ಹೊಸನಗರ: ಗುಜರಾತ್ ನಲ್ಲಿ 3 ಬಾರಿಯೂ ಜಾತಿ ಹಣ ಬಲವಿಲ್ಲದೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಪ್ರಧಾನಿಯಾದ ನರೇಂದ್ರ ಮೋದಿಯವರು ಹಿಂದುಳಿದ ವರ್ಗದರು. ಆದರೆ ಸಿದ್ದರಾಮಯ್ಯ ನಾನು ಹಿಂದುಳಿದವರು ಅನ್ನುತ್ತಾರೆ. ಆದರೆ ನೀವು ಒಂದೇ ಬಾರಿ ಮುಖ್ಯಮಂತ್ರಿಯಾಗಿ ಈ ಬಾರಿ ಅಧಿಕಾರ ನಡೆಸದೆ ಜೆಡಿಎಸ್’ಗೆ ಬಿಟ್ಟು ಕೊಟ್ಟಿದ್ದೀರಿ ನಿಮಗೆ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಂಎಲ್’ಸಿ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದರು.
ಹೊಸನಗರದ ಮಾರುತಿಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಹಿಂದುಳಿದ ವರ್ಗದ ಮೋದಿ ಪ್ರಧಾನ ಮಂತ್ರಿಯಾಗಿದ್ದಾರೆ. ಇದನ್ನು ಸಹಿಸದ ಅರಗಿಸಿ ಕೊಳ್ಳಲಾಗದೆ ಸಿದ್ದರಾಮಯ್ಯ ಯಕ್ಷಗಾನ ಮಾಡುತ್ತಾರೆ ನಮ್ಮ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದು ಗುಡುಗಿದರು.
ಈ ದೇಶದಲ್ಲಿ ಬಡವರು ಇಷ್ಟಪಡುವ ವ್ಯಕ್ತಿ ನರೇಂದ್ರ ಮೋದಿ ಹಿಂದುಳಿದ ಒಬ್ಬ ಪ್ರಧಾನಮಂತ್ರಿಯಾಗುವುದು ತೋರಿಸಿಕೊಟ್ಟ ಈ ದೇಶದ ಹೆಮ್ಮೆಯ ಪುತ್ರ, ಭಾರತೀಯ ಜನತಾ ಪಕ್ಷದಲ್ಲಿ ಕಟ್ಟ ಕಡೆಯ ವ್ಯಕ್ತಿಯೂ, ಹಿಂದುಳಿದ ವ್ಯಕ್ತಿಯೂ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳುವುದು ಬಿಜೆಪಿಯ ಸಂಘಟನೆ ಬಲದಿಂದ, ಗುಜರಾತ್’ನಲ್ಲಿ 3 ಬಾರಿಯೂ ಜಾತಿ ಹಣ ಬಲವಿಲ್ಲದೆ ಮೂರು ಬಾರಿ ಮುಖ್ಯಮಂತ್ರಿಗಿ ಪ್ರಧಾನಿಯಾದ ಹಿಂದುಳಿದ ವರ್ಗದ ನರೇಂದ್ರ ಮೋದಿಯವರು. ಆದರೆ ಸಿದ್ದರಾಮಯ್ಯ ನಾನು ಹಿಂದುಳಿದವರು ಅನ್ನುತ್ತಾರೆ. ಆದರೆ ನೀವು ಒಂದೇ ಬಾರಿ ಮುಖ್ಯಮಂತ್ರಿಯಾಗಿ ಈ ಬಾರಿ ಅಧಿಕಾರ ನಡೆಸದೆ ಜೆಡಿಎಸ್ಸಿಗೆ ಬಿಟ್ಟು ಕೊಟ್ಟಿದ್ದೀರಿ ನಿಮಗೆ ನಾಚಿಕೆಯಾಗಬೇಕು ಎಂದರು.
ಅಪ್ಪ ಮಕ್ಕಳು, ಸೊಸೆಯಂದಿರುಗೋಸ್ಕರ ಇರುವ ಪಕ್ಷ ಜೆಡಿಎಸ್ ಪಕ್ಷಕ್ಕೆ ಮಂಡಿಯೂರಿ, ಜೆಡಿಎಸ್ ಕೈ ಚಾಚುವುದು ನೋಡಿದರೆ ನೀವೆಷ್ಟು ಪ್ರಾಮಾಣಿಕರು ಎಂದು ಇದರಲ್ಲಿ ಗೊತ್ತಾಗುತ್ತೆ. ಸೈನ್ಯಕ್ಕೆ ಸೇರುವವರು ಊಟಕ್ಕೆ ಗತಿ ಇಲ್ಲದವರು ಎಂದು ಹೇಳುವ ಜೆಡಿಎಸ್’ರವರ ಹೇಳಿಕೆ, ವರ್ತನೆಗೆ ಈ ಬಾರಿ ಚುನಾವಣೆಯಲ್ಲಿ ಜನತೆ ಸರಿಯಾದ ಪಾಠವನ್ನೇ ಕರೆಸಿದ್ದಾರೆ ಎಂದರು.
ಈ ದೇಶದಲ್ಲಿ ಯುವ ಸಮೂಹ ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಆಗಬೇಕು ಎಂದು ಹೊರಟಿದೆ ದೇಶದಲ್ಲಿ ಮೋದಿ ಅಲೆ ಬಿಜೆಪಿಯ ಅಲೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೊಚ್ಚಿ ಹೋಗಲಿದೆ ಎಂದರು.
ಮೋದಿ ಅವರನ್ನು ಪ್ರಧಾನಿ ಮಾಡಲು ಬಿ.ವೈ. ರಾಘವೇಂದ್ರ ಅವರ ಕಮಲದ ಗುರುತಿಗೆ ಮತವನ್ನು ನೀಡಿ ಅತ್ಯಂತ ಪ್ರಚಂಡ ಮತದಿಂದ ಗೆಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ. ಸ್ವಾಮಿರಾವ್ ತಾಲೂಕಿನ ಬಿಜೆಪಿ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ್, ಉಮೇಶ್ ಕಂಚಿಗಾರ .ಬಿ ಯುವರಾಜ್, ದೇವಾನಂದ್ ಹಾಜರಿದ್ದರು.
Discussion about this post