ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಸಾಕಷ್ಟು ಮಂದಿ ಕೈ ಜೋಡಿಸಿದ್ದಾರೆ. ಉದ್ಯಮಿಗಳು, ಟ್ರಸ್ಟ್’ಗಳು ಸೇರಿದಂತೆ ಎಲ್ಲ ಚಿತ್ರರಂಗದ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಖಾಸಗಿ ಯುವ ಉದ್ಯಮಿಗಳು ಹೊರತಾಗಿಲ್ಲ.
ಮಾಜಿ ಸಂಸದ ಹಾಗೂ ಕೆಪಿಸಿಸಿ ಹಿರಿಯ ಮುಂಖಡರಾದ ಕಾಗಲವಾಡಿ ಶಿವಣ್ಣ ಅವರ ಪುತ್ರಿ ಖಾಸಗಿ ಉದ್ಯಮಿ ಅಪೂರ್ವರವರು ಸಹ ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಉದ್ಯಮಿ ಅಪೂರ್ವ ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ದೇಣಿಯ ಚೆಕ್ ಹಸ್ತಾಂತರಿಸಿದ್ದಾರೆ.
ಆನಂತರ ಮಾತನಾಡಿರುವ ಅಪೂರ್ವ, ವಿಶ್ವದೆಲ್ಲೆಡೆ ಕೊರೋನಾ ವೈರಸ್ ಕರಾಳ ನರ್ತನ ಮಾಡುತ್ತಿದೆ. ಇದಕ್ಕೆ ಭಾರತದಲ್ಲೂ ಜನರು ಬಲಿಯಾಗುತ್ತಿದ್ದಾರೆ. ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಈ ವೈರಸ್‌ನಿಂದ ಸೋಂಕು ಹರಡಬಾರದು ಹಾಗೂ ರಾಜ್ಯದ ಜನತೆಯಲ್ಲಿ ಜಾಗೃತಿ ಮಾಡಿಸಬೇಕು ಎಂದಿದ್ದಾರೆ.
Get in Touch With Us info@kalpa.news Whatsapp: 9481252093
















