Read - < 1 minute
ಬೆಂಗಳೂರು, ಸೆ.27: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿವಮೊಗ್ಗ ಸಾಂಸದ ಬಿ.ಎಸ್. ಯಡಿಯೂರಪ್ಪ ಮಾತಾ ಅಮೃತಾನಂದಮಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಮಾತಾ ಅಮೃತಾನಂದಮಯಿ ಅವರ ಜನ್ಮದಿನಕ್ಕೆ ಶುಭಾಶಯ ಕೋರಿದ ಯಡಿಯೂರಪ್ಪ, ಜನಸೇವೆ ಮಾಡಲು ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಈ ವೇಳೆ ಮಾತನಾಡಿರುವ ಬಿಎಸ್‌ವೈ, ಶ್ರೀ ಮಾತಾ ಅಮೃತಾನಂದ ಮಯಿ ಅವರ ಧಾರ್ಮಿಕ ಹಾಗೂ ಅಧ್ಯಾತ್ಮಿಕ ಕ್ಷೇತ್ರದ ಸೇವೆ ಹಾಗೂ ಕೊಡುಗೆಗಳನ್ನುಕೊಂಡಾಡಿದರು.
Discussion about this post