ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಶಂಕರ ಜಯಂತಿ Shankara Jayanthi ಮಹೋತ್ಸವ ಅಂಗವಾಗಿ ಮೇ 4ರಂದು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ನಗರದ ಶ್ರೀ ಮಾತಾಮಾಂಗಲ್ಯ ಮಂದಿರದಲ್ಲಿ ಸಂಜೆ 4 ಗಂಟೆಗೆ ಶಂಕರಾಚಾರ್ಯ ಆಧಾರಿತ ಲಿಖಿತ ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆ, ಸೌಂದರ್ಯ ಲಹರಿ ಕಂಠಪಾಠ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ನಡೆಯಲಿದೆ.
12 ವರ್ಷದೊಳಗಿನ ಮಕ್ಕಳು ಶಂಕರರ ಜೀವನ ಚರಿತ್ರೆಗೆ ಸಂಬಂಧಪಟ್ಟ ಚಿತ್ರಗಳನ್ನು ಹಾಗೂ 13ರಿಂದ 18ವರ್ಷದೊಳಗಿನ ಮಕ್ಕಳು ಸ್ಥಳದಲ್ಲಿ ಚಿತ್ರಗಳನ್ನು ಬಿಡಿಸತಕ್ಕದ್ದು. ಸೌಂದರ್ಯ ಲಹರಿ ಕಂಠಪಾಠ ಸ್ಪರ್ಧೆಯಲ್ಲಿ 12ವರ್ಷದೊಳಗಿನ ಮಕ್ಕಳು ಸೌಂದರ್ಯ ಲಹರಿಯ ಮೊದಲ 10 ಶ್ಲೋಕಗಳು, 13ರಿಂದ 8 ವರ್ಷದೊಳಗಿನ ಮಕ್ಕಳಿಗೆ 4 ನಿಮಿಷಗಳ ಸಮಯಾವಕಾಶ ನಿಗಧಿಪಡಿಸಲಾಗಿದೆ.
Also read: ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕೆವಿನ್‍ಗೆ ಬಂಗಾರದ ಪದಕ
ಶಂಕರರ ಜೀವನಗಾಥೆ ಕುರಿತು 12 ವರ್ಷದೊಳಗಿನ ಮಕ್ಕಳಿಗೆ ಹಾಗೂ 13ರಿಂದ 18 ವರ್ಷದೊಳಗಿನ ಮಕ್ಕಳಿಗೆ ಸನಾತನ ಸಂಸ್ಕೃತಿಯ ಪನರುತ್ಥಾನದಲ್ಲಿ ಶಂಕರಾಚಾರ್ಯರ ಪಾತ್ರ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
ಮೇ 6ರ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಶಂಕರರ ಜೀವನಕ್ಕೆ ಸಂಬಂಧಪಟ್ಟಂತೆ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಿ.ಕೆ. ವೆಂಕಟೇಶಮೂರ್ತಿ: 9449699012, ಸರಳಾ ಹೆಗಡೆ: 9945462499ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post