ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅವಕಾಶಗಳು ದೊರೆತಾಗ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಅಲ್ಲಿಂದ ತಮ್ಮಸಾಧನೆಯ ಗುರಿ ಮುಟ್ಟಬಹುದು. ಇಂತಹ ಆದ್ಯತೆಗಳು ಕ್ರೀಡೆಗಳಲ್ಲಿ ಅದರಲ್ಲೂ ಚೆಸ್ ಹಾಗೂ ಯೋಗಾಸನದಲ್ಲಿ ಹೆಚ್ಚಾಗಿ ದೊರಕುತ್ತವೆ ಎಂದು ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶೋಭಾ ವೆಂಕಟರಮಣ ತಿಳಿಸಿದರು.
ಅವರು ಇಂದು ಬೆಳಗ್ಗೆ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಆರಂಭಗೊಂಡ ಅನುದಾನರಹಿತ ಶಾಲೆಗಳ ವಲಯಮಟ್ಟದ ಚೆಸ್ ಹಾಗೂ ಯೋಗಾಸನ ಪಂದ್ಯಾವಳಿಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ ವರ್ಷ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೇಶದ ಬಾವುಟವನ್ನು ಅತಿ ಎತ್ತರಕ್ಕೆ ಏರಿಸಿದ ಸಾಧನೆ ನಮ್ಮ ದೇಶದ ಪ್ರತಿಭಾನ್ವಿತ ಕ್ರೀಡಾಪಟುಗಳಿಂದ ಸಾಧ್ಯವಾಯಿತು. ಕೊನೆಯ ಸ್ಥಾನದಲ್ಲಿ ಸದಾ ನಿರಾಶೆಯನ್ನೇ ಕಾಣುತ್ತಿದ್ದ ದೇಶದ ತಂಡ ಈ ಭಾರಿ 4ನೇ ಸ್ಥಾನಕ್ಕೇರಿದ್ದು ಶ್ಲಾಘನೀಯ ಸಂಗತಿ. ಇದು ನಿಮಗೆಲ್ಲ ಸ್ಪೂರ್ತಿಯಾಗಬೇಕು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಅನುದಾನರಹಿತ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ. ತಿಮ್ಮೇನಹಳ್ಳಿ ಅವರು ಮಕ್ಕಳಿಗೆ ಶುಭ ಹಾರೈಸಿದರು.
ಯೋಗ ಸ್ಪರ್ಧೆಯ ಮುಖ್ಯತೀರ್ಪುಗಾರರಾದ ಸುನೀತಾ, ರಾಮಕೃಷ್ಣ ಶಾಲೆಯ ಮುಖ್ಯಶಿಕ್ಷಕ ತೀರ್ಥೇಶ್ ಗಜೇಂದ್ರನಾಥ ಹಾಗೂ ಶಿಕ್ಷಕರು, ಎಲ್ಲಾ ಶಾಲೆಯ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post