ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ಪ್ರಜಾವಾಣಿ, ವಿಜಯವಾಣಿ, ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದ ಉತ್ಸಾಹಿ ಪತ್ರಕರ್ತ ಪವನ್ ಹೆತ್ತೂರು (35) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಮೈಸೂರು ಪ್ರಜಾವಾಣಿ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್, ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ.
ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪವನ್’ಗೆ ಆರೋಗ್ಯ ಗಂಭೀರವಾಗಿ, ಚಿಕಿತ್ಸೆಗೆ ಸ್ಪಂಧಿಸಲಿಲ್ಲ. ರಾತ್ರಿ 1.30 ಸುಮಾರಿಗೆ ಕೊನೆಯುಸಿರೆಳೆದರು. ಪವನ್ ಬದುಕಿ ಬರಲೆಂದು ಪ್ರಾರ್ಥಿಸಿದ್ದು ಪ್ರಯೋಜನವಾಗಲಿಲ್ಲ.
ಮೃತರ ಅಂತ್ಯಕ್ರಿಯೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post