ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನಮ್ರತೆ ಮತ್ತು ಕಲಿಕಾ ಹಸಿವು ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಮುಖ್ಯ ಅವಶ್ಯಕವಾಗಿದೆ ಎಂದು ಐಇಇಇ ಭಾರತೀಯ ಕೌನ್ಸಿಲ್ ಸದಸ್ಯ ಅನಿಕೇತ್ ಶೆಣೈ ಅಭಿಪ್ರಾಯಪಟ್ಟರು
ಸೋಮವಾರ ನಗರದ ಜೆ.ಎನ್.ಎನ್.ಎಂಜಿನಿಯರಿಂಗ್ ಕಾಲೇಜಿನಲ್ಲಿ JNNCE ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಹಾಗೂ ರೊಬೊಟಿಕ್ಸ್ ಸ್ಪರ್ಧೆ ‘ಪ್ಲಾಸ್ಮಾ – 2022’ ಕಾರ್ಯಕ್ರಮದಲ್ಲಿ ಐಇಇಇ ಕಮ್ಯುನಿಕೇಷನ್ ಸೊಸೈಟಿ ವಿಶೇಷ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನವು ಪುಸ್ತಕಗಳಿಂದಲ್ಲ ಅನುಭವದಿಂದ ಪಡೆಯುತ್ತದೆ. ಯಾವಾಗ ಅನುಭವಗಳ ಅಧಾರಿತ ಜ್ಞಾನ ಪಡೆಯುತ್ತೇವೊ ಅಂದಿನಿಂದ ನಾವಿನ್ಯತೆಯೆಡೆಗೆ ಹೆಜ್ಜೆಯಿಡಲು ಸಾಧ್ಯವಾಗುತ್ತದೆ. ಬದುಕಿನಲ್ಲಿ ಎದುರಾಗುವ ಸೋಲುಗಳು ಅರಿವು ಪಡೆಯುವ ಸಾಧನವಾಗಿದ್ದು , ವಿನಮ್ರತೆಯ ಗುಣದೊಂದಿಗೆ ಎಲ್ಲವನ್ನು ಎದುರಿಸುವ ಆತ್ಮವಿಶ್ವಾಸ ನಿಮ್ಮದಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಿಲಯನ್ಸ್ ಜಿಯೊ ಬೆಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಡಾ.ಸೋಮಾ ಪಾಂಡೆ, ರೊಬೊಟಿಕ್ಸ್ ತಂತ್ರಜ್ಞಾನವು ಐಓಟಿ, ಕೃತಕ ಬುದ್ಧಿಮತ್ತೆ, ಕ್ಲೌಡ್ ಸ್ಟೋರೇಜ್ ಸೇರಿದಂತೆ ಪ್ರತಿಯೊಂದು ಆಧುನಿಕ ತಾಂತ್ರಿಕ ಅಂಶವನ್ನು ಸ್ಪರ್ಶಿಸುತ್ತದೆ. ಕೊವಿಡ್ ನಂತರದ ದಿನಮಾನದಲ್ಲಿ ರೋಬೊಟಿಕ್ಸ್ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರಿ ಬದಲಾವಣೆಗಳಾಗಿದ್ದು ರೊಬೊಟಿಕ್ ಶಸ್ತ್ರಚಿಕಿತ್ಸೆ , ಸ್ವಯಂ ಚಾಲನಾ ಕಾರುಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ ಎಂದು ಹೇಳಿದರು.
ಮನಸೂರಗೊಂಡ ರೋಬೊಟಿಕ್ಸ್ ಯುದ್ದ : ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಏರ್ಪಡಿಸಿದ್ದ ರೋಬೊಟಿಕ್ಸ್ ಸ್ಪರ್ಧೆಗಳು ನೊಡುಗರ ಮನಸೂರಗೊಂಡಿತು. ಪಾಂಡಿಚೇರಿ, ಗುಜರಾತ್, ಮುಂಬೈ , ಪುಣೆ ಸೇರಿದಂತೆ ಕರ್ನಾಟಕದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ 150 ಕ್ಕು ಹೆಚ್ಚು ವಿದ್ಯಾರ್ಥಿಗಳ ತಂಡ ರೋಬೊಟಿಕ್ಸ್ ಸ್ಪರ್ಧೆಗಳಾದ ಡೆಡ್ ಮೆಟಲ್, ರೊಬೊ ರೇಸ್, ರೊಬೊ ಸಾಸರ್ ಸುಮೊ ವಾರ್, ಮೇಜ್ ರನ್ನರ್, ಲೈನ್ ಫಾಲೊವರ್, ಹ್ಯಾಕಥಾನ್ ಸೇರಿದಂತೆ ಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಉತ್ಸುಕರಾಗಿ ಪಾಲ್ಗೊಂಡರು.
Also read: ಯುವಜನತೆ ಸದೃಢ ಮನಸ್ಸು ಹೊಂದಿ ಸಮಾಜಮುಖಿಯಾಗಿ: ಡಾ. ವೆಂಕಟೇಶ್ ಸಲಹೆ
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಮಂಜುನಾಥ. ಪಿ, ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ.ಸತ್ಯನಾರಾಯಣ, ಸಂಯೋಜಕರಾದ ಶರತ್.ಎಸ್.ಎಂ, ಶ್ವೇತಾ.ಹೆಚ್.ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post