Read - 2 minutes
ಸಿದ್ದರಾಮಯ್ಯನ ಸಲಹೆಗಾರ ಎಂದು ಹೇಳಿಕೊಳ್ಳುವ ದಿನೇಶ್ ಅಮೀನ್ ಮಟ್ಟು ಎಂಬ ಈ ವ್ಯಕ್ತಿ ಮೊದಲಿಗೆ ಕನಕ ನಡೆಯನ್ನು ತಡೆಯಲು ದಲಿತರನ್ನು ಬಳಸಿಕೊಳ್ಳಲು ನೋಡಿದರು. ರಾಜ್ಯದಾದ್ಯಂತ ಯುವಾ ಬ್ರಿಗೇಡ್ ಮೇಲೆ ಅಟ್ರಾಸಿಟಿ ಕೇಸುಗಳನ್ನು ಹಾಕಿಸಿ ವೈರಿಗಳನ್ನು ಹೆಡೆಮುರಿಕಟ್ಟಿ ಠಾಣೆಗೆ ಒಗೆಯುವ ಪ್ಲ್ಯಾನ್ ಹಾಕಿದ್ದರು. ಆದರೆ ಈ ವ್ಯಕ್ತಿಯ ಸೀಕ್ರೇಟ್ ಗೇಮ್ ಪ್ಲ್ಯಾನ್, ಇವರದ್ದೇ ಉಡುಪಿ ಚಲೋ ವಾಟ್ಸಾಪ್ ಗ್ರೂಪ್‌ನ ಮೆಸೇಜುಗಳ ಮೂಲಕ ಬಟಾಬಯಲಾಯಿತು.
ತಮ್ಮ ಯೋಜನೆ ಹೊರಬಿದ್ದ ಮೇಲೆ ಮರ್ಯಾದೆ ಉಳಿಸಿಕೊಳ್ಳಲಿಕ್ಕಾಗಿ ಇವರೊಂದಷ್ಟು ಜನ ಹೋಗಿ ಪೊಲೀಸ್ ಮಹಾನಿರ್ದೇಶಕರಿಗೇ ದೂರು ಕೊಟ್ಟಂತೆ ಫೋಟೋ ಹೊಡೆಸಿಕೊಂಡರು. ದೂರು ಕೊಟ್ಟರೋ ಇಲ್ಲಾ ಯಾವುದಾದರೂ ಪ್ರೇಮಪತ್ರ ಬರೆದುಕೊಟ್ಟರೋ ದೇವರಿಗೇ ಗೊತ್ತು. ಯಾಕೆಂದರೆ ಇವರು ಕೊಟ್ಟ ದೂರಿಗೆ ಪೊಲೀಸ್ ಮಹಾನಿರ್ದೇಶಕರು ’ಅಕ್ನಾಲೆಡ್ಜ್ಮೆಂಟ್ ಕಾಪಿ’ ಏನೂ ಕೊಟ್ಟಿರಲಿಲ್ಲ!! ( ಹಾಗಾಗಿ ಇವರ ಹಾರಾಟ, ಓರಾಟಗಳೆಲ್ಲ ಕೇವಲ ದೊಂಬರಾಟ ಎಂಬುದು ನಮಗೆ ಅಂದೇ ಗೊತ್ತಿತ್ತು. ಅದನ್ನು ಬಾಯಿ ಬಿಟ್ಟು ಹೇಳದೆ ನಾವೆಲ್ಲ ಮುಸಿಮುಸಿ ನಕ್ಕಿದ್ದೆವು ಅಷ್ಟೆ 🙂
ಇವರದ್ದೇ ಸರ್ಕಾರ , ಇವರದ್ದೇ ಜನ ಇದ್ದ ಮೇಲೂ ಪೊಲೀಸ್ ಮೂಲಕ ಯುವಾ ಬ್ರಿಗೇಡ್ ಹಣಿಯಲು ಆಗಲಿಲ್ಲ ಅಂತಾದರೆ ಇವರ ದೂರುಗಳು ಎಷ್ಟು ಬಾಲಿಶವಾಗಿದ್ದವು ಎಂದು ಅರ್ಥ ಮಾಡಿಕೊಳ್ಳಬಹುದು. ಪೊಲೀಸ್ ಮೂಲಕ ಬಲಪ್ರದರ್ಶನ ಮಾಡಲು ಆಗದಿದ್ದ ಮೇಲೆ ಸಲಹೆಗಾರರು ಮುಂದಿನ ಹೆಜ್ಜೆಯಾಗಿ ಸ್ವಾಮೀಜಿಗೇ ಪ್ರೇಮಪತ್ರ ಬರೆಯಲು ಕೂತು ಬಿಟ್ಟರು. ಪತ್ರ ಕೊರಿಯರ್ ಆಗಿ ಸ್ವಾಮೀಜಿಗಳನ್ನು ತಲುಪಿದ್ದೂ ಆಯಿತು, ಸ್ವಾಮೀಜಿ ತತಕ್ಷಣ ಫೋನ್ ಎತ್ತಿಕೊಂಡು ಮಾತಾಡಿದ್ದೂ ಆಯಿತು, ಅದನ್ನೀತ ತನ್ನ ವಿಜಯಾ ದಿಗ್ವಿಜಯಾ ಅಂದುಕೊಂಡು ಫೇಸ್ಬುಕ್ಕಿನಲ್ಲಿ ಟಾಂ ಟಾಂ ಬಡಿದುಕೊಂಡದ್ದೂ ಆಯಿತು.
ಅಕ್ಟೋಬರ್ ೨೩ ಮುಗಿದಿದೆ. ಅಂದುಕೊಂಡಂತೆ ಕನಕ ನಡೆ ನಡೆದಿದೆ. ಸ್ವಾಭಿಮಾನಿಗಳ ಕೀಲು ಮುರಿದಿದೆ. ಈಗ ಈ ಸಲಹೆಗಾರರು ಗೆದ್ದದ್ದು ತನ್ನ ಭಂಡತನವಾ ಸ್ವಾಮೀಜಿಯ ಚಾಣಾಕ್ಷತೆಯಾ ಅಂತ ಆದ ಗಾಯಗಳನ್ನು ನೆಕ್ಕಿಕೊಳ್ಳುತ್ತ ಯೋಚಿಸುವುದು ಒಳ್ಳೆಯದು.ಬಾಯಿ ತೆಗೆದರೆ ತಾನು ಪೊಲೀಸ್ ವ್ಯವಸ್ಥೆಯನ್ನು ಬಳಸುತ್ತೇನೆ, ಸಿಕ್ಕಸಿಕ್ಕವರನ್ನು ಜೈಲಿಗೆ ಕಳಿಸುತ್ತೇನೆ, ವೈರಿಗಳಿಗೆಲ್ಲ ಶ್ರೀಕೃಷ್ಣನ ಜನ್ಮಸ್ಥಾನ ತೋರಿಸುತ್ತೇನೆ ಎಂದು ಹೇಳುವ ಈ ಸಲಹೆಗಾರ. ಅಂದರೆ ಈತನಿಗೆ ತನ್ನ ವೈರಿಗಳನ್ನು ಜೈಲಿಗಟ್ಟುವುದು ಬಿಟ್ಟರೆ ಬೇರೆ ಯಾವ ಯೋಚನೆಯೂ ತಲೆಯಲ್ಲಿ ಮೊಳೆಯುವುದಿಲ್ಲ ಎಂದು ಕಾಣುತ್ತದೆ. ದಿನದ ಇಪ್ಪತ್ತನಾಲ್ಕು ತಾಸೂ ಈತ ಯೋಚಿಸುವುದು ವೈರಿಗಳನ್ನು ಹಣಿಯುವುದು ಹೇಗೆ ಎಂದಷ್ಟೇ.ಐಡಲ್ ಮೈಂಡ್ ಈಸ್ ಡೆವಿಲ್ಸ್ ವರ್ಕ್‌ಶಾಪ್ ಎನ್ನುತ್ತಾರೆ. ಅದಕ್ಕೊಂದು ಸಾಕ್ಷಾತ್ ಮೂರ್ತ ದೃಷ್ಟಾಂತ ಇದು.
ಈ ವ್ಯಕ್ತಿ ಮಾತು ಮಾತಿಗೆ ತನ್ನ ವೈರಿಗಳನ್ನು ಕಿಡಿಗೇಡಿ ಎಂದು ಸಂಬೋಧಿಸುವಾಗ ನಗೆ ಬರುತ್ತದೆ. ಇದೇನಾ ಈತನ ಸಂಸ್ಕೃತಿ!!! ಇನ್ನು ಮಠಕ್ಕೆ ಯಾರು ಬೇಕು, ಯಾರು ಬೇಡ ಎನ್ನುವುದು ಸ್ವಾಮೀಜಿಗಳಿಗೆ ಗೊತ್ತಿದೆ. ಯಾರನ್ನು ಸ್ವಾಗತಿಸಬೇಕು, ಯಾರನ್ನು ಒದ್ದು ಹೊರಹಾಕಬೇಕು ಎಂಬ ವಿವೇಚನೆಯೂ ಅವರಿಗಿದೆ. ಮಠದಲ್ಲಿ ಏನೇ ಆದರೂ ಅದರಿಂದ ಈ ಸಲಹೆಗಾರನಿಗೆ ಆಗುವ ಲಾಭ ಅಥವಾ ನಷ್ಟ ಏನು? ಹಿಂದೂ ದೇವಸ್ಥಾನ, ಮಠಗಳ ವ್ಯವಸ್ಥೆಯನ್ನೇ ಧಿಕ್ಕರಿಸಿ ನಡೆದ ನಾರಾಯಣ ಗುರುಗಳ ಈ ಪರಮ ಭಕ್ತ ಹಗಲೂ ರಾತ್ರಿ ಕೃಷ್ಣಮಠದ ಭಜನೆಯನ್ನು ಕನಕದಾಸರಿಗಿಂತ ಹೆಚ್ಚಾಗಿ ಮಾಡುತ್ತಿರುವುದು ಏಕೆ? ಈತನಿಗೆ ಸಲಹೆಗಾರನ ಹುದ್ದೆ ಬಿಟ್ಟು ಕಾವಿಯುಟ್ಟು ಮಠದ ಸ್ವಾಮಿಯಾಗಿ ದೀಕ್ಷೆ ಪಡೆಯುವ ಆಸೆ ಇದೆಯೇ? ಹಾಗೇನಾದರೂ ಆಗಿಯೇ ಬಿಟ್ಟರೆ, ಮುಂಜಾನೆ ಮೂರಕ್ಕೆ ಎದ್ದು ಪ್ರಾತಃ ವಿಧಿಗಳನ್ನು ಮುಗಿಸಿ ವೇದಾಧ್ಯಯನ ಮಾಡುವ, ಚಾಪೆಯಲ್ಲಿ ಮಲಗುವ, ಮರದ ಚಪ್ಪಲಿ ಧರಿಸುವ, ಉಪ್ಪು ಖಾರಗಳಿಲ್ಲದ ಹಕ್ಕಿಯೂಟ ಮಾಡುವ, ಮಧ್ವಸರೋವರದಲ್ಲಿ ದಿನಕ್ಕೆ ಮೂರು ಬಾರಿ ಮುಳುಗು ಹಾಕುವ ದಿನೇಶ್ ಅಮೀನ್‌ರನ್ನು ನೋಡಲು ನಾನಂತೂ ಆಸೆಪಡುತ್ತೇನೆ. ಅವರನ್ನು ಅನುಸರಿಸಿ ಅವರ ಲಕ್ಷೋಪಲಕ್ಷ ಅನುಯಾಯಿಗಳು ಶ್ರೀಕೃಷ್ಣಮಠದ ಭಕ್ತರಾದರೆ ಅದಕ್ಕಿಂತ ಸಂತೋಷ ಮತ್ತು ಲಾಭವೇನಿದೆ!
ಅಂದ ಹಾಗೆ, ಧರ್ಮದ ಹೆಸರು ಹೇಳಿಕೊಂಡು ಹೊಟ್ಟೆ ಹೊರೆಯುವವರಿಂದಲೇ ದೇಶ ಮಲಿನವಾಗಿರುವುದು ಎಂದು ಈ ಬೃಹಸ್ಪತಿಯ ಮತ್ತೊಂದು ಹೇಳಿಕೆ. ಈ ಮಾತು ಮಾತ್ರ ಸತ್ಯ. ಯಾಕೆಂದರೆ ಇಂದು ಧರ್ಮದ ಹೆಸರು ಹೇಳಿಕೊಂಡು ಹೊಟ್ಟೆ ಹೊರೆಯುತ್ತಿರುವವರು ಈ ಆಸಾಮಿಯಂಥ ಬುದ್ಧಿಜೀವಿಗಳಲ್ಲದೆ ಬೇರ್ಯಾರೂ ಅಲ್ಲ! ನಿಜವಾದ ಭಕ್ತರಿಗೆ, ಆಸ್ತಿಕರಿಗೆ, ಬಲಪಂಥೀಯರಿಗೆ ಧರ್ಮ, ದೇವರು ಇತ್ಯಾದಿ ಒಂದು ಚರ್ಚೆಯ ವಿಷಯವೇ ಅಲ್ಲ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಧರ್ಮದ ಚರ್ಚೆ ನಡೆಸುತ್ತಿರುವವರು ಎಡಪಂಥೀಯರು, ಬುದ್ದಿಜೀವಿಗಳು ಮತ್ತು ದಿನೇಶ್ ತರದ ಎಡಬಿಡಂಗಿ ವಿಚಾರವಾದಿಗಳು ಮಾತ್ರ. ಹೀಗೆ ಧರ್ಮವನ್ನು ಹೊರಗಿನಿಂದ ಕೂತು ಚರ್ಚಿಸುವ ಬದಲು ಅವರು ಸನಾತನ ಧರ್ಮವನ್ನು ಒಪ್ಪಿಕೊಂಡು, ತನ್ನದೆಲ್ಲವನ್ನೂ ಕಳಚಿ ಅಪ್ಪಟ ಭಕ್ತರಾಗಲಿ. (ತನ್ನಲ್ಲಿ ಈಗಿರುವ ಎಲ್ಲವನ್ನೂ ಕಳಚಿದರೆ ಮಾತ್ರ ಸ್ವಾಮೀಜಿಯ ಜೊತೆ ನಿಲ್ಲುವ ಯೋಗ್ಯತೆ ಬರುತ್ತದೆ ಎಂಬ ಜ್ಞಾನೋದಯವಾದರೂ ಅವರಿಗೆ ಆಗಿರುವುದರಿಂದ, ದೀಕ್ಷೆ ಪಡೆಯುವ ದಾರಿಯಲ್ಲಿ ಮೊದಲ ಮೆಟ್ಟಿಲು ಹತ್ತಿದ್ದಾರೆ ಎಂದು ಭಾವಿಸಬಹುದು)
ಹಿಂದೂ ದೇವಸ್ಥಾನ, ಮಠಗಳ ವ್ಯವಸ್ಥೆಯನ್ನೇ ಧಿಕ್ಕರಿಸಿ ನಡೆದ ನಾರಾಯಣ ಗುರುಗಳ ಈ ಪರಮ ಭಕ್ತ ಹಗಲೂ ರಾತ್ರಿ ಕೃಷ್ಣಮಠದ ಭಜನೆಯನ್ನು ಕನಕದಾಸರಿಗಿಂತ ಹೆಚ್ಚಾಗಿ ಮಾಡುತ್ತಿರುವುದು ಏಕೆ? ಈತನಿಗೆ ಸಲಹೆಗಾರನ ಹುದ್ದೆ ಬಿಟ್ಟು ಕಾವಿಯುಟ್ಟು ಮಠದ ಸ್ವಾಮಿಯಾಗಿ ದೀಕ್ಷೆ ಪಡೆಯುವ ಆಸೆ ಇದೆಯೇ? ಹಾಗೇನಾದರೂ ಆಗಿಯೇ ಬಿಟ್ಟರೆ, ಮುಂಜಾನೆ ಮೂರಕ್ಕೆ ಎದ್ದು ಪ್ರಾತಃ ವಿಧಿಗಳನ್ನು ಮುಗಿಸಿ ವೇದಾಧ್ಯಯನ ಮಾಡುವ, ಚಾಪೆಯಲ್ಲಿ ಮಲಗುವ, ಮರದ ಚಪ್ಪಲಿ ಧರಿಸುವ, ಉಪ್ಪು ಖಾರಗಳಿಲ್ಲದ ಹಕ್ಕಿಯೂಟ ಮಾಡುವ, ಮಧ್ವಸರೋವರದಲ್ಲಿ ದಿನಕ್ಕೆ ಮೂರು ಬಾರಿ ಮುಳುಗು ಹಾಕುವ ದಿನೇಶ್ ಅಮೀನ್‌ರನ್ನು ನೋಡಲು ನಾನಂತೂ ಆಸೆಪಡುತ್ತೇನೆ. ಅವರನ್ನು ಅನುಸರಿಸಿ ಅವರ ಲಕ್ಷೋಪಲಕ್ಷ ಅನುಯಾಯಿಗಳು ಶ್ರೀಕೃಷ್ಣಮಠದ ಭಕ್ತರಾದರೆ ಅದಕ್ಕಿಂತ ಸಂತೋಷ ಮತ್ತು ಲಾಭವೇನಿದೆ!
Discussion about this post