ನವದೆಹಲಿ, ಅ.24: ದೇಶದ ಎರಡು ಕಡೆಗಳಲ್ಲಿ ಉಗ್ರ ಚಟುವಟಿಕೆಗಳು ಗರಿಗೆದರಿದ್ದು, ಇವರನ್ನು ಹಿಮ್ಮೆಟ್ಟಿಸುವಲ್ಲಿ ರಕ್ಷಣಾ ಪಡೆ ಯಶಸ್ವಿಯಾಗಿದೆ. ದೇಶದ ಭದ್ರತೆಗೆ ಎದುರಾಗಿವ ಬಾಹ್ಯ ಉಗ್ರರು ಹಾಗೂ ಆಂತರಿಕ ಉಗ್ರಗಾಮಿಗಳ ಉಪಟಳಕ್ಕೆ ತಡೆ ಹಾಕಲು ದೇಶ ಪಣತೊಟ್ಟಿದೆ.
ಜಮ್ಮು ಮತ್ತು ಕಾಶ್ಮೀರದ ಭಾರತ ಹಾಗೂ ಪಾಕ್ ಗಡಿಯಲ್ಲಿ ಪಾಕಿಸ್ಥಾನ ಅಪ್ರಚೋದಿತ ಗುಂಡಿನ ದಾಳಿ ಮುಂದುವರೆದಿದೆ. ಈ ದಾಳಿಗೆ ಓರ್ವ ಯೋಧ ಹುತಾತ್ಮನಾಗಿದ್ದಾನೆ. ಮೂವರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಸುಶೀಲ್ ಕುಮಾರ್ ಹುತಾತ್ಮ ಯೋಧ ಎಂಬ ಮಾಹಿತಿ ಇದೆ. ಕನಛಕ್, ಅಖ್ನೂರ್, ಅರ್ನಿಯಾ ಇನ್ನಿತರ ಗಡಿ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ಹೆಚ್ಚಾಗಿದೆ. ಭಾರತೀಯ ಸೇನೆ ಹಾಗೂ ಪಾಕಿಸ್ಥಾನ ಸೇನೆ ನಡುವೆ ದೊಡ್ಡಮಟ್ಟದ ಗುಂಡಿನ ಚಕಮಕಿ ಪ್ರತಿದಿನ ನಡೆಯುತ್ತಿದೆ.
ನಿನ್ನೆ ರಾತ್ರಿ ಪಾಕಿಸ್ಥಾನ ಸೇನೆ ಭಾರತೀಯ ಸೇನಾ ಕೇಂದ್ರದ ಮೇಲೆ ಶೆಲ್ ಗಳ ದಾಳಿ ನಡೆಸಿದೆ. ಜಮ್ಮುವಿನ ಆರ್‌ಎಸ್ ಪುರ, ಪರ್ಗ್ವಾಲ್ ಮತ್ತು ಕನಚಕ್‌ಪ್ರದೇಶಗಳ ಗಡಿಯ ಸೇನಾ ಕೇಂದ್ರ, ಜನವಸತಿ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸುತ್ತಿದೆ. ಗಡಿ ಪ್ರದೇಶದ ಹಲವಾರು ನಾಗರಿಕರ ಆಸ್ತಿಹಾನಿಯಾಗುತ್ತಿರುವ ಕುಯರಿತು ವರದಿಯಾಗಿವೆ.
ಆಂಧ್ರ ಪ್ರದೇಶ ಹಾಗೂ ಒಡಿಶಾ ಗಡಿ ಪ್ರದೇಶದಲ್ಲಿ ನಡೆದ ಬೃಹತ್ ಎನ್‌ಕೌಂಟರ್‌ನಲ್ಲಿ ೧೯ ಮಾವೋವಾದಿ ಉಗ್ರರು ಸಾವಿಗೀಡಾಗಿದ್ದಾರೆ.
ಮಲ್ಕಗಿರಿಯಿಂದ ೧೦ ಕಿಮೀ ದೂರದಲ್ಲಿರುವ ಎವೋಬಿ ಬಳಿ ಮಾವೋವಾದಿ ಮುಖಂಡರು ಸಭೆ ನಡೆಸುತ್ತಿದ್ದರು. ಮಾವೋವಾದಿಗಳು ಇರುವ ಕುರಿತು ಖಚಿತ ಮಾಹಿತಿ ಪೊಲೀಸ್ ಇಲಾಖೆಗೆ ದೊರೆತಿತ್ತು. ಆಂಧ್ರ ಪ್ರದೇಶದ ಗ್ರೇಹೌಂಡ್ಸ್ ಹಾಗೂ ಒಡಿಶಾದ ಎಸ್‌ಒಟಿ ಪೊಲೀಸರ ತಂಡ ದಾಳಿ ನಡೆಸಿತು. ತತಕ್ಷಣವೇ ಪ್ರತಿದಾಳಿ ನಡೆಸಿದ ಮಾವೋವಾದಿಗಳನ್ನು ಬಗ್ಗುಬಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ೧೯ ಉಗ್ರರನ್ನು ಬಲಿಪಡೆಯುವ ಜೊತೆಗೆ, ಎಕೆ ೪೭, ಎಸ್‌ಎಲ್‌ಆರ್ ಇನ್ನಿತರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸುಮಾರು ೬೦ಮಾವೋವಾದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ದಾಳಿ ನಡೆಸಿದಾಗ, ಪ್ರತಿದಾಳಿ ನಡೆಸಿದರು. ಆಧರೆ, ಹಲವಾರು ಜನ ಹತರಾಗಿ, ಪೊಲೀಸರ ಕೈ ಮೇಲಾಗುತ್ತಿದ್ದಂತೆ ಉಳಿದವರು ಅಲ್ಲಿಂದ ಓಡಿಹೋಗಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು, ತಮ್ಮ ತಂಡದೊಂದಿಗೆ ಬೀಡು ಬಿಟ್ಟಿದ್ದಾರೆ. ಓಡಿಹೋದವರಿಗಾಗಿ ತೀವ್ರಶೋಧ ನಡೆಸುತ್ತಿದ್ದಾರೆ.
Discussion about this post