ ಸಭೆಗಳನ್ನು ಪ್ರತಿ ತಿಂಗಳು ಸಭೆ ಆಯೋಜಿಸಿ, ಹೊಸ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ದಿನನಿತ್ಯ ಪ್ರತಿ ಶಿಪ್ಟ್‌ನಲ್ಲಿ ಸುರಕ್ಷತಾ ಪ್ರತಿಜ್ಞೆ ಮತ್ತು ಸುರಕ್ಷತೆ ಬಗ್ಗೆ ಮಾತನಾಡುವ ಹವ್ಯಾಸ ಹೆಚ್ಚಿಸಲಾಗಿದೆ. ಪ್ರತಿ ತಿಂಗಳು ಸುರಕ್ಷಾ ಆಡಿಟ್ ಮಾಡಿ ವರದಿ ಸಲ್ಲಿಸಿ, ಕಾರ್ಯ ಸ್ಥಳದಲ್ಲಿ ಉತ್ತಮ ಸುರಕ್ಷತಾ ವಾತಾವರಣ ಮೂಡಿಸಲಾಗಿದೆ. ಹೊಸದಾಗಿ ಅಗ್ನಿಶಾಮಕ ವಾಹನವನ್ನು ಖರೀದಿಸಿ ಬೆಂಕಿ ಅಪಘಾತ ತಡೆಯಲಾಗುತ್ತಿದೆ. ಎನ್‌ಎಸ್‌ಸಿ ಬೆಂಗಳೂರು ಇವರಿಂದ ಸುರಕ್ಷತಾ ಆಡಿಟ್ ಮಾಡಿಸಿ ಕ್ರಮಕೈಗೂಳ್ಳಲಾಗಿದೆ. 475 ದಿನದಿಂದ ಮಿಷನ್ ಶಾಪ್‌ನಲ್ಲಿ ಯಾವುದೇ ಅಪಘಾತ ಇಲ್ಲದೆ ಉತ್ಪಾದನೆ ಮಾಡಲಾಗಿದೆ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ಫೌಂಡ್ರಿ ವಿಭಾಗದ ಕೋರ್ ಶಾಪ್ ಹೆಚ್ಚಿನ ಅಪಘಾತಗಳು ಸಂಭವಿಸಿ ಸಮಸ್ಯೆಯಾಗಿತ್ತು. ನಂತರ ಅನೇಕ ಬದಲಾವಣೆ ಪ್ರತಿಫಲ ಈ ಸಾಲಿನಲ್ಲಿ ಕಳೆದ 3 ಕ್ವಾಟರ್‌ನಲ್ಲಿ ಅಪಘಾತ ರಹಿತ ಕೆಲಸ ಮಾಡಲಾಗಿದೆ. ಬಳ್ಳಾರಿ ಕೊಪ್ಪಳ ವಲಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಎಸ್‌ಹೆಚ್‌ಇ ವಾಟ್ಸಾಪ್ ಸಮೂಹ ಗುಂಪಿನಲ್ಲಿ ಸುರಕ್ಷತೆಗೆ ಆದ್ಯತೆ ಮತ್ತು ಗಣನೀಯ ಪ್ರಗತಿ ಕಾಣಲಾಗಿದೆ. ದಿನದಿಂದ ದಿನಕ್ಕೆ ರಸ್ತೆಗಳು, ಲೈಟಿಂಗ್, ಹೌಸ್ ಕೀಪಿಂಗ್ ವ್ಯವಸ್ಥೆ ಪ್ರಗತಿಯಿಂದ ಸುರಕ್ಷತೆಗೆ ವರದಾನವಾಗಿದೆ ಮತ್ತು ವಿಭಾಗಗಳಲ್ಲಿ ಸುರಕ್ಷತೆಗಾಗಿ ಹೊಸ ಹೊಸ ಯಂತ್ರಗಳು ಮತ್ತು ಉಪಕರಣಗಳ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಸಂಧರ್ಭದಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಉದ್ಯೋಗಿಗಳಿಗೆ ಬಹುಮಾನ ನೀಡಿದರು.

ಕಾರ್ಮಿಕರಿಗೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಮತ್ತು ಶಿಶಿಕ್ಷುಕರಿಗೆ ಉತ್ತಮ ಸುರಕ್ಷ ಪ್ರಶಸ್ತಿಗಳನ್ನು ನೀಡಲಾಯಿತು ಮತ್ತು ಮಸನವ ಸಂಪನ್ಮೂಲ ವಿಭಾಗದಿಂದ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಪ್ರಶಂಸಾಪತ್ರವನ್ನು ನೀಡಲಾಯಿತು.

ಕೊನೆಯಲ್ಲಿ ಸುರಕ್ಷತಾ ದಿನಾಚರಣೆಯಲ್ಲಿ ಭಾಗವಹಿಸಿದ ಎಲ್ಲಾರಿಗೂ ಸಿಹಿಯನ್ನು ಹಂಚಿ ಸಂತಸವನ್ನು ಹಂಚಿಕೂಳ್ಳಲಾಯಿತು. ಈ ಸಾಧನೆ ಸದಾಕಾಲವೂ ಮುಂದುವರೆದು ಶೂನ್ಯ ಅಪಘಾತ ತಲುಪಲು ಮುಂದುವರೆಯಬೇಕಾಗಿದೆ. ಸುರಕ್ಷತೆಯಿಂದ ಕಾರ್ಯ ನಿರ್ವಹಿಸಿ, ಮನೆಗೆ ಹಿಂದಿರುಗಿ ಎಂಬ ಘೋಷಣೆಯೊಂದಿಗೆ ಆಯೋಜಿಸಿದ ಸಮಾರಂಭ ಮುಕ್ತಾಯವಾಯಿತು. ಸುರಕ್ಷತಾ ವಿಭಾಗದ ಸೀನಿಯರ್ ಮ್ಯಾನೇಜರ್ ರವಿಕುಮಾರ್ ಅವರು ಸುರಕ್ಷತಾ ಪ್ರತಿಜ್ಞೆ ಮಾಡಿಸಿದರು.

ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷ ಪಿ.ನಾರಾಯಣ್, ಹಣಕಾಸು ವಿಭಾಗದ ಪ್ರೆಸಿಡೆಂಟ್ ಆರ್.ಎಸ್. ಶ್ರೀವತ್ಸನ್ ಮತ್ತು ಬೀಡು ಕಬ್ಬಿಣ ವಿಭಾಗದ ಹಿರಿಯ ಉಪಾಧ್ಯಕ್ಷ ಎಂ.ಜಿ. ನಾಗರಾಜ್ ಮತ್ತು ಹಿರಿಯ ಅಧಿಕಾರಿಗಳು, ಉದ್ಯೋಗಿಗಳು, ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

ವರದಿ: ಮುರಳಿಧರ್ ನಾಡಿಗೇರ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Bayaluseeme NewsBellaryKannada News Websitekirloskar ferrous industries limitedKoppalKoppalaLatest News Kannadaಉತ್ತರ ಕರ್ನಾಟಕಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ಕೊಪ್ಪಳಬಯಲುಸೀಮೆಸುದ್ಧಿಬಳ್ಳಾರಿ
Share197Tweet123Send
Previous Post

ನಿನಗೆ ಬೇರೆ ಹೆಸರು ಬೇಕೆ… ಸ್ತ್ರೀ ಅಂದರೆ ಅಷ್ಟೇ ಸಾಕೆ…

Next Post

ಅವೈಜ್ಞಾನಿಕ ಕಾಮಗಾರಿಯಿಂದ ಭವಿಷ್ಯದಲ್ಲಿ ತೊಂದರೆ: ಸರಿಪಡಿಸಲು ಕೋಟೆ ನಾಗರಿಕರ ಹಿತರಕ್ಷಣಾ ಸಮಿತಿ ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅವೈಜ್ಞಾನಿಕ ಕಾಮಗಾರಿಯಿಂದ ಭವಿಷ್ಯದಲ್ಲಿ ತೊಂದರೆ: ಸರಿಪಡಿಸಲು ಕೋಟೆ ನಾಗರಿಕರ ಹಿತರಕ್ಷಣಾ ಸಮಿತಿ ಮನವಿ

ಅವೈಜ್ಞಾನಿಕ ಕಾಮಗಾರಿಯಿಂದ ಭವಿಷ್ಯದಲ್ಲಿ ತೊಂದರೆ: ಸರಿಪಡಿಸಲು ಕೋಟೆ ನಾಗರಿಕರ ಹಿತರಕ್ಷಣಾ ಸಮಿತಿ ಮನವಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ನನ್ನ ಬಿಪಿ ನಾರ್ಮಲ್ ಆಯ್ತು, ಹಾಗಾಗಿ ಮಾತ್ರೆ ನಿಲ್ಲಿಸಿದೆ | ಜೀವಕ್ಕೆ ಕುತ್ತು | ಅಪಾಯಕಾರಿ ತಪ್ಪು ಕಲ್ಪನೆಗಳು

ನನ್ನ ಬಿಪಿ ನಾರ್ಮಲ್ ಆಯ್ತು, ಹಾಗಾಗಿ ಮಾತ್ರೆ ನಿಲ್ಲಿಸಿದೆ | ಜೀವಕ್ಕೆ ಕುತ್ತು | ಅಪಾಯಕಾರಿ ತಪ್ಪು ಕಲ್ಪನೆಗಳು

May 17, 2026
ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು | ಎಷ್ಟು ದಿನ? ಕಾರಣವೇನು?

ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲು ಡೇಟ್ ಫಿಕ್ಸ್ | ಯಾವತ್ತು? ಎಷ್ಟು ನೀರು? ಯಾರಿಗೆ ಪ್ರಯೋಜನ?

May 16, 2026
ಮಧ್ಯಪ್ರಾಚ್ಯದ ಉದ್ವಿಗ್ನತೆ | ಭಾರತದಲ್ಲಿ ಹಿಂಸಾಚಾರದ ಸಾಧ್ಯತೆ | ಎಲ್ಲ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ ಪತ್ರ

ಕೇಂದ್ರ ಗೃಹ ಇಲಾಖೆ ಭರ್ಜರಿ ಬೇಟೆ | 182 ಕೋಟಿ ರೂ ಮೌಲ್ಯದ ಜಿಹಾದಿ ಡ್ರಗ್ಸ್ ಸೀಜ್

May 16, 2026
ದೇಶ ಮೊದಲು ಎಂದು ಹೇಳಿಕೊಟ್ಟ ಪಕ್ಷ ಬಿಜೆಪಿ: ಬಿ.ವೈ. ವಿಜಯೇಂದ್ರ

ದೇಶ ಮೊದಲು ಎಂದು ಹೇಳಿಕೊಟ್ಟ ಪಕ್ಷ ಬಿಜೆಪಿ: ಬಿ.ವೈ. ವಿಜಯೇಂದ್ರ

May 16, 2026
ಕೊಪ್ಪಳ | 10ನೇ ವರ್ಷದ ಮಾವು ಮೇಳಕ್ಕೆ ಜನಸಾಗರ

ಕೊಪ್ಪಳ | 10ನೇ ವರ್ಷದ ಮಾವು ಮೇಳಕ್ಕೆ ಜನಸಾಗರ

May 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL