ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಪ್ಪು ಮಾಡಿ (ಕೆಲವೊಮ್ಮೆ ಮಾಡಿರದ ತಪ್ಪುಗಳಿಂದಲೂ ಜೈಲು ಸೇರಿರುವ ಉದಾಹರಣೆಗಳಿವೆ) ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ಕಾನೂನಾತ್ಮಕ ಜೈಲು ಶಿಕ್ಷ ಅನುಭವಿಸುತ್ತಿದ್ದ ಕೆಲವು ಖೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು ಪರಪ್ಪನ ಅಗ್ರಹಾರದ Bangalore Parappana Agrahara ಕೇಂದ್ರ ಕಾರಾಗೃಹವೂ ಸೇರಿದಂತೆ ರಾಜ್ಯದ ಹಲವು ಜೈಲುಗಳಲ್ಲಿ ಅನೇಕ ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ 161 ಖೈದಿಗಳನ್ನು ಸನ್ನಡತೆ ಆಧಾರದಲ್ಲಿ ಸರ್ಕಾರ ಬಿಡುಗಡೆಗೊಳಿಸಿದೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಶಿಕ್ಷಾ ಬಂಧಿಗಳಿಗೆ ಇದರಿಂದ ಬಿಡುಗಡೆ ಭಾಗ್ಯ ಲಭಿಸಿದಂತಾಗಿದೆ. ಇದರಿಂದಾಗಿ ಪರಪ್ಪನ ಅಗ್ರಹಾರದಲ್ಲಿ ಸಂಭ್ರಮದ ವಾತಾವರಣವೇ ನಿರ್ಮಾಣವಾಗಿತ್ತು. ಜೈಲಿನ ಹೊರಗೊಂದು ಭಾವನಾತ್ಮಕ ಸನ್ನಿವೇಶ ನಿರ್ಮಾಣವಾದರೆ, ಜೈಲಿನ ಒಳಗೊಂದು ಮಾರ್ಮಿಕವಾದ ವಾತಾವರಣ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ ಜೈಲು ಹಕ್ಕಿಗಳ ಬಿಡುಗಡೆ.
ಜೈಲು ಹಕ್ಕಿಗಳ ಪಾಲಿಗೆ ಸೂಪರಿಂಟೆಂಡೆಂಟ್ ರಂಗನಾಥ್ ಆಪತ್ಭಾಂದವರಿದ್ದಂತೆ, ಬಿಡುಗಡೆಯಾಗುವ ಖೈದಿಗಳನ್ನು ಸ್ವಾಗತಿಸಿ, ಅವರುಗಳನ್ನು ಕುಟುಂಬದೊಂದಿಗೆ ಸೇರಿಸುವ ಕೆಲಸ ಮಾಡುತ್ತಿದ್ದರು. ಅವರ ಕಾಲಿಗೆ ಬೀಳುವ ಜೈಲು ಹಕ್ಕಿಗಳಿಗೆ ತಿಳಿ ಹೇಳುತ್ತಿದ್ದರು. ವೃತ್ತಿ ಜೀವನದಲ್ಲಿ ಹೀಗೆ ಸಾವಿರಾರು ಖೈದಿಗಳಿಗೆ ಸಾರ್ವಜನಿಕ ಜೀವನವನ್ನು ಕಳೆಯುವ ಅವಕಾಶ ಕಲ್ಪಿಸಿದ ಹಿರಿಮೆ-ಹೆಗ್ಗಳಿಕೆ ರಂಗನಾಥ್ ಅವರದು. ಕೆಲಸ ಮಾಡಿದ ಸ್ಥಳದಲ್ಲೆಲ್ಲಾ ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಿರುವುದು ಅವರ ವೃತ್ತಿ ಜೀವನದ ಸಕಾರಾತ್ಮಕವಾದ ಸಂಗತಿ.
Also read: ರಾಜ್ಯ ಪೋಲೀಸ್ ಇಲಾಖೆ ಟೆರರಿಸಂ ಕಮಾಂಡೋ ಕೇಂದ್ರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
ಜೈಲು ಹಕ್ಕಿಗಳನ್ನು ಸಾಮಾಜಿಕ ಜೀವನಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ರಂಗನಾಥ್ ಅವರ ಕಾಲಿಗೆ ನಮಸ್ಕರಿಸಿ, ಇನ್ನು ಮುಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಎಂಬ ಪ್ರತಿಜ್ಞೆ ಮಾಡುತ್ತಿದ್ದ ಸನ್ನಿವೇಶ ಮನಮಿಡಿಯುವಂತಿತ್ತು . ಅಷ್ಟೇ ಅಲ್ಲ ಖೈದಿಗಳ ಮನೆಗಳವರು ಕೂಡ ಹೃದಯ ತುಂಬಿ ಅವರನ್ನು ಹರಸುತ್ತಿದ್ದರು.
ಹೀಗೆ ಬಿಡುಗಡೆಗೊಂಡ ಜೈಲು ಹಕ್ಕಿಗಳಲ್ಲಿ ಮಹಿಳೆಯರೂ ಇದ್ದುದು ವಿಶೇಷ. ಅನೇಕ ಮಹಿಳಾ ಖೈದಿಗಳಿಗೂ ತಿಳಿ ಹೇಳಿ ಗೌರವಯುತ ಬದುಕನ್ನು ನಡೆಸುವ ಮಾರ್ಗದರ್ಶನ ನೀಡಿದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಗೌರವಯುತವಾದ ಬದುಕು ನಡೆಸಲು ಜೈಲಿನಲ್ಲಿಯೇ ವೃತ್ತಿಪರ ತರಬೇತಿ ನೀಡುವುದರೊಂದಿಗೆ ಸ್ವ ಉದ್ಯೋಗ ಕಲ್ಪಿಸುವ ಅವಕಾಶದ ಬಾಗಿಲನ್ನು ರಂಗನಾಥ್ ತೆರೆಸಿಕೊಟ್ಟಿದ್ದಾರೆ. ಹಾಗಾಗಿಯೇ ಬಿಡುಗಡೆ ಆದ ಖೈದಿಗಳು ರಂಗನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತಲೇ ನಿರ್ಗಮಿಸಿದರೆನ್ನುವುದು ಗೌರವದಿಂದ ಅಭಿನಂದನೆ ಸಲ್ಲಿ ನಿರ್ಗಮಿಸುತ್ತಿದ್ದುದು ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post