ಇತ್ತೀಚೆಗೆ ಉದ್ಯೋಗವಿಲ್ಲದ ಮಾಧ್ಯಮದವರಿಗೆ ,ಹೆದರಿಸಿ ಬೆದರಿಸಿ ಲೂಟಿಮಾಡುವ ದಂದೆಯವರದ್ದೊಂದು ವಿಚಾರ ಸಿಕ್ಕಿಬಿಟ್ಟಿದೆ.ಇದೇ ವಿಚಾರವನ್ನು ಘಂಟೆಗಟ್ಟಳೆ ಕೊರೆದರು.ಪ್ರಾಶ್ಚಿತ್ತವಾಗಿ ಟಿ ವಿ ಯವರಿಗೆ T R P ಸಿಕ್ಕಿದರೆ, ಈ ಡೋಂಗಿಗಳಿಗೆ ಕೈತುಂಬ ದಕ್ಷಿಣೆಯೂ ಆಗುತ್ತದೆ. ಇನ್ನೊಂದೆಡೆ ಕಾಲು ಕೆರೆದು ವೈದಿಕ ಸಂಪ್ರದಾಯವನ್ನು ಅವಹೇಳನ ಮಾಡುವ ದುರ್ಬುದ್ಧಿ ವಿಚಾರವಾದಿಗಳಿಗೆ ಒಂದು ಉತ್ತಮ ಅವಕಾಶವೂ ಸಿಕ್ಕಿತು. ಅಂತೂ time pass, time waste ,money gain, money loss ಇತ್ಯಾದಿ ಬಿಳಿಕಾಗೆಯ ದರ್ಶನದಿಂದ ಲಭ್ಯವಾಯಿತು.
ನೀವು ಹೈಸ್ಕೂಲು ವಿದ್ಯಾಭ್ಯಾಸದ ಕಾಲದಲ್ಲಿ The Blue Jackal ಕತೆ ಓದಿದ್ದರೆ ಅರ್ಥವಾದೀತು.
ಜಗತ್ತು ಪ್ರಳಯವಾಗಿ ಸರ್ವ ನಾಶವಾದಾಗ ಮಹಾವಿಷ್ಣುವಿನ ಮತ್ಸ್ಯಾವತಾರದಲ್ಲಿ ವಿಶ್ವಜಿತ್ ಮಹರಾಜನಿಗೆ ಜಗತ್ತಿನ ಸಕಲ ಪ್ರಭೇದಗಳ ಜೀನ್ ( ಜೀವ ಕಣ) ಗಳನ್ನು ಸಂಗ್ರಹಿಸಿಡಲು ಭಗವಂತನ ಆದೇಶವಾಗುತ್ತದೆ.ಪ್ರಳಯಾನಂತರ ಋಷಿಗಳ ಮೂಲಕ ಇವುಗಳ process ಆಗಿ ಜೀವ ರಾಶಿಗಳ ಸೃಷ್ಟಿಯೂ ಆಗುತ್ತದೆ. ಹಾಗಾಗಿ ಈ ಸೃಷ್ಟಿಕರ್ತನಿಗೆ ಮನು ಎಂಬ ಹೆಸರಾಯಿತು.ಇಲ್ಲಿ ಮಾನವನ ಜೀನೊಂದು ಬಾಕಿಯಾಯಿತು.ಅದಕ್ಕಾಗಿ ಮನುವಿನ ಶರೀರದ ಕಣದಿಂದಲೇ( ಜೀವಕೋಶ) ಮನುಷ್ಯನ ಸೃಷ್ಟಿಯಾಯಿತು.ಹಾಗಾಗಿ ಮನುಷ್ಯನ ಮೂಲ ಪಿತೃ ವಿಶ್ವಜಿತ್ ಎಂಬ ಮನು ಮಹರಾಜ.
ಇಂತಹ ಸೃಷ್ಟಿಯಲ್ಲಿ ನೀರಿನ ಜಂತು( aquatic ), ಸಸ್ಯಾಹಾರಿ ( herbivorous), ಮಾಂಸಾಹಾರಿ ( carnivorous) ,ಮಾಂಸ ಮತ್ತು ಸಸ್ಯಹಾರಿ( ಮನುಷ್ಯ- omnivorous,ಮರದಲ್ಲಿ ವಾಸಿಸುವ ಪ್ರಾಣಿ( terrestrial), ಇತ್ಯಾದಿ ಪ್ರಭೇದಗಳ ಸೃಷ್ಟಿಯಾಗುತ್ತದೆ.ಇದರಲ್ಲಿ ಕಾಗೆಯೂ ಒಂದು.ಈ ಕಾಗೆಗೆ ಪಿತೃಕಾರ್ಯದ ಶೇಷವನ್ನು ಇಡುವ ಸಂಪ್ರದಾಯಗಳು ಮುಂದೆ ಚಾಲ್ತಿಗೆ ಬಂತು. ಕಾಗೆಯಲ್ಲೂ ಗೃದ್ರ, ಕರಿಕಾಗೆಗಳೆಂಬ ವರ್ಣಬೇದಗಳಿವೆ. ಇದು ಗಿಡುಗಾದಿಗಳ ಸಾಲಿಗೇ ಬರುತ್ತದೆ.ಆದರೆ ಬಿಳಿ ಕಾಗೆ ಎಂಬುದು ಎಲ್ಲೂ ಉಲ್ಲೇಖವಿಲ್ಲ. ಬಿಳಿ ಕಾಗೆ ಇಲ್ಲ ಎಂದೂ ಹೇಳಲಾಗದು.ಆದರೆ ಬಿಳಿಕಾಗೆ ಒಂದು ರೋಗಗ್ರಸ್ತವಾಗಿರುತ್ತದೆ .ಶ್ವೇತ ಕುಷ್ಟ( ಪಾಂಡು ರೋಗ) ದಂತೆ ಇದು ಕೂಡಾ ಹಾರ್ಮೋನು ಕೊರತೆಯಿಂದ ಉಂಟಾಗುವ ಒಂದು ರೋಗ.ಈ ಬಿಳಿ ರೋಗಗ್ರಸ್ತ ಕಾಗೆ ಎಲ್ಲೋ ಬಹಳ ಅಪರೂಪದಿಂದ ಸಿಗಬಹುದು. ಇತ್ತೀಚೆಗೆ ಉಡುಪಿ ಜಿಲ್ಲೆಯ ಕೋಟದಲ್ಲಿ ಕಾಣಸಿಕ್ಕಿದೆ. ಬಿಳಿ ಗೂಗೆಯ ಪ್ರಭೇದ,ಬಿಳಿ ಹುಲಿ,ಆನೆ ,ನವಿಲು ಇತ್ಯಾದಿಗಳಿವೆ.ಆದರೆ ಬಿಳಿ ಕಾಗೆಯು ಪ್ರಭೇದವೇನಲ್ಲ. ಇದು ರೋಗ ಪ್ರಭೇದ.
ನಮ್ಮ ಡೋಂಗಿಗಳಿಗೆ ಇಷ್ಟು ಕಂಡರೆ ಸಾಕು.ಅದರ ಲಾಭ ಪಡೆಯುತ್ತಾರೆ.ಹೇಗೆ blue paint ಡಬ್ಬಕ್ಕೆ ಬಿದ್ದ ನರಿ Blue Jackal ಆಗಿ ಕಾಡಿನ ರಾಜನಾಗಿ ಮೆರೆದ ಕಾಲ್ಪನಿಕ ಕಥೆಯಾಯಿತೋ, ಹಾಗೆಯೇ ಬಿಳಿಕಾಗೆಯ ದರ್ಶನವು ಡೋಂಗಿ ಜ್ಯೋತಿಷ್ಯರಿಗೆ ಹಣ ಮಾಡುವ ಒಂದು ವಿಚಾರವಾಯಿತು ಎನ್ನಬಹುದು.
ವರಾಹ ಸಂಹಿತೆಯಾಗಲೀ, ಪ್ರಶ್ನ ಮಾರ್ಗಂ ಆಗಲೀ ಈ ಕಾಗೆಯ ವಿಚಾರವನ್ನೂ ಹೇಳಿಲ್ಲ ಮತ್ತು ಪ್ರಾಯಶ್ಚಿತ್ತ ಪರಿಹಾರವನ್ನೂ ಹೇಳಿಲ್ಲ. ಬಿಳಿಕಾಗೆಯ ವಿಚಾರ ಕೇಳುವಾಗ ಬಾಲ್ಯದ ನೆನಪೊಂದು ಹೊರಗೆ ಬರುತ್ತದೆ.ಅದೇನೆಂದರೆ, ಮನೆಯಲ್ಲಿ ಹೆಣ್ಣು ಮಕ್ಕಳು ರಜಸ್ವಲೆಯರಾಗಿ ದೂರ ಕುಳಿತಿದ್ದಾಗ ಮಕ್ಕಳು ‘ ಯಾಕೆ ದೂರ ದೂರ ಹೋಗುತ್ತಿ ಅಕ್ಕಾ’ ಎಂದು ಕೇಳಿದಾಗ, ಆ ಹೆಣ್ಣು ಮಗಳು ‘ ನಾನು ಮುಟ್ಟು ,ದೂರಹೋಗು’ ಅಂತಾಳೆ. ಆಗ ಆ ಕಿರಿಯರು ಕುತೂಹಲಿಗಳಾಗಿ, ‘ ಅಂದ್ರೇನೂ?’ ಎಂದು ಕೇಳುತ್ತಾರೆ. ಅಯ್ಯೋ ಇದನ್ನು ಹೇಗಪ್ಪಾ ವಿವರಿಸೋದು.ಮುಗ್ದ ಮಕ್ಕಳಲ್ಲಿ ನಿಜವಾದುದನ್ನು ಹೇಳುವುದಕ್ಕಾಗುವುದಿಲ್ಲ. ಹೇಳದಿದ್ದರೆ ಬಿಡುವುದೂ ಇಲ್ಲ ಎಂದು ‘ ಅದೂ ಇವತ್ತು ನನ್ನನ್ನು ಬಿಳೀ ಕಾಗೆ ಮುಟ್ಟಿದೆ ಪುಟ್ಟಾ.ಅದು ಮಲಿನ.ಅದಕ್ಕೆ ಮೂರು ದಿನ ದೂರವಿರಬೇಕೆಂದು ಅಪ್ಪ ಅಮ್ಮ ಹೇಳೌರೆ’ ಎಂದು ಬಾಯಿ ಮುಚ್ಚಿ ಸುತ್ತ ಇದ್ದದ್ದು ನೆನಪಾಯಿತು.
ಅಂತೂ ಯಾರೂ ನೋಡದ,ಕೇಳದ ವಿಚಾರವೇನಾದರೂ ಕಂಡರೆ ತಜ್ಞರು ಅದರ ಸಂಶೋಧನೆಗೆ ಹೋಗುತ್ತಾರೆ.ಹಣ ಮಾಡುವ ದಂದೆಯವರು ಹೀಗೆ ಬಿಳಿಕಾಗೆ ದರ್ಶನ ಶಾಂತಿ ಮಾಡುತ್ತಾರೆ. ಇದು ಅವರ ಬುದ್ಧಿವಂತಿಕೆಯೇ ಹೊರತು ಶ್ವೇತ ಕಾಗೆ ಎಂಬ ಪ್ರಭೇದ ಈ ದೇಶದಲ್ಲಿಲ್ಲ. ಹಿಂದೆ ಸ್ವಾಮಿಯೊಬ್ಬ ,ಶ್ರೀರಂಗ ಪಟ್ಟಣದ ದೇವಾಲಯದ ಕಳಸದ ಮೇಲೆ ಕುಳಿತು ಕಾಗೆಯು ಕಾವೇರಿ ನೀರು ಕುಡಿಯುತ್ತದೆ ಎಂದು ಗುಲ್ಲೆಬ್ಬಿಸಿದ್ದ.ಅಂದರೆ ಪ್ರಳಯ ಎಂದರ್ಥ.
ಇದೆಲ್ಲಾ ಉದರ ನಿಮಿತ್ತಂ ಬಹುಕೃತ ವೇಷಂ ಎಂದು ಹೇಳಬೇಕು.
Discussion about this post