ಭಾರೀ ನಿರೀಕ್ಷೆ ಹುಟ್ಟಿಸಿರುವ ನವರಸ ನಾಯಕ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರರಸಿಕ ಮನಗೆದ್ದಿದೆ.
ಯೂಟ್ಯೂಬ್’ನಲ್ಲಿ ಬಿಡುಗಡೆಯಾದ ನಂತರ ಪ್ರೀಮಿಯರ್ ಪದ್ಮಿನಿ ಕುರಿತಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಮೇಲ್ನೋಟಕ್ಕೆ ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮ ಕತೆ ಇರುವಂತೆ ಕಂಡರೂ, ಈಗಾಗಲೇ ಪ್ರೇಕ್ಷಕರಲ್ಲಿ ತುಂಬಾ ಕುತೂಹಲ ಹುಟ್ಟಿಸಿದೆ. ‘ಕೆಟ್ಟ ನೆನಪುಗಳು ಹೆಣ ಇದ್ದಂಗೆ ಅವನ್ನೆಲ್ಲ ಸುಟ್ಟುಬಿಡಬೇಕು’ ಎಂಬು ಟ್ರೇಲರ್’ನಲ್ಲಿರುವ ಒಂದು ಡೈಲಾಗ್ ನೆಟ್ಟಿಗರಲ್ಲಿ ಸಿಕ್ಕಾಪಟ್ಟೆ ಸೆಳೆದಿದೆ.
ಇನ್ನು, ನವರಸ ನಾಯಕ ಏರಿರುವ ಪ್ರೀಮಿಯರ್ ಪದ್ಮಿನಿ’ ಕಾರಿನ ಪಯಣದಲ್ಲಿ ತಮ್ಮೊಂದಿಗೆ ಖ್ಯಾತ ನಟಿ ಮಧುಬಾಲಾ ಮತ್ತು ಸುಧಾರಾಣಿ ಅವರನ್ನು ಕರೆದುಕೊಂಡು ಹೊರಟ್ಟಿದ್ದಾರೆ.
ಪ್ರೀಮಿಯರ್ ಪದ್ಮಿನಿ ಜಗ್ಗೇಶ್ ವೃತ್ತಿ ಜೀವನದಲ್ಲಿ ಒಂದು ವಿಶಿಷ್ಠ ಚಿತ್ರ ಎಂದು ಹೇಳಲಾಗಿದ್ದು, ಅವರು ಇದುವರೆಗೂ ನಟಿಸದೇ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಮತ್ತೊಂದು ವಿಶೇಷ.
ಚಿತ್ರಕ್ಕೆ ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದು, ಶೃತಿ ನಾಯ್ಡು ಬಂಡವಾಳ ಹಾಕಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಎಪ್ರಿಲ್ 25ರಂದು ಚಿತ್ರ ಬೆಳ್ಳಿತೆರೆಗೆ ಬರಲಿದೆ.
Discussion about this post