ಬೆಳಗಾವಿ: ನರೇಂದ್ರ ಮೋದಿ ಪ್ರಧಾನಿಯಾದ ನಂತದ ದೇಶವಾಸಿಗಳಲ್ಲಿ ಭದ್ರತೆ ಹಾಗೂ ನೆಮ್ಮದಿ ಭರವಸೆ ಮೂಡಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿದ್ದು, ಇದಕ್ಕೆ ಬೆಳಗಾವಿ ಜಿಲ್ಲೆಯ ರೈತನೊಬ್ಬನ ಘಟನೆ ಸಾಕ್ಷಿಯಾಗಿದೆ.
ಸಹಾಯ ಕೇಳಿ ಪ್ರಧಾನಿಯವರಿಗೆ ಪತ್ರ ಬರೆದಿದ್ದ 25 ವರ್ಷದ ಯುವ ರೈತನಿಗೆ ಶಾಖ್ ಆಗಿದ್ದು, ಆತನ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದ್ದು, ಪ್ರಧಾನಿಯವರ ಖಾಳಜಿ ಮತ್ತೊಮ್ಮೆ ದಾಖಲಾಗಿದೆ.
ಅದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು ಎಂಬ ಗ್ರಾಮ… ಅಲ್ಲೊಬ್ಬ 25 ವರ್ಷದ ಯುವ ರೈತ ರಾಹುಲ್ ಬೆಕನಾಲಕರ್… ಮೂರು ಎಕರೆ ಜಮೀನು ಹೊಂದಿರುವ ರಾಹುಲ್ ಸಾಕಿದ್ದ ಹಸು ಕರು ಹಾಕುವ ವೇಳೆ ಹಸು ಹಾಗೂ ಕರು ಎರಡೂ ಮೃತಪಟ್ಟಿತ್ತು. ಅವರ ಗ್ರಾಮದಲ್ಲಿ ಪಶು ವೈದ್ಯಕೀಯ ಸಹಾಯವಿದ್ದರ ಕಾರಣದಿಂದಲೇ ಈ ಜಾನುವಾರುಗಳು ಸಾವನ್ನಪ್ಪಿದ್ದವು.
ಈ ಹಿನ್ನೆಲೆಯಲ್ಲಿ ಸಹಾಯ ಕೋರಿ ಪ್ರಧಾನಿಯವರಿಗೆ ಪತ್ರ ಬರೆಯಲು ನಿರ್ಧರಿಸಿದ ರಾಹುಲ್ ಸವಿವರವಾಗಿ ಪತ್ರ ಬರೆದರು.
ಮುರಗೋಡು ಸವದತ್ತಿ ತಾಲೂಕಿನಲ್ಲಿದ್ದು, ಆದರೆ ಪಶು ಸಂಗೋಪನಾ ಚಿಕಿತ್ಸೆ ಘಟಕ ಬೈಲಹೊಂಗಲದಲ್ಲಿದೆ. ಅಲ್ಲಿಂದ ವೈದ್ಯರು ಬಂದು ಚಿಕಿತ್ಸೆ ನೀಡಬೇಕಾದರೇ ಪ್ರತಿ ಬಾರಿಗೆ 5 ರಿಂದ 6 ಸಾವಿರ ರೂ. ಪಡೆಯುತ್ತಾರೆ. ಇದು ನಮ್ಮಂತವರಿಗೆ ಕಷ್ಟಕರವಾಗಿದೆ.
ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದ ಕಾರಣ ನನ್ನ ಹಸು ಹಾಗೂ ಕರು ಮೃತಪಟ್ಟವು. ನಮ್ಮ ಗ್ರಾಮದಲ್ಲಿ ನನ್ನಂತೆಯೇ ಬಹಳಷ್ಟು ಮಂದಿ ಹಸುಗಳನ್ನು ಸಾಕಿದ್ದಾರೆ. ತುರ್ತು ಪರಿಸ್ಥಿತಿಗಳಲ್ಲಿ ಹಸುವಿನ ಮಾಲೀಕರಿಗೆ ತೊಂದರೆಯಾಗುತ್ತಿದೆ.
2008ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಮ್ಮ ತಂದೆ ನಿಧನರಾಗಿದ್ದು, ಇದ್ದ ಹಸುವಿನಿಂದಾಗಿ ನಮ್ಮ ಜೀವನ ನಡೆಯುತ್ತಿತ್ತು. ಆದರೆ, ವೈದ್ಯಕೀಯ ಸಹಾಯವಿಲ್ಲದ್ದರಿಂದ ನಮ್ಮ ಹಸು ಹಾಗೂ ಕರು ಮೃತಪಟ್ಟಿದೆ. ಹೀಗಾಗಿ, ಈಗ ನಮ್ಮ ಜೀವನ ನಡೆಸುವುದು ಕಷ್ಟಕರವಾಗಿದೆ. ತಾನು ಬಿಕಾಂ ಓದುತ್ತಿದ್ದು, ಪ್ರತಿದಿನ ಕಾಲೇಜಿಗೆ ತೆರಳಲು 60 ಕಿಮೀ ಪ್ರಯಾಣ ಮಾಡಬೇಕು ಎಂದು ಪತ್ರದಲ್ಲಿ ವಿವರಿಸಿದ್ದರು.
ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿ, ನಮ್ಮ ಊರಿನಲ್ಲೇ ಪಶು ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸಲು ತಾವು ಮಧ್ಯಪ್ರವೇಶ ಮಾಡಬೇಕು ಎಂದು ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ರಾಹುಲ್ ಮನವಿ ಮಾಡಿದ್ದರು.
ಇದಾದ ಕೆಲವು ದಿನಗಳ ನಂತರ ಪಶು ಸಂಗೋಪನಾ ಇಲಾಖೆ ಬೆಂಗಳೂರು ಕಚೇರಿ ಅಧಿಕಾರಿಗಳಿಂದ ರಾಹುಲ್‌ಗೆ ದೂರವಾಣಿ ಕರೆ ಬರುತ್ತದೆ. ನೀವು ನಿಮ್ಮ ಹಸು ಹಾಗೂ ಕರು ಮೃತವಾದ ಬಗ್ಗೆ ಯಾವುದಾದರೂ ದೂರು ದಾಖಲಿಸಿದ್ದೀರಾ? ನಮಗೆ ಉನ್ನತಾಧಿಕಾರಿಗಳಿಂದ ತೀವ್ರ ಒತ್ತಡವಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ ಎಂದಾಗ ಅಧಿಕಾರಿ ವರ್ಗ ಆಶ್ಚರ್ಯಗೊಂಡಿದೆ.
ಉನ್ನತಾಧಿಕಾರಿಗಳ ಒತ್ತಡದ ಹಿನ್ನೆಲೆಯಲ್ಲಿ ಪಶುಭಾಗ್ಯ ಯೋಜನೆ, ಕೇಂದ್ರ ಸರ್ಕಾರದ ಯೋಜನೆಯ ಕುರಿತಾಗಿ ರಾಹುಲ್‌ಗೆ ಅಧಿಕಾರಿಗಳು ವಿವರಿಸಿ, ಸಮಸ್ಯೆಯನ್ನೂ ಆಲಿಸಿದ್ದಾರೆ.
ಪ್ರಮುಖವಾಗಿ, ರಾಹುಲ್‌ಗೆ ಈಗ ಆಗಿರುವ ನಷ್ಟಕ್ಕೆ ಪರಿಹಾರ ನೀಡುವ ಜೊತೆಯಲ್ಲಿ ಶೀಘ್ರ ಅವರ ಊರಿನಲ್ಲಿ ಪಶು ಚಿಕಿತ್ಸಾಲಯ ಸ್ಥಾಪಿಸುವ ಕುರಿತಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನಿಜಕ್ಕೂ ಪ್ರಧಾನಿ ಮೋದಿ ಜನನಾಯಕ ಎನ್ನುವುದಕ್ಕೆ ಈ ನಿದರ್ಶನ ಸಾಕ್ಷಿ. ತಮ್ಮ ಸಮಸ್ಯೆ ಹೇಳಿಕೊಳ್ಳುವ ಕಟ್ಟ ಕಡೆಯ ವ್ಯಕ್ತಿಗೂ ಸಹ ಸಹಾಯ ಮಾಡುವ ಮೂಲಕ ತಾವೊಬ್ಬ ಪ್ರಧಾನ ಸೇವಕ ಎನ್ನುವುದನ್ನು ಮೋದಿ ಸಾಬೀತು ಮಾಡಿದ್ದಾರೆ.
Discussion about this post