ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹನುಮಗಿರಿ ಬೆಟ್ಟದಲ್ಲಿ ಹನುಮಗಿರಿ ಸೇವಾ ಸಮಿತಿಯ ವತಿಯಿಂದ ಸಂಭ್ರಮ, ಸಡಗರದಿಂದ ಶ್ರೀ ರಾಮ ನವಮಿ Shri Ramanavami ಆಚರಿಸಲಾಯಿತು.
ತಾಳ – ಮೇಳ – ವಾದ್ಯ ಹಾಗೂ ಡೊಳ್ಳು ಕುಣಿತ ಮತ್ತು ಪೂಜಾ ಕುಣಿತದೊಂದಿಗೆ ಶ್ರೀ ರಾಮ ನವಮಿ ಮಹೋತ್ಸವ ಅಂಗವಾಗಿ ಶೋಭಾ ಯಾತ್ರೆ ನಡೆಸಲಾಯಿತು. ನಂತರ ತೀರ್ಥ – ಪ್ರಸಾದ ವಿನಿಯೋಗಿಸಲಾಯಿತ್ತು.

ಹನುಮಗಿರಿ ಕ್ಷೇತ್ರದ ಬಗ್ಗೆ:
ಮಾಂಡವ್ಯರ ತಪೋಭೂಮಿಯಲ್ಲಿ ನೆಲೆಸಿದ ಹನುಮನ ಕ್ಷೇತ್ರ ’ಹನುಮಗಿರಿ’ – ತ್ರೇತಾಯುಗದಲ್ಲಿ ಹನುಮಂತ ಲಕ್ಷ್ಮಣನಿಗಾಗಿ ಸಂಜೀವಿನಿ ಹೊತ್ತೊಯ್ಯುತ್ತಿದ್ದಾಗ ಪರ್ವತದ ಒಂದು ತುಣುಕು ಬಿದ್ದ ಸ್ಥಳ, ಮಾಂಡವ್ಯ ಮಹರ್ಷಿಗಳ ತಪೋಭೂಮಿ ಎಂಬೆಲ್ಲ ಐತಿಹ್ಯವಿರುವ ಉತ್ತರಹಳ್ಳಿಯ ಅರೆಹಳ್ಳಿ ಗ್ರಾಮದ ಎಜಿಎಸ್ ಬಡಾವಣೆಯ ಸಮೀಪದಲ್ಲಿದೆ. ಹನುಮಗಿರಿ ಕ್ಷೇತ್ರವು ಬಹಳ ಐತಿಹಾಸಿಕ ಮಹತ್ವ ಹೊಂದಿದ್ದು ಇದು ರಾಮಾಯಣದ ಹಿನ್ನೆಲೆ ಉಳ್ಳ ಕ್ಷೇತ್ರವೆಂದು ಪ್ರಸಿದ್ದಿಯಾಗಿದೆ.
ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ
ಛಾಯಾ ಚಿತ್ರ ಕೃಪೆ : ಕೃಷ್ಣ ಮೂರ್ತಿ ಜೋಯಿಸ್, ಬೆಂಗಳೂರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post