ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜಕಾರಣ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿರುವುದು ನಿಜ. ಆದರೆ, ಘೋಷಣೆಯ ಹಿಂದೆ ಯಾವುದೆ ಪಕ್ಷ, ಸಂಘಟನೆಗಳ ಮುಖಂಡರ ಪ್ರೇರಣೆ ಇರಲಿಲ್ಲ’ ಎಂದು ಸರ್ಜಿ ಫೌಂಡೇಷನ್ ಮುಖ್ಯಸ್ಥ ಡಾ. ಧನಂಜಯ ಸರ್ಜಿ ಪ್ರತಿಕ್ರಿಯಿಸಿದ್ದಾರೆ.
’ಇನ್ನಷ್ಟು ಸಮಾಜ ಸೇವೆ ಮಾಡಬೇಕು. ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎನ್ನುವುದು ತಮ್ಮ ಬಹು ದಿನಗಳ ಬಯಕೆ, ಬಂದು ಬಳಗ, ಹಿತೈಷಿಗಳು ಹಾಗೂ ಅಭಿಮಾನಿಗಳ ಪ್ರೇರಣೆಯಿಂದ ಹುಟ್ಟುಹಬ್ಬದ ದಿನದಂದು ಅವರ ಸಮ್ಮುಖದಲ್ಲಿ ಹೊಸ ಬದುಕಿಗೆ ತೆರೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದೆ. ವೇದಿಕೆಯಲ್ಲಿ, ತಾನು ಗೌರವಿಸುವ ಕೆಲವು ಗಣ್ಯರು ಅಂದು ಆಸೀನರಾಗಿದ್ದರು, ಆದರೆ, ಅವರು ಪ್ರತಿನಿಧಿಸುವ ಸಂಘಟನೆ ಅಥವಾ ಪಕ್ಷದ ಬೆಂಬಲಿತ ಅಭ್ಯರ್ಥಿ ಎನ್ನುವ ರೀತಿ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮಕ್ಕೆ ಅಪಾರ ಬಂಧುಬಾಂಧವರು, ಹಿತೈಷಿಗಳು, ಒಡನಾಡಿಗಳು, ಗೆಳೆಯರು, ವೃತ್ತಿ ಬಾಂಧವರು, ಆಸ್ಪತ್ರೆ ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನನ್ನು ಹಾರೈಸಿದ್ದಕ್ಕೆ ಎಲ್ಲರಿಗೂ ಹೃದಯ ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.












Discussion about this post