ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉದ್ಯಮಶೀಲತೆ ಉತ್ತೇಜಿಸುವ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಅವಕಾಶ ತೆರೆಯುವ ಮೂಲಕ ಬುಡಕಟ್ಟು ಯುವಕ/ಯುವತಿ ಹಾಗೂ ಮಹಿಳೆಯರನ್ನು ಡಿಜಿಟಲ್ ಆಗಿ ಸಕ್ರಿಯಗೊಳಿಸುವ ಗೋಲ್ 2.0 (ಉoಚಿಟ 2.0) ಎಂಬ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗಿದೆ.
ಗೋಲ್ 2.0 Goal 2.0 ಕಾರ್ಯಕ್ರಮದಡಿ ಫೇಸ್‍ಬುಕ್ ಲೈವ್ ಸೆಷನ್‍ಗಳು ಮತ್ತು ಮೆಟಾ ಬಿಸಿನೆಸ್ ಕೋಚ್, ವಾಟ್ಸಾಪ್ ಪ್ಲಾಟ್‍ಫಾರ್ಮ್‍ನಲ್ಲಿ ಸ್ವಯಂಚಾಲಿತ ಶೈಕ್ಷಣಿಕ ಚಾಟ್‍ಬೋಟ್ ಮೂಲಕ ಮೆಟಾದ ಉಪಕರಣಗಳು ಮತ್ತು ಸಂಪನ್ಮೂಲಗಳ ಮಾಸ್ಟರ್ ಕ್ಲಾಸ್‍ಗಳನ್ನು ಬಳಸಿಕೊಂಡು ಬುಡಕಟ್ಟು ಸಮುದಾಯದ 10 ಲಕ್ಷ ಯುವಕರು ಮತ್ತು ಮಹಿಳೆಯರಿಗೆ ಡಿಜಿಟಲ್ ಆಗಿ ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ.
ಡಿಜಿಟಲ್ ಕೌಶಲ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ 52 ಸಾಪ್ತಾಯಿಕ ಮಾಸ್ಟರ್ ಕ್ಲಾಸ್‍ಗಳ ಬೋಧನೆಯನ್ನು ಫೇಸ್‍ಬುಕ್ ಲೈವ್ ಮೂಲಕ 12 ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ದಿಪಡಿಸಿ ಸ್ವಯಂ ಕಲಿಕೆಯ ಸಾಧನವನ್ನು ಅಭಿವೃದ್ದಿಪಡಿಸಿ ಬುಡಕಟ್ಟು ಮತ್ತು ಸ್ಥಳೀಯ ಸಮುದಾಯಗಳ ಯುವಕ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
Also read: ಭದ್ರಾವತಿಯ ಮೂವರು ಪಿಎಫ್‌ಐ ಕಾರ್ಯಕರ್ತರು ಒಂದು ವಾರ ಕಸ್ಟಡಿಗೆ
ಈ ಕಾರ್ಯಕ್ರಮದ ಬಗ್ಗೆ ಟಿಡಬ್ಲ್ಯುಡಿ ಗಳು, ಟಿಆರ್‍ಐ, ಎಸ್‍ಹೆಚ್‍ಜಿ ಮತ್ತು ಎನ್‍ಜಿಓ ಗಳ ಮೂಲಕ ಪರಿಶಿಷ್ಟ ಪಂಗಡದ ಯುವಕ/ಯುವತಿ ಹಾಗೂ ಮಹಿಳೆಯರಲ್ಲಿ ಅರಿವು ಮೂಡಿಸುವ ಸಲುವಾಗಿ https://goal.tribal.gov.in ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗಿದ್ದು ಆಸಕ್ತರು ಈ ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post