ಕಲ್ಪ ಮೀಡಿಯಾ ಹೌಸ್
ಕೋವಿಡ್ ಮೂರನೇ ಅಲೆ ಹಾಗೂ ಓಮಿಕ್ರಾನ್ ಹರಡುವ ಭೀತಿ ದೇಶದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ (ಮನೆಯಿಂದಲೇ ಕೆಲಸ ನಿರ್ವಹಣೆ) ಕೊಡುವ ಸಾಧ್ಯತೆಗಳ ಚಿಂತನೆಯೊಂದನ್ನು ಕೇಂದ್ರ ಸರ್ಕಾರ ನಡೆಸಿದೆ.
ಈ ಕುರಿತಂತೆ ಎಕಾನಾಮಿಕ್ಸ್ ಟೈಮ್ಸ್ ವರದಿ ಪ್ರಕಟಿಸಿದ್ದು, ಕಾನೂನು ಚೌಕಟ್ಟಿನ ಅಡಿಯಲ್ಲಿ ಇಂತಹ ಅವಕಾಶದ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಚಿಂತಿಸುತ್ತಿದ್ದು, ಇದು ಸಾಧ್ಯವಾದರೆ ಕೋವಿಡ್ ಹರಡುವಿಕೆ ತಡೆಯ ಜೊತೆಯಲ್ಲಿ ಸಿಬ್ಬಂದಿಗಳ ಆರೋಗ್ಯ ರಕ್ಷಣೆಯ ಸಾಧ್ಯವಾಗುತ್ತದೆ ಎಂಬುದು ಕೇಂದ್ರ ಚಿಂತನೆಯಾಗಿದೆ ಎಂದು ವರದಿಯಾಗಿದೆ.
ಒಂದು ವೇಳೆ ಸರ್ಕಾರಿ ನೌಕರರಿಗೆ ವರ್ಕ್ ಫ್ರಮ್ ಹೋಮ್ ಕೊಟ್ಟರೆ ಅಂತಹ ಸಿಬ್ಬಂದಿಗಳಿಗೆ ನಿಗಧಿತ ಕೆಲಸದ ಅವಧಿ, ವಿದ್ಯುತ್, ಇಂಟರ್‌ನೆಟ್ ಸೇರಿದಂತೆ ಇತರೆ ಕೆಲವು ಖರ್ಚು-ವೆಚ್ಚಗಳನ್ನು ಸಹ ಪಾವತಿಸುವ ಬಗ್ಗೆ ಚಿಂತನೆ ನಡೆದಿದೆ.
ಈ ಬಗ್ಗೆ ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ಎಕಾನಾಮಿಕ್ ಟೈಮ್ಸ್‌ಗೆ ಮಾತನಾಡಿದ್ದು, ಇಂಹದೊಂದು ಗಂಭೀರ ಚಿಂತನೆ ನಡೆದಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಾಗೂ ಇದು ಶೀಘ್ರದಲ್ಲೇ ಮುಗಿಯುವ ಲಕ್ಷಣಗಳು ಇಲ್ಲದ ಕಾರಣ ಇಂತಹ ಒಂದು ಚಿಂತನೆಯನ್ನು ನಡೆಸಲಾಗಿದೆ. ಇದಕ್ಕಾಗಿ ತಜ್ಞರ ಸಲಹೆಯಗಳನ್ನು ಪಡೆಯಲಾಗುತ್ತಿದ್ದು, ಇದು ಸಾಧ್ಯವಾದರೆ, ಭವಿಷ್ಯದಲ್ಲಿ ಇದೇ ನಿಯಮ ರೂಢಿಯಾದರೂ ಆಶ್ಚರ್ಯವಿಲ್ಲ ಎಂದಿದ್ದಾರೆ.
ವರದಿಯಂತೆ ಜನವರಿ ಅಂತ್ಯದ ವೇಳೆಗೆ ಈಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಸಿಬ್ಬಂದಿಗಳ ಅಭಿಪ್ರಾಯವನ್ನು ಸಹ ತೆಗೆದುಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post