ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುತ್ತಿರುವುದನ್ನು ಸಹಿಸಿಕೊಳ್ಳಲಾಗದೆ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಅನ್ಯಕೋಮಿನ ಮತಕ್ಕಾಗಿ ಅವರ ಗೂಂಡಾವರ್ತನೆಗಳನ್ನು ಖಂಡನೆ ಮಾಡುತ್ತಿಲ್ಲ. ಕೊಲೆ ಮತ್ತು ದೊಂಬಿಗಳ ಮುಖಾಂತರ ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಷಡ್ಯಂತರವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಕೆ.ಎಸ್. ಈಶ್ವರಪ್ಪ K S Eshwarappa ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹುಬ್ಬಳಿಯಲ್ಲಿ ಮೌಲ್ವಿಯೋರ್ವರು ಪೊಲೀಸ್ ಜೀಪ್ ಮೇಲೆ ನಿಂತು ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿರುವ ವೀಡಿಯೋವನ್ನು ನಾವು ನೋಡಿದ್ದೇವೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನೂ ಸಹ ಆ ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡೆಯುತ್ತಿರುವುದನ್ನು, ದೇವಾಲಯ, ಆಸ್ಪತ್ರೆ, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಹಾಗೂ ಆರ್‌ಎಸ್‌ಎಸ್ ವಿರುದ್ಧ ಘೋಷಣೆ ಕೂಗಿದ್ದಾರೆ. ಸಂಚು ಮಾಡಿ ಗಲಭೆ ಸೃಷ್ಟಿಸುತ್ತಿರುವ ಪುಂಡರನ್ನು ನೇರವಾಗಿ ಎದುರಿಸುವ ಶಕ್ತಿ ಹಿಂದೂಗಳಿಗಿದೆ. ಆದರೆ, ನಾವು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಹೇಳಿದರು.
Also read: ಕಾಶಿಯಾತ್ರೆಗೆ ತೆರಳುತ್ತೀರಾ? ಹಾಗಾದರೆ ರಾಜ್ಯ ಸರ್ಕಾರ ನೀಡಲಿದೆ ಸಹಾಯಧನ
ಘಟನೆಯಲ್ಲಿ ಭಾಗಿಯಾಗಿರುವ ಮೌಲ್ವಿ ಹೇಡಿಯಂತೆ ಓಡಿಹೋಗಿದ್ದಾನೆ. ಎಲ್ಲೇ ಇದ್ದರೂ ಆತನನ್ನು ಹುಡುಕಿ ಬಂಧಿಸಬೇಕು. ಡಿಜೆ-ಕೆಜೆ ಹಳ್ಳಿ ಘಟನೆ, ಶಿವಮೊಗ್ಗ ಹರ್ಷ, ಬೆಂಗಳೂರಿನ ಚಂದ್ರು ಕೊಲೆಯಾಯಿತು. ಈ ರೀತಿಯ ಕೊಲೆ, ದೊಂಬಿ ಘಟನೆಗಳಿಗೆ ಕಾರಣರಾಗುತ್ತಿರುವವ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಈಗಾಗಲೇ ಬಂಧಿಸಿರುವ ದುಷ್ಕರ್ಮಿಗಳ ಜೊತೆಯಲ್ಲಿ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ ಗಡಿಪಾರು ಮಾಡಬೇಕು ಎಂದು ಗೃಹಸಿವರಲ್ಲಿ ಮನವಿ ಮಾಡುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post