ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಇತಿಹಾಸ ಹಾಗೂ ಮೋದಿಯವರ ತ್ಯಾಗ ಅರಿಯದೇ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ Siddaramaiah ಕ್ಷಮೆ ಕೇಳಬೇಕು ಎಂದು ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೆಸರೇ ಹೇಳುವಂತೆ ರಾಷ್ಟೀಯ ಸ್ವಯಂ ಸೇವಕ ಸಂಘ ಎಂದರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂ ಪ್ರೇರಣೆಯಿಂದ ದೇಶದ ಸೇವೆಯಲ್ಲಿ ನಿರಂತರವಾಗಿ ತೊಡಗುವಂತೆ ಯುವಕರನ್ನು ಪ್ರೇರೇಪಿಸುವುದಾಗಿದೆ. ಸಿದ್ದರಾಮಯ್ಯ ಅವರು ಅದನ್ನು ಅರಿತು ಮಾತನಾಡಬೇಕು ಎಂದು ಕಿಡಿ ಕಾರಿದ್ದಾರೆ.
ದೇಶದ ಏಳ್ಗೆಗಾಗಿ ನಿರಂತರವಾಗಿ ಶ್ರಮಿಸುತ್ತಾ, ಯಾವುದೇ ರೀತಿಯ ವಿಪತ್ತು ಸಂದರ್ಭದಲ್ಲಿ ಕೈಜೋಡಿಸುತ್ತಾ, ಚೀನಾದ ವಿರುದ್ಧದ ಯುದ್ಧದ ವೇಳೆ ಭಾರತೀಯ ಸೇನೆಯ ಬೆನ್ನಿಗೆ ನಿಂತು ಸಹಕಾರ ನೀಡಿರುವ ಏಕೈಕ ಸಂಸ್ಥೆ ಎಂದರೆ ಆರ್’ಎಸ್’ಎಸ್. ಇಂತಹ ಸಂಘಟನೆಯ ಪೂರ್ವಾಪರವನ್ನು ಸರಿಯಾಗಿ ಅರಿಯದೇ ಸಿದ್ದರಾಮಯ್ಯ ಮಾತನಾಡುವುದು ಅಕ್ಷಮ್ಯ. ಹೀಗಾಗಿ, ಅವರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
Also read: ರಾಜ್ಯಸಭೆ ಚುನಾವಣೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಮಪತ್ರ ಸಲ್ಲಿಕೆ
ದೇಶದಲ್ಲಿ ಇಲ್ಲಿಯವರೆಗೆ ಸಾವಿರಾರು ಸಂಘ ಸಂಸ್ಥೆಗಳು ಹುಟ್ಟಿಕೊಂಡು ಏನನ್ನೂ ಸಾಧಿಸಲಾಗದೆ ತನ್ನ ಗಂಟು ಮೂಟೆ ಕಟ್ಟಿಕೊಂಡು ಬಾಗಿಲು ಹಾಕಿಕೊಂಡಿವೆ. ಒಂದು ವೇಳೆ ಆರ್’ಎಸ್’ಎಸ್ RSS ಸಂಸ್ಥಾಪಕರಾದ ಕೇಶವ ಬಲಿರಾಂ ಹೆಡಗೆವಾರ್ ಅವರು ಬೇರೆ ಯಾವುದೋ ಕೆಟ್ಟ ದುರಾಲೋಚನೆ ಇಟ್ಟುಕೊಂಡು ಸಂಘವನ್ನು ಸ್ಥಾಪಿಸಿದ್ದರೆ ಅದು ಶತಮಾನಗಳ ಕಾಲ ವಿಜೃಂಭಿಸಿ ಕೋಟ್ಯಾಂತರ ಕಾರ್ಯಕರ್ತರ ಪಡೆಯನ್ನು ಹೊಂದಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ PM Narendra Modi ಅವರು ಚುಕ್ಕಾಣಿ ಹಿಡಿದ ನಂತರದಲ್ಲಿ ಸೇನಾ ವಲಯಕ್ಕೆ ನೂರಾರು ನೂತನ ತಂತ್ರಜ್ಞಾನವನ್ನು ಉನ್ನತೀಕರಿಸಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ನಮ್ಮ ಯೋಧರ ಕೈ ಸೇರಿವೆ. ಅಲ್ಲದೇ, ಹಿಂದೆಂದೂ ಕಾಣದಂತಹ ಮೂಲಭೂತ ಸೌಕರ್ಯವನ್ನು ಸೇನೆಗೆ ನೀಡುವ ಮೂಲಕ ಆನೆಬಲ ಒದಗಿಸಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post