ಮಾನಗೇಡಿ, ಮತಿಗೇಡಿ ಕಾಂಗ್ರೆಸ್ ಪಕ್ಷ ತನ್ನ ಸದಸ್ಯರಿಗೆ ಕಲಿಸಿರುವ ಬುದ್ದಿ ಶತಮಾನ ಕಳೆದರೂ ಹೋಗುವುದಿಲ್ಲ ಎನಿಸುತ್ತದೆ. ತೀರಾ ಆಕ್ರೋಶದಿಂದಲೇ ಈ ವಿಚಾರವನ್ನು ಬರೆಯುತ್ತಿದ್ದೇನೆ.
ಇಡಿಯ ವಿಶ್ವಕ್ಕೇ ಅತ್ಯದ್ಬುತ ಸಂದೇಶ ಸಾರಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತವಾಗಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾಗಿದ್ದು, ಇವರ ಅಗಲಿಕೆಯ ನೋವು ಇಡಿಯ ರಾಜ್ಯವನ್ನು ದುಃಖದ ಮಡಿಲಿನಲ್ಲಿ ದೂಡಿದ್ದರೆ, ಇನ್ನೊಂದೆಡೆ ಈ ಸಂದರ್ಭವನ್ನೂ ಸಹ ಕಾಂಗ್ರೆಸ್ ತನ್ನ ರಾಜಕೀಯದ ತೀಟೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದು ನಿಜಕ್ಕೂ ಛೀಮಾರಿ ಹಾಕುವಂತಹ ವಿಚಾರ.
ಶ್ರೀಗಳ ಅಂತಿಮ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಆಗಮಿಸಬೇಕಿತ್ತು. ಆದರೆ, ಭದ್ರತಾ ಕಾರಣಗಳು ಹಾಗೂ ತಾವು ಆಗಮಿಸಿದರೆ ಭದ್ರತಾ ವ್ಯವಸ್ಥೆಯಿಂದ ಲಕ್ಷಾಂತರ ಜನರು ದರ್ಶನ ಪಡೆಯಲು ತೊಂದರೆಯಾಗಬಾರದು ಎಂಬ ಕಾರಣದಿಂದ ಆಗಮಿಸಲಿಲ್ಲ.
ಆದರೆ, ಇದನ್ನೇ ರಾಜಕೀಯ ಬಂಡವಾಳ ಮಾಡಿಕೊಂಡ ಡಿಸಿಎಂ ಪರಮೇಶ್ವರ್ ಅವರು, ಪ್ರಧಾನಿಯವರಿಗೆ ಉದ್ಯಮಿಗಳ ಮಕ್ಕಳ ಮದುವೆಗೆ ಹೋಗಲು, ಸಿನಿಮಾ ನಟರನ್ನು ಭೇಟಿ ಮಾಡಲು ಸಮಯವಿದೆ. ಆದರೆ, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಬರಲು ಸಮಯವಿಲ್ಲ ಎಂದು ಟೀಕಿಸಿದ್ದಾರೆ.
ಸ್ವಾಮಿ ಪರಮೇಶ್ವರ್ ಅವರೇ, ಯಾವಾಗ ಎಲ್ಲಿ ತೆರಳಬೇಕು, ತೆರಳಬಾರದು, ಯಾರನ್ನು ಹೇಗೆ ಗೌರವಿಸಬೇಕು ಎನ್ನುವುದನ್ನು ದೇಶಕ್ಕಾಗಿ ತಮ್ಮ ಕುಟುಂಬವನ್ನೇ ತೊರೆದು, ಆಶ್ರಮವಾಸಿಗಳ ಮಾರ್ಗದರ್ಶನದಲ್ಲಿ ಜೀವನ ಕಟ್ಟಿಕೊಂಡು, ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ನರೇಂದ್ರ ಮೋದಿಯವರು ಕಲಿಯಬೇಕಿಲ್ಲ.
ಮೊದಲು ನಿಮ್ಮ ತಟ್ಟೆಯಲ್ಲಿ ಸತ್ತು ಬಿದ್ದಿರುವ ಮುದಿ ಕತ್ತೆಯನ್ನು ನೋಡಿಕೊಳ್ಳಿ. ಪ್ರಧಾನಿ ಬರಲಿಲ್ಲ ಎಂದು ನೀವು ಮಾತನಾಡುತ್ತೀರಿ. ಕೆಲಸವಿಲ್ಲದೇ ಪಕ್ಷದ ಹೆಸರಿನಲ್ಲಿ ಊರೂರು ಸುತ್ತುತ್ತಿರುವ ನಿಮ್ಮ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾಗಾಂಧಿಯವರೂ ಸಹ ಶ್ರಿÃಗಳ ಅಂತಿಮ ದರ್ಶನಕ್ಕೆ ಬರಲಿಲ್ಲವಲ್ಲ. ಅವರಿಬ್ಬರಿಗೆ ಏನು ಬಡಿಕೊಂಡಿತ್ತು. ಅವರಿಬ್ಬರೂ ಯಾತಕ್ಕಾಗಿ ಬರಲಿಲ್ಲ ಎಂಬ ಸಮರ್ಥ ಕಾರಣವನ್ನು ನೀಡುವ ತಾಕತ್ತು ನಿಮಗಿದೆಯೇ? ನಿಮ್ಮ ಪಕ್ಷದ ಅಧ್ಯಕ್ಷರಿಗೆ ಹೇಳುವ ಗಂಡಸ್ತನ ನಿಮ್ಮ ಪಕ್ಷದಲ್ಲಿ ಯಾರಿಗೂ ಇಲ್ಲ. ಇಂತಹುದ್ದರಲ್ಲಿ ಪ್ರಧಾನಿಯವರ ಬಗ್ಗೆ ಮಾತನಾಡುತ್ತೀರಾ ನಿಮ್ಮ ನಾಲಿಗೆ ಚಪಲಕ್ಕೆ?
ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯವರು. ಅವರಿಗೆ ಅವರದ್ದೇ ಆದ ಅಧಿಕೃತ ಭದ್ರತಾ ವ್ಯವಸ್ಥೆಯಿರುತ್ತದೆ. ಪ್ರಧಾನಿಯವರು ಒಂದು ಸ್ಥಳಕ್ಕೆ ತೆರಳಲು ಇಚ್ಛೆಪಟ್ಟರೂ, ಭದ್ರತಾಧಿಕಾರಿಗಳು ಸಮ್ಮತಿ ಸೂಚಿಸದೇ ಇದ್ದರೆ ತೆರಳಲು ಸಾಧ್ಯವಿಲ್ಲ. ಅಲ್ಲದೇ, ಮೊನ್ನೆ ಸಿದ್ದಗಂಗಾ ಮಠಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ.
ಇಂತಹ ಸಂದರ್ಭದಲ್ಲಿ ಪ್ರಧಾನಿಯವರು ಆಗಮಿಸುವುದಾದರೆ ಇಡಿಯ ಪ್ರದೇಶದಲ್ಲಿ ವಿಶೇಷ ಭದ್ರತೆ ಕಲ್ಪಿಸಬೇಕಾಗುತ್ತದೆ. ಇದರಿಂದ ಲಕ್ಷಾಂತರ ಮಂದಿ ದರ್ಶನ ಪಡೆಯಲು ತೊಂದರೆಯಾಗುತ್ತದೆ. ಹೀಗಾಗಿ, ನಾನೊಬ್ಬ ಆಗಮಿಸುವುದರಿಂದ ಲಕ್ಷಾಂತರ ಮಂದಿಗೆ ತೊಂದರೆಯಾಗುವುದು ಬೇಡ ಎಂಬ ಕಾರಣದಿಂದ ಪ್ರಧಾನಿಯವರು ತಮ್ಮ ಆಗಮನವನ್ನು ಮೊಟಕುಗೊಳಿಸಿದ್ದಾರೆ.
ಹಾಗೆಯೇ, ಸುಮ್ಮನೆ ಯೋಚಿಸಿ… ಡಿಸಿಎಂ ಆಗಿ ನಿಮ್ಮ ಸಾಧನೆ ಏನು? ಡಿಸಿಎಂ ಆಗಿದ್ದೇ ಸಾಧನೆಯೋ? ಕೇವಲ ಡಿಸಿಎಂ ಆಗಿರುವ ನಿಮಗೇ ಹೋಗುವ ಮಾರ್ಗದಲ್ಲಿ ಝೀರೋ ಟ್ರಾಫಿಕ್ ಬೇಕು, ಹಿಂದೆ ಮುಂದೆ ಭದ್ರತೆ ಬೇಕು. ಆದರೆ, ಈ ದೇಶದ ಪ್ರಧಾನಿಯಾಗಿ ವಿಶ್ವದಲ್ಲೇ ಸಂಚಲನ ಮೂಡಿಸಿರುವ ಮೋದಿಯವರ ಭದ್ರತೆ ಕುರಿತಾಗಿ ಚಿಂತಿಸಬಾರದು ಅಲ್ಲವೇ?
ಡಿಸಿಎಂ ಹುದ್ದೆಯಲ್ಲಿ ಕುಳಿತು ಶ್ರೀಗಳ ಲಿಂಗೈಕ್ಯ ಸಮಯದಲ್ಲೂ ಸಹ ರಾಜಕೀಯ ಮಾತನಾಡುತ್ತೀರಿ ಎಂದರೆ ನಿಮ್ಮದು ಇನ್ನೆಂತಹ ನೀಚ ಸಂಸ್ಕಾರವಿರಬೇಕು. ನೀವು ರಾಜಕೀಯ ಮಾತನಾಡಿ ಏನೋ ಸಾಧನೆ ಮಾಡಿದ್ದೇನೆ ಎಂದುಕೊಂಡಿರಬಹುದು. ಆದರೆ, ಇದರಿಂದ ನಿಮ್ಮ ಮರ್ಯಾದೆಯನ್ನು ನೀವೇ ಹರಾಜು ಹಾಕಿಕೊಂಡಿದ್ದೀರೇ ವಿನಾ ಇದರಿಂದ ಪ್ರಧಾನಿಯವರ ವ್ಯಕ್ತಿತ್ವ ಹಾಗೂ ಘನತೆಗೆ ಯಾವುದೇ ಧಕ್ಕೆಯಿಲ್ಲ ಎಂಬುದನ್ನು ನೆನಪಿಡಿ…
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post