ನವದೆಹಲಿ: ನಾನು ಹಿಂದುಳಿದ ಜಾತಿಯ, ಬಡತಾಯಿಯ ಮಗ. ನಾನು ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಹೇಗೆ ನೋಡಲಿ.. ಇದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಂಸತ್‌ನಲ್ಲಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದ ಪರಿ..
ಪ್ರಧಾನಿ ಮೋದಿಯವರಿಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಮಾತನಾಡುವ ಧೈರ್ಯ ಇಲ್ಲ ಎಂದು ನಿನ್ನೆ ರಾಹುಲ್ ತಮ್ಮ ಭಾಷಣದ ವೇಳೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಭಾಷಣದ ವೇಳೆ ತಮ್ಮ ಮೊನಚಾದ ಮಾತುಗಳಿಂದ ರಾಹುಲ್‌ಗೆ ತಿವಿದ ಮೋದಿ, ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯವಿಲ್ಲ ಎಂದಿರಿ… ಹೌದು ಸ್ವಾಮಿ, ನಾನೊಬ್ಬ ಹಿಂದುಳಿದ ಜಾತಿಯ, ಬಡತಾಯಿಯ ಮಗ.. ಹೀಗಿರುವಾಗ ನಿಮ್ಮಂತರವ ಕೈಕುಲುಕುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ನಮ್ಮಿಂದ ಸಾಧ್ಯವೇ ಎಂದು ಕಾಂಗ್ರೆಸ್ ಮನಃಸ್ಥಿತಿಯನ್ನು ಕುಟುಕಿದರು.
ವೀಡಿಯೋ ನೋಡಿ:
ಇನ್ನು, ಹಾಗೆ ನೋಡಿದ ಸುಭಾಶ್ಚಂದ್ರ ಬೋಸ್, ಪಟೇಲ್, ಜೆ.ಪಿ. ಮೊರಾರ್ಜಿ, ಚರಣಸಿಂಗ್, ಚಂದ್ರಶೇಖರ್, ಪ್ರಣವ್ ಮುಖರ್ಜಿ ಇವರನ್ನು ನೆಹರು ಫ್ಯಾಮಿಲಿ ಏನ್ ಮಾಡಿದೆ ನಂಗೆ ಗೊತ್ತು!
ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿದವರಿಗೆ ನಿಮ್ಮ ಕುಟುಂಬ ಎಂತಹ ಪರಿಸ್ಥಿತಿಯನ್ನು ತಂದಿದೆ ಎಂದು ನನಗೆ ಗೊತ್ತು. ಹೀಗಿರುವಾಗ ನಾನು ಹೇಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಹೇಗೆ ನೋಡಲಿ..
ನಾನೊಬ್ಬ ಸಿದಾಸಾದಾ ಕಾಮ್ ದಾರ್, ನೀವು ಪ್ರತಿಷ್ಠಿತ ಕುಟುಂಬದ ಹೆಸರುಳ್ಳ ನಾಮ್ ದಾರ್… ಹೀಗಿರುವಾಗ ಹೇಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ ಎಂದಾಗ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸದಸ್ಯರು ಪೆಚ್ಚು ಮೋರೆ ಹಾಕಿಕೊಂಡಿದ್ದರು.
Discussion about this post