ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ತಮ್ಮ ನಿಸ್ವಾರ್ಥ ಸಮಾಜಮುಖಿ ಹೋರಾಟಗಳಿಂದಲೇ ಗುರುತಿಸಿಕೊಂಡಿದ್ದ ಅಣ್ಣಾ ಹಜಾರೆ ಹೋರಾಟ ಸಮಿತಿಯ ಸ್ಥಾಪಕ ಅಶೋಕ್ ಯಾದವ್ (57) ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಮಧ್ಯಾಹ್ನ 2:30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಹಾಗೂ ಅಪಾರ ಹಿಂಬಾಲಕರನ್ನು ಅಗಲಿದ್ದಾರೆ.

Also read: ಪರ್ಯಾಯ ಪತ್ರಕರ್ತರ ಸಂಘಟನೆ ಹುಟ್ಟು ಹಾಕಿ ಗೊಂದಲ ಸೃಷ್ಟಿಸುವ ಪ್ರಯತ್ನ: ಎನ್. ರವಿಕುಮಾರ್
ವಾಜಪೇಯಿ ಬಡಾವಣೆ ಅಕ್ರಮಗಳನ್ನು, ಶಿವಮೊಗ್ಗ ಕೆರೆಗಳ ಸಂರಕ್ಷಣೆ, ಜನ ನರ್ಮ್ ಬಸ್ಸುಗಳ ಬಗ್ಗೆ, ಆರ್.ಟಿ.ಓ. ಕಛೇರಿಯ ಭ್ರಷ್ಟಾಚಾರದ, ಕಳಪೆ ಕಾಮಗಾರಿಯ ವಿರುದ್ಧ ಸಾಕಷ್ಟು ಪ್ರಬಲವಾದ ಹೋರಾಟ ಸಂಘಟಿಸಿದ್ದರು. ಅನಾರೋಗ್ಯದ ನಡುವೆ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸು ಫಲಕಗಳನ್ನು ಆಳವಡಿಸಿ ಜನಪರ ಸೇವೆಗಳಿಗೆ ಅವರ ಬದ್ದತೆ ತೋರಿದ್ದರು. ಸಾರ್ವಜನಿಕ ಹೂರಾಟಕ್ಕಾಗಿ ತಮ್ಮ ಉದೋಗವನ್ನು ತ್ಯಜಿಸಿ ಹಲವಾರು ಯುವಕರಿಗೆ ಮಾದರಿ ಆಗಿದ್ದಾರೆ. ಇವರ ಅಗಲಿಕೆ ಜಿಲ್ಲೆಯ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಲ್ಪ ಮೀಡಿಯಾ ಹೌಸ್ ಪ್ರಾರ್ಥಿಸುತ್ತದೆ. ಇವರು ತನ್ನ ದೇಹವನ್ನು ಸಿಮ್ಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡುವುದರ ಮೂಲಕ ಸಾವಿನಲ್ಲು ಸಾರ್ಥಕತೆಯನ್ನು ಮೆರೆದಿದ್ದಾರೆ.









Discussion about this post