Read - < 1 minute
ಇಸ್ಲಾಮಾಬಾದ್:ಸೆ: 24:ಜಮ್ಮು-ಕಾಶ್ಮಿರದ ಉರಿ ಉಗ್ರರ ದಾಳಿ ಹಿನ್ನಲೆಯಲ್ಲಿ ದಾಳಿ ಖಂಡಿಸಿದ ರಷ್ಯಾ, ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸವನ್ನು ರದ್ದುಗೊಳಿಸಿದೆ ಎಂದು ಹೇಳಲಾಗಿತ್ತು. ಆದರೆ ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸ ಮಾಡಲು ರಷ್ಯಾದ ಸೇನಾ ಸಿಬ್ಬಂದಿಗಳು ಪಾಕಿಸ್ತಾನಕ್ಕೆ ಬಂದಿಳಿದಿದ್ದು, ಪಾಕ್ ನೊಂದಿಗೆ ಸಮರಾಭ್ಯಾಸಕ್ಕೆ ರಷ್ಯಾ ಮುಂದಾಗಿದೆ.
ರಷ್ಯಾ ಮತ್ತು ಪಾಕಿಸ್ತಾನದ ಜಂಟಿ ಸಮರಾಭ್ಯಾಸದ ಬಗ್ಗೆ ಭಾರತ ಆತಂಕ ಪಡುವ ಅಗತ್ಯವಿಲ್ಲ ಎಂದು ರಷ್ಯಾ ಹೇಳಿದ್ದು, ವಿವಾದಿತ ಪ್ರದೇಶಗಳಾದ ಆಜಾದ್ ಕಾಶ್ಮೀರ ಅಥವಾ ಗಿಲ್ಗಿಟ್ ಬಾಲ್ಟಿಸ್ತಾನ ಖೈಬರ್ ಪಖ್ತುಂಖ್ವಾ ಪ್ರದೇಶಗಳಲ್ಲಿ ಸಮರಾಭ್ಯಾಸ ನಡೆಸುವುದಿಲ್ಲ ಎಂದು ತಿಳಿಸಿದೆ.
ಉತ್ತರ ಪಾಕಿಸ್ತಾನದ ಪ್ರದೇಶದಲ್ಲಿ ಮಾತ್ರ ಸಮರಾಭ್ಯಾಸ ನಡೆಸುವುದಾಗಿ ಹೇಳಿರುವ ರಷ್ಯಾ, ಸೆ.24 ರಿಂದ ಅಕ್ಟೊಬರ್ 7 ವರೆಗೆ ರಷ್ಯಾ-ಪಾಕಿಸ್ತಾನದ ಜಂಟಿ ಸಮರಾಭ್ಯಾಸ ನಡೆಯಲಿದೆ. ಪಾಕಿಸ್ತಾನದಿಂದ ಭಾರತದ ಮೇಲೆ ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದಕ ದಾಳಿ ಬಗ್ಗೆ ಸೆ.18 ರಂದು ಪಾಕ್ ಉಗ್ರರು ನಡೆಸಿದ್ದ ದಾಳಿಯಲ್ಲಿ 18 ಯೋಧರು ಮೃತಪಟ್ಟಿರುವ ಬಗ್ಗೆ ರಾಷ್ಯಾಗೆ ಮಾಹಿತಿ ನೀಡಿತ್ತು. ಭಾರತದ ಆತಂಕಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ವಿವಾದಿತ ಪ್ರದೇಶಗಳಲ್ಲಿ ಸಮರಾಭ್ಯಾಸ ನಡೆಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
Discussion about this post