ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರದ ಕೂಲಿಯವನಾಗಿ, ನಿಮ್ಮ ಸೇವಕನಾಗಿ ಸಾರ್ವಜನಿಕರ ಕುಂದುಕೊರತೆಗಳಿಗೆ ಸದಾ ಸ್ಪಂದಿಸುವುದಾಗಿ ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ಅವರು ಭರವಸೆ ನೀಡಿದರು.
ಅವರು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಶಿವಮೊಗ್ಗ ನಗರದ ಮೂಲಭೂತ ಸೌಕರ್ಯಗಳು ಹಾಗೂ ಕುಂದುಕೊರತೆಗಳ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಗರದ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಾಗ ಹಲವು ಇಲಾಖೆಗಳ ಹೊಂದಾಣಿಕೆ ಕಾರ್ಯ ಮುಖ್ಯವಾಗಿರುತ್ತದೆ. ಸ್ಮಾರ್ಟ್‌ಸಿಟಿ, ಕೆ.ಯು.ಡಬ್ಲು.ಎಸ್, ಮೆಸ್ಕಾಂ ಸೂಡಾ, ನಗರ ಯೋಜನೆ, ಪಿ.ಡಬ್ಬು.ಡಿ ಹಾಗೂ ಇತರೆ ಇಲಾಖೆಗಳ ಸಮನ್ವಯತೆ ಬೇಕಾಗುತ್ತದೆ ಎಂದು ತಿಳಿಸಿದರು.
ಸಾಗರ ರಸ್ತೆ ಕೈಗಾರಿಕಾ ವಲಯದ ಅಧ್ಯಕ್ಷ ಉಮೇಶ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪಾಲಿಕೆ ಆಯುಕ್ತರು, ಸಾಗರ ರಸ್ತೆ ಕೈಗಾರಿಕಾ ವಲಯದ ಮೂಲಭೂತ ಸೌಕರ್ಯ ಕುಂದುಕೊರತೆಗಳ ಬಗ್ಗ್ಗೆ ಈಗಾಗಲೆ ನನ್ನ ಗಮನಕ್ಕೆ ಬಂದಿದೆ 5-6 ವರ್ಷಗಳಿಂದ ಪರಿಹಾರವಾಗಿಲ್ಲ ಕಸ ವಿಲೇವಾರಿಗೆ ವಾಹನ ಮತ್ತು ಮೆನ್‌ಗಳ ಕೊರತೆ ಇದ್ದು ಕಸ ವಿಲೇವಾರಿ ಬಗ್ಗೆ ಈಗಾಗಲೇ ಕ್ರಮವಹಿಸಿರುವುದಾಗಿ, ಭೂಮಿ ತೆರಿಗೆ ವಿಚಾರವಾಗಿ ಸದ್ಯದಲ್ಲೇ ಸರ್ಕಾರಿ ಆದೇಶ ಗೆಜೆಟ್‌ನಲ್ಲಿ ಪ್ರಕಟವಾಗಲಿದೆ ಹಿಂದಿನ ನೀರಿನ ತೆರಿಗೆ ಬಾಕಿಯ ಬಗ್ಗೆ ಸರಿಪಡಿಸಲು ಇಲಾಖೆ ಹಂತದಲ್ಲಿ ಗಮನಹರಿಸುವುದಾಗಿ ತಿಳಿಸಿದರು.
ಶ್ರೀನಿಧಿಯ ವೆಂಕಟೇಶ್‌ಮೂರ್ತಿ ಅವರು ಪ್ರಸ್ತಾಪಿಸಿದ ಟ್ರೇಡ್ ಲೈಸೆನ್ಸ್ ಕುರಿತು ಇದೊಂದು ವಿಭಿನ್ನ, ವಿನೂತನ ವಿಶಿಷ್ಟ ಪದ್ದತಿ. ಇದು ಖರೀದಿಸುವುದು, ಮಾರಾಟ ಮಾಡುವ ಚಟುವಟಿಕೆಗಳ ಒಂದು ಕೇಂದ್ರ ಈ ಬಗ್ಗೆ ಅರಿವು, ಆಳ ಅವಶ್ಯಕತೆ ನನಗಿಂತಲೂ ತಮಗೆ ಚೆನ್ನಾಗಿ ತಿಳಿದಿದ್ದು, ತಮ್ಮ ಮಾರ್ಗದರ್ಶನದಲ್ಲಿ ನನ್ನ ಗಮನಕ್ಕೆ ತಂದಲ್ಲಿ ತಮ್ಮ ಸಹಕಾರದಿಂದ ಸಕಾರಾರತ್ಮಕವಾಗಿ ಮುಕ್ತವಾಗಿ ಚರ್ಚೆ ಮಾಡಿ ಅನುಕೂಲ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರಾಜೇಂದ್ರ ಪ್ರಸಾದ್ ನಗರದಲ್ಲಿ ವಿಮಾನಯಾನ ಪ್ರಾರಂಭದ ಬಳಿಕ ಶಿವಮೊಗ್ಗ ನಗರ “ಬಿ“ ದರ್ಜೆಯ ಸಿಟಿ ಯಾಗುತ್ತಿರುವುದರಿಂದ ತೆರಿಗೆಗಳು ಹೆಚ್ಚಳವಾಗುತ್ತವೆಯೇ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಹಾಗಂತ ಯಾವುದೇ ಅಧಿಕವಾದ ಮೌಲ್ಯವರ್ದಿತ ತೆರಿಗೆಗಳ ಹೆಚ್ಚಳವಾಗುವುದಿಲ್ಲ ನೌಕರರ ಪ್ರಯಾಣ ಭತ್ಯೆ, ತುಟ್ಟಿ ಭತ್ಯೆಗಳು ಹೆಚ್ಚಾಗುವುದಾಗಿ ತಿಳಿಸಿದರು. ಕಟ್ಟಡ ಪರವಾನಗಿ, ಬಿಲ್ಡಿಂಗ್ ಕಂಪ್ಲಿಷನ್ ಸರ್ಟಿಫಿಕೇಟ್, ಅಕ್ಯೂಪೇಷನ್ ಸರ್ಟಿಫಿಕೇಟ್ ಬಗ್ಗೆ ಕೇಳಿದ ಪ್ರಶ್ನೆಗೆ ಈ ವಿಷಯದಲ್ಲಿ ಕೆಲವು ಕಠಿಣ ನಿಲುವುಗಳಿದ್ದು ಮಹಾನಗರಪಾಲಿಕೆ, ನಗರ ಯೋಜನೆ ಹಾಗೂ ಕಂದಾಯ ಇಲಾಖೆಯ ರೀತಿ ನೀತಿಗಳು ತದ್ವಿರುದ್ದವಾಗಿದ್ದು ಸ್ಥಳಿಯ ಸಮಸ್ಯೆಗಳನ್ನು ಎದುರಿಸಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದು ಕಷ್ಟಸಾದ್ಯವೆಂದು ತಿಳಿಸಿದರು.
Also read: ಬ್ರಾಹ್ಮಣ ಸಮಾಜದ ಮುಖಂಡ ಎಂ. ವಿ. ಜೋಯಿಸ್ ನಿಧನ : ಈಶ್ವರಪ್ಪ ಸಂತಾಪ
ಕುಡಿಯುವ ನೀರಿನ 24×7 ಸಮಸ್ಯೆ ಬಗ್ಗೆ ಹಲವಾರು ದೂರುಗಳು ಬಂದಿದ್ದು ಇದು ಪ್ರತ್ಯೇಕವಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗೆ ಸಂಬಂದಿಸಿದ್ದು ಅದು ಅವೈಜ್ಞಾನಿಕವಾಗಿರುವುದಾಗಿ ದೂರುಗಳು ಬಂದಿದ್ದು, ಸದರಿ ಇಲಾಖೆಯಿಂದ ಸಾರ್ವಜನಿಕ ಪ್ರಕಟಣೆ ಸದ್ಯದಲ್ಲೆ ಹೊರಬೀಳಲಿದೆ. ತೊಂದರೆ ಅನುಭವಿಸಿರುವ ಸಾರ್ವಜನಿಕರು ಈ ಬಗ್ಗೆ ಮಾಹಿತಿ ಒದಗಿಸಿ ಸುದುಪಯೋಗ ಮಾಡಿಕೊಳ್ಳಬೇಕೆಂದು ವಿನಂತಿಸಿದರು.
ನಗರದಲ್ಲಿ ಪ್ಲೆಕ್ಸಿ ಹಾವಳಿ ಬಗ್ಗೆ ತಿಳಿಸುತ್ತಾ ನಗರದ ಅಂದವನ್ನು ಹಾಳು ಮಾಡುತ್ತಿವೆ, ರಸ್ತೆ ಡಿವೈಡರ್‌ಗಳು ಹಾಳಾಗಿವೆ ಪ್ಲಾಂಟ್ ಬಾಕ್ಸ್ ಗಿಡಮರಗಳ ಸಂರಕ್ಷಣೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ಲೆಕ್ಸಿ ಗಳ ಗುಣಮಟ್ಟ, ಅವುಗಳನ್ನು ಹಾಕಲು ಅನುಮತಿ ಪಡೆಯುವ ಬಗ್ಗೆ ಕಾನೂನುಗಳಿವೆ. ಅದನ್ನು ದಿಕ್ಕರಿಸಿ ಪ್ಲೆಕ್ಸಿಗಳನ್ನು ಅಳವಡಿಸುತ್ತಿದ್ದು, ವಿಶೇಷವಾಗಿ ಪ್ಲೆಕ್ಸ್ ಕಿತ್ತುಹಾಕುವ ಅಭಿಯಾನವನ್ನು ಹಮ್ಮಿಕೋಂಡು ನಡೆಸಿದ ಕಾರ್ಯಾಚರಣೆಯನ್ನು ವಿವರವಾಗಿ ವಿವರಿಸಿದರು.
ಸಂಘದ ಅಧ್ಯಕ್ಷ ಎನ್ ಗೋಪಿನಾಥ್ ಮಾತನಾಡಿ, ಆಯುಕ್ತರು ಅನೇಕ ದೇಶಗಳನ್ನು ಸುತ್ತಾಡಿ ಜ್ಞಾನವನ್ನು ಪಡೆದುಕೊಂಡ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಹೊರೆಯಾಗದಂತೆ, ತೊಂದರೆಯಾಗದಂತೆ ಅಭಿವೃದ್ದಿ ಕಾರ್ಯಗಳನ್ನು ಮುನ್ನೆಡೆಸುವ ಶಿವಮೊಗ್ಗವನ್ನು ಸುಂದರ ಸ್ವಚ್ಚ ನಗರವನ್ನಾಗಿಸುವ ಮನಸ್ಸನ್ನು ಹೊಂದಿದ್ದಾರೆ. ಇದು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಬಿ.ಆರ್ ಸಂತೋಷ್, ನಿಕಟಪೂರ್ವ ಅಧ್ಯಕ್ಷ ಜೆ.ಆರ್ ವಾಸುದೇವ, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಖಜಾಂಚಿ ಮಧುಸೂದನ ಐತಾಳ್, ಮೂಲಭೂತ ಸೌಕರ್ಯ ಹಾಗೂ ಹಾಗೂ ಕುಂದುಕೊರತೆಗಳ ಸಮಿತಿಯ ಛೇರ‍್ಮನ್ ಕೆ.ಎಸ್. ಸುಕುಮಾರ್, ನಿರ್ದೇಶಕರುಗಳಾದ ಎಸ್.ಎಸ್. ಉದಯಕುಮಾರ್, ಸಂಘದ ಮಾಜಿ ಅಧ್ಯ್ಕಕ್ಷರುಗಳಾದ ಎಂ. ಭಾರದ್ವಾಜ್, ಎ.ಆರ್ ಆಶ್ವಥ್‌ನಾರಾಯಣ ಶೆಟ್ಟಿ, ಮಾಜಿ ನಿರ್ದೇಶಕರಾದ ಎ.ಎಂ. ಸುರೇಶ, ಸಂಯೋಜಿತ ಸಂಘಗಳ ಪಧಾಧಿಕಾರಿಗಳು, ಮಹಾನಗರಪಾಲಿಕೆಯ ಇಂಜಿನಿಯರ್ ಗಳು, ಸಾರ್ವಜನಿಕರು ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post