ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುಪಿಎಸ್’ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ನನಗೆ 641ನೆಯ ರ್‍ಯಾಂಕ್ ಬಂದಿರುವುದು ಸಂತೋಷವಾಗಿದ್ದರೂ, ಐಎಎಸ್ ರ್‍ಯಾಂಕ್ ಪಡೆಯುವ ಉದ್ದೇಶದಿಂದ ಮತ್ತೊಮ್ಮೆ ಪರೀಕ್ಷೆ ಬರೆಯುತ್ತೇನೆ ಎಂದು ಡಾ. ಪ್ರಶಾಂತ್ ಹೇಳಿದ್ದಾರೆ.
ಶಿವಮೊಗ್ಗದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ 641ನೆಯ ರ್‍ಯಾಂಕ್ ದೊರೆತಿರುವುದು ಸಂತೋಷವೇ. ಆದರೆ, ನಾನು ಆಸೆ ಪಟ್ಟ ಐಎಎಸ್ ಸರ್ವಿಸ್ ಸಿಗುವುದಿಲ್ಲ. ಹೀಗಾಗಿ, ಮತ್ತೆ ಓದಿ, ಇನ್ನೊಮ್ಮೆ ಪರೀಕ್ಷೆ ಬರೆಯುತ್ತೇನೆ. ಮುಂದಿನ ಬಾರಿ ಐಎಎಸ್ ರ್‍ಯಾಂಕಿಂಗ್ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಪರೀಕ್ಷೆಯಲ್ಲಿ ಮೆಡಿಕಲ್ ಸೈನ್ಸ್ ಆಪ್ಷನಲ್ ವಿಷಯವನ್ನಾಗಿ ತೆಗೆದುಕೊಂಡಿದ್ದೆ. ಸ್ವಯಂ ಅಧ್ಯಯನ ಬಿಟ್ಟರೆ ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಟೆಸ್ಟ್ ಸೀರೀಸ್ ತೆಗೆದುಕೊಂಡು ನಿರಂತರವಾಗಿ ಪಾಲ್ಗೊಳ್ಳುತ್ತಿದ್ದೆ. ತಂದೆ ತಾಯಿಯ ಸಹಕಾರ, ನನ್ನ ಶ್ರಮ ಹಾಗೂ ನಿರಂತರ ಪ್ರಯತ್ನ ಯಶಸ್ಸಿಗೆ ಕಾರಣ. ಇಂದು ಸೇವೆಯಲ್ಲಿರುವ ಎಲ್ಲ ಅಧಿಕಾರಿಗಳು ನಮಗೆ ಮಾದರಿಯಾಗಿದ್ದು, ಸ್ವಾಮಿ ವಿವೇಕಾನಂದರು ನನ್ನ ಆಲ್ ಟೈಲ್ ರೋಲ್ ಮಾಡೆಲ್ ಎಂದರು.
Also read: ಸಿದ್ದರಾಮಯ್ಯ ಅವರು ಆರ್’ಎಸ್’ಎಸ್’- ಮೋದಿಯವರ ಕ್ಷಮೆ ಕೇಳಲಿ: ಜ್ಯೋತಿಪ್ರಕಾಶ್ ಆಗ್ರಹ
ಇನ್ನು, ಯುಪಿಎಸ್’ಸಿ ಪರೀಕ್ಷೆಗಳನ್ನು ಎದುರಿಸಲು ಉತ್ತಮ ಜ್ಞಾನದೊಂದಿಗೆ ವ್ಯಕ್ತಿತ್ವವೂ ಅತ್ಯಂತ ಮುಖ್ಯವಾಗುತ್ತದೆ. ಸಿಲೆಬಸ್’ಗೆ ತಕ್ಕಂತೆ ನಿರಂತರ ಅಧ್ಯಯನ, ಪುನರಾವಲೋಕನ ಅತ್ಯಂತ ಮುಖ್ಯವಾಗುತ್ತದೆ ಎಂದು ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post