ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯಲ್ಲಾಪುರ: ಕಂಚನಹಳ್ಳಿಯಲ್ಲಿ ನಡೆಯುತ್ತಿರುವ ಜನಪ್ರಿಯ ಟ್ರಸ್ಟ್’ನ ಶ್ರೀ ಗೌರಿಶಂಕರ ಜ್ಞಾನ ವಿದ್ಯಾ ಗುರುಕುಲಮ್’ದಲ್ಲಿ ರಾಷ್ಟ್ರೀಯ ಶಿಕ್ಷಣ ದಿನ ಆಚರಣೆ ಜರುಗಿತು.
ವಿದ್ಯಾ ಮೇರು ಶಿಖರ, ಜ್ಞಾನ ನಿಧಿ, ಸರ್ವಗುಣ ಸಂಪನ್ನ ಎಸ್ ವ್ಯಾಸ ಯೂನಿವರ್ಸಿಟಿಯ ವಿಶ್ರಾಂತ ಉಪ ಕುಲಪತಿಗಳಾದ ಶ್ರೀರಾಮಚಂದ್ರ ಭಟ್ ಕೋಟೆ ಮನೆ ನೇತೃತ್ವದಲ್ಲಿ ಜರುಗಿತು. ಸಂಸ್ಥೆಯ ವಿದ್ಯಾರ್ಥಿಗಳಿಂದ ಆರಂಭವಾದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು.ರಾಮಚಂದ್ರ ಭಟ್ ಕೋಟೆ ಮನೆ ಅವರು ಮಾತನಾಡಿ, ವೇದ ಶಿಕ್ಷಣ ಆರೋಗ್ಯ ಸಮಕಾಲೀನ ಜೀವನ ಇವುಗಳ ಪ್ರಸ್ತುತತೆ ಅವಶ್ಯಕತೆಗಳ ಬಗ್ಗೆ ತಮ್ಮ ಅನುಭವ ವಿಚಾರವನ್ನು ತೆರೆದಿಟ್ಟರು. ಅದರೊಂದಿಗೆ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಅವರಿಗೆ ಗೌರವ ಅಭಿನಂದನೆಯನ್ನು ಟ್ರಸ್ಟ್’ನ ಸಂಸ್ಥಾಪಕರು ಹಾಗೂ ಹಾಲಿ ಅಧ್ಯಾಪಕರಾದ ಮಹೇಶ್ ಭಟ್ ಮತ್ತು ತಿಮ್ಮಣ್ಣ ಭಟ್ ಕಂಚನಹಳ್ಳಿ ಹಾಗೂ ಗೋಪಾಲಕೃಷ್ಣ ಭಟ್ ಕಂಚನಹಳ್ಳಿ ನೆರವೇರಿಸಿದರು. ಪತ್ರಕರ್ತರಾದ ನರಸಿಂಹ ಸಾತೊಡ್ಡಿ ಅವರು ಕಾರ್ಯಕ್ರಮ ಸಂಯೋಜನೆ ಮತ್ತ್ತು ವಂದನಾರ್ಪಣೆ ಸಲ್ಲಿಸಿದರು. ಜನಪ್ರಿಯ ಟ್ರಸ್ಟ್’ನ ಸಂಸ್ಥಾಪಕರಾದ ಶ್ರೀ ಮಹೇಶ್ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post