ಕಲ್ಪ ಮೀಡಿಯಾ ಹೌಸ್ | ಯಶವಂತಪುರ |
ಪ್ರಯಾಣಿಕರ ಸಾಮರ್ಥ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು, ಕೆಲವು ರೈಲುಗಳಿಗೆ ಶಾಶ್ವತವಾಗಿ ಬೋಗಿಗಳನ್ನು ಹೆಚ್ಚಿಸಲು ನಿರ್ಧರಿಸಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಪ್ರತಿ ರೈಲಿಗೂ ತಲಾ ಒಂದು ಎಸಿ 3-ಟೈರ್ ಬೋಗಿ, ಮೂರು ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು ಒಂದು ಸಾಮಾನ್ಯ ದರ್ಜೆಯ ಬೋಗಿಗಳನ್ನು ಸೇರಿಸಲಾಗುವುದು ಎಂದು ತಿಳಿಸಿದೆ.
16547/16548 ಸಂಖ್ಯೆಯ ಯಶವಂತಪುರ- ವಿಜಯಪುರ- ಯಶವಂತಪುರ Yashavanthapura-Vijayapura Train ದೈನಂದಿನ ಎಕ್ಸ್’ಪ್ರೆಸ್ ರೈಲುಗಳಿಗೆ ಐದು ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಇದರೊಂದಿಗೆ ರೈಲಿನ ಒಟ್ಟು ಬೋಗಿಗಳ ಸಂಖ್ಯೆ 13ರಿಂದ 18ಕ್ಕೆ ಏರಿಕೆಯಾಗಲಿದೆ.
ಪರಿಷ್ಕೃತ ಸಂಯೋಜನೆಯಲ್ಲಿ 2 ಎಸಿ 3-ಟೈರ್ ಬೋಗಿಗಳು, 7 ಸ್ಲೀಪರ್ ಕ್ಲಾಸ್ ಬೋಗಿಗಳು, 7 ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಮತ್ತು 2 ಎಸ್’ಎಲ್’ಆರ್ ಬೋಗಿಗಳು ಇರಲಿವೆ. ಈ ಪರಿಷ್ಕೃತ ಬದಲಾವಣೆಯು ಯಶವಂತಪುರದಿAದ ಮೇ 8, 2026 ಮತ್ತು ವಿಜಯಪುರದಿಂದ ಮೇ 9, 2026 ರಿಂದ ಜಾರಿಗೆ ಬರಲಿದೆ.
16545/16546 ಸಂಖ್ಯೆಯ ಯಶವಂತಪುರ- ಸಿಂಧನೂರು- ಯಶವಂತಪುರ ದೈನಂದಿನ ಎಕ್ಸ್’ಪ್ರೆಸ್ ರೈಲಿನ ಬೋಗಿಗಳ ಸಂಖ್ಯೆಯನ್ನು 13 ರಿಂದ 18ಕ್ಕೆ ಹೆಚ್ಚಿಸಲಾಗುವುದು.
ಇದರ ಪರಿಷ್ಕೃತ ಸಂಯೋಜನೆಯಲ್ಲಿ 2 ಎಸಿ 3-ಟೈರ್ ಬೋಗಿಗಳು, 7 ಸ್ಲೀಪರ್ ಕ್ಲಾಸ್ ಬೋಗಿಗಳು, 7 ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಮತ್ತು 2 ಎಸ್’ಎಲ್’ಆರ್ ಬೋಗಿಗಳು ಇರಲಿವೆ. ಈ ಪರಿಷ್ಕೃತ ವ್ಯವಸ್ಥೆಯು ಯಶವಂತಪುರದಿAದ ಮೇ 10, 2026 ಮತ್ತು ಸಿಂಧನೂರಿನಿAದ ಮೇ 11, 2026 ರಿಂದ ಜಾರಿಗೆ ಬರಲಿದೆ.
06517/06518 ಸಂಖ್ಯೆಯ ಯಶವಂತಪುರ- ಹಿಂದೂಪುರ- ಯಶವಂತಪುರ ಕಾಯ್ದಿರಿಸದ ವಿಶೇಷ ಎಕ್ಸ್’ಪ್ರೆಸ್ ರೈಲಿನ ಬೋಗಿಗಳ ಸಂಖ್ಯೆಯನ್ನು ಸಹ 13 ರಿಂದ 18ಕ್ಕೆ ಹೆಚ್ಚಿಸಲಾಗಿದೆ.
ಪರಿಷ್ಕೃತ ಸಂಯೋಜನೆಯಲ್ಲಿ 2 ಎಸಿ 3-ಟೈರ್ ಬೋಗಿಗಳು (ಬೀಗ ಹಾಕಿದ), 7 ಸ್ಲೀಪರ್ ಕ್ಲಾಸ್ ಬೋಗಿಗಳು, 7 ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಮತ್ತು 2 ಎಸ್’ಎಲ್’ಆರ್ ಬೋಗಿಗಳು ಇರಲಿವೆ. ಈ ಪರಿಷ್ಕೃತ ಸಂಯೋಜನೆಯು ಮೇ 10, 2026 ರಿಂದ ಯಶವಂತಪುರ ಮತ್ತು ಹಿಂದೂಪುರ ಎರಡೂ ಕಡೆಗಳಿಂದ ಜಾರಿಗೆ ಬರಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















