ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಕಲಿಕೆಯು ಜ್ಞಾನದ ತಪಸ್ಸಾಗಬೇಕಾಗಿದ್ದು ಪ್ರೀತಿಯಿಂದ ಕಲಿಯಲು ಪ್ರಾರಂಭಿಸಿದಾಗ ಮಾತ್ರ ಅತ್ಯುನ್ನತ ಸಾಧನೆ ಮಾಡಲು ಸಾಧ್ಯ ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕ ಡಾ.ಜಯಶಂಕರ ಕಂಗಣ್ಣಾರು ಹೇಳಿದರು.
ಗುರುವಾರ ನಗರದ ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜಿನ ವತಿಯಿಂದ ವಿದ್ಯಾರ್ಥಿನಿಯರ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್ ಘಟಕಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಮೌಲ್ಯಯುತ ಶಿಕ್ಷಣದಿಂದ ಪ್ರತಿಯೊಂದು ಮಕ್ಕಳಿಗೆ ಜ್ಞಾನ, ತಿಳುವಳಿಕೆ ಮತ್ತು ಕೌಶಲ್ಯದ ಜೊತೆಗೆ ಉತ್ತಮ ನಾಗರೀಕರಾಗಿ ಹೊರಹಮ್ಮಲು ಸಹಕಾರಿಯಾಗುತ್ತದೆ. ಯಾರಲ್ಲಿ ಅದ್ಭುತ ಚೈತನ್ಯ ಸಮಾಜಮುಖಿ ಚಿಂತನೆಗಳಿವೆಯೊ ಅವರು ಸಮಾಜದಲ್ಲಿ ಪೂಜಿತರಾಗುತ್ತಾರೆ. ಕಲಿಕೆಯಲ್ಲಿ ಉತ್ತಮವಾಗಿ ಕೇಳಿಸಿಕೊಳ್ಳುವುದು, ಗಮನಿಸುವುದು, ಕಲಿತ ವಿಚಾರಗಳನ್ನು ಪುನರ್ ಮನನ ಮಾಡುವುದು ಪ್ರಮುಖ ಅಂಶಗಳಾಗಿದೆ. ನಮ್ಮಲ್ಲಿರುವ ಯುವ ಚೈತನ್ಯ ಸಮಾಜಮುಖಿ ಅಭಿವೃದ್ಧಿಯಲ್ಲಿ ಅನುಷ್ಟಾವಾಗಬೇಕಾಗಿದ್ದು ಮನಸ್ಸು ಮಾಡದರೇ ಎಂತಹ ಸಿದ್ಧಿಯನ್ನು ಪಡೆಯಬಹುದಾಗಿದೆ. ಈ ಮೂಲಕ ನಾವು ಬೆಳೆದ ಕುಟುಂಬಕ್ಕೆ, ಸಮಾಜಕ್ಕೆ, ಕಲಿತ ಸಂಸ್ಥೆಗೆ ಸದಾ ಚಿರಋಣಿಗಳಾಗಿರಿ ಎಂದು ಹೇಳಿದರು.
Also read: ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಆರ್ಥಿಕವಾಗಿ ಸಧೃಢ: ಉಮಾಶಂಕರ ಉಪಾಧ್ಯಾಯ
ಕಾರ್ಯಕ್ರಮದಲ್ಲಿ ಐಎಂಎ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ನಿವೃತ್ತ ಡಿಡಿಪಿಐ ನಾಗರಾಜ. ವಿ.ಕಾಗಲ್ಕರ್, ಪ್ರಾಂಶುಪಾಲರಾದ ಬಿ.ರಂಗಪ್ಪ, ಉಮೇಶ್.ಕೆ.ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post