Wednesday, December 6, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ಪರಿಶುದ್ಧತೆಯ ಪ್ರತೀಕ ಸೋದರಿ ನಿವೇದಿತಾ

October 28, 2016
in Army
0 0
0
Share on facebookShare on TwitterWhatsapp
Read - 2 minutes
ಭಾರತದಲ್ಲಿ ಜನಕ್ಕೆ, ಅದರಲ್ಲೂ ಸ್ತ್ರೀಯರಿಗೆ ಸೇವೆ ಸಲ್ಲಿಸಲು ಈಗ ಅಗತ್ಯವಾಗಿರುವುದು ಪುರುಷನಲ್ಲ, ಸ್ತ್ರೀ-ಸಾಕ್ಷಾತ್ ಸಿಂಹಿಣಿ. ನಿನ್ನ ವಿದ್ಯೆ, ಪ್ರಾಮಾಣಿಕತೆ, ಪರಿಶುದ್ಧತೆ, ಅನಂತಪ್ರೇಮ, ಧೃಢ ನಿರ್ಧಾರ ಎಲ್ಲಕ್ಕಿಂತ ಹೆಚ್ಚು ನಿನ್ನ ಕೆಲ್ಟಿಕ್ ರಕ್ತ- ಇವು ನಮಗೀಗ ಬೇಕಾಗಿರುವ ಮಹಿಳೆ ನೀನೇ ಎಂಬುದನ್ನು ತೀರ್ಮಾನಿಸಿವೆ. ಈ ಮಾತನ್ನು ಸ್ವಾಮಿ ವಿವೇಕಾನಂದರು ತಮ್ಮ ಪ್ರಿಯ ಶಿಷ್ಯೆ ಸೋದರಿ ನಿವೇದಿತಾಳಿಗೆ ಹೇಳಿದಂಥವು! ಈ ವರ್ಷ ಸೋದರಿ ನಿವೇದಿತಾರ ೧೫೦ನೆಯ ಜಯಂತಿ.
ಸೋದರಿ ನಿವೇದಿತಾಳ ಜೀವನ ಇಂದಿನ ಹೆಣ್ಣುಮಕ್ಕಳಿಗೆ ಆದರ್ಶ. ಮೇರಿ ಮತ್ತು ಸ್ಯಾಮುಅಲ್ ದಂಪತಿಗಳಿಗೆ ಹುಟ್ಟಿದ ಮೊದಲ ಮಗು ಮಾರ್ಗರೇಟ್ ನೊಬೆಲ್. ಈಕೆ ಹುಟ್ಟಿದ್ದು ಅಕ್ಟೋಬರ್ ೨೮, ೧೮೬೭ ರಂದು ಐರ್ಲೆಂಡಿನ ಡಂಗನಾನ್ ಎಂಬ ಸ್ಥಳದಲ್ಲಿ.
ಬಾಲ್ಯದಿಂದಲೂ ಮಾರ್ಗರೇಟ್ ಎಲಿಜಿಬೆತ್ ನೊಬೆಲ್‌ಳದು ಅಸಾಧಾರಣ ವ್ಯಕ್ತಿತ್ವ. ನೊಬೆಲ್ ಬಲು ಬುದ್ಧಿವಂತ ಹುಡುಗಿ. ಹೊಸದು ಏನನ್ನು ಕಂಡರೂ ಅತ್ಯಂತ ಆಸಕ್ತಿ. ಮನೆಗೆ ಯಾರೇ ಬಂದರೂ ಕುತೂಹಲ! ತಂದೆ ಸ್ಯಾಮುಅಲ್ ಧರ್ಮೋಪದೇಶಕರಾಗಿದ್ದರು. ತನ್ನ ಪ್ರೀತಿಯ ತಂದೆಯ ತ್ಯಾಗಗುಣ, ಸ್ನೇಹಹಸ್ತ, ಸೇವಾ ಗುಣಗಳನ್ನು ಕಂಡು ಆನಂದ ಪಡುತ್ತಿದ್ದಳು. ಅದನ್ನೇ ತಂದೆಯಿಂದ ಬಳುವಳಿಯಾಗಿ ಪಡೆದಳು. ನೊಬೆಲ್‌ಳ ತಾತ ಹ್ಯಾಮಿಲ್ಟನ್ ಅಪಾರ ರಾಷ್ಟ್ರಭಕ್ತರಾಗಿದ್ದವರು. ರಾಷ್ಟ್ರೀಯ ವಿಚಾರಗಳನ್ನು ಜನರಲ್ಲಿ ಬಿತ್ತುತ್ತಾ ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ತಂದೆಯ ದೈವ ಭಕ್ತಿ, ತಾತನ ದೇಶಭಕ್ತಿ ಎರಡೂ ಬಾಲಕಿ ನೊಬೆಲ್‌ಳಲ್ಲಿ ಸಹಜವಾಗಿ ಸಮ್ಮೇಳಿತಗೊಂಡಿದ್ದವು! ಆಕೆ ತನ್ನ ಶಿಕ್ಷಣವನ್ನು ಮುಗಿಸಿ ೧೮ನೆಯ ವಯಸ್ಸಿನಲ್ಲಿಯೇ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದಳು. ಆಕೆಯ ಮನಸ್ಸು ಆಧ್ಯಾತ್ಮಿಕ ಚಿಂತನೆಗಳತ್ತ ಸಾಗಿತು, ಸತ್ಯದ ಹುಡುಕಾಟ ತೀವ್ರವಾಯಿತು!
೧೮೯೫ರ ನವೆಂಬರ್ ತಿಂಗಳಲ್ಲಿ ಮಾರ್ಗರೇಟ್ ಭಾರತದಿಂದ ಬಂದ ಹಿಂದೂ ಯೋಗಿಯೊಬ್ಬನ ಬಗ್ಗೆ ಎಲ್ಲರ ಬಾಯಲ್ಲೂ ಕೇಳಿದ್ದಳು. ಅವರು ಸ್ವಾಮಿ ವಿವೇಕಾನಂದರೆಂದು ತಿಳಿದು ಅವರ ಮಾತುಗಳನ್ನಾಲಿಸಲು ಹೋದಳು. ಸ್ವಾಮಿ ವಿವೇಕಾನಂದರ ನಿರರ್ಗಳ ವಾಗ್ಝರಿಯನ್ನು ಆಲಿಸಿ ಆಕೆ ಮಂತ್ರಮುಗ್ಧಳಾದಳು! ಒಂದೇ ಬಾರಿಗೆ ವಿವೇಕಾನಂದರು ಹೇಳಿದ್ದೆಲ್ಲವನ್ನೂ ಸ್ವೀಕರಿಸಲಿಲ್ಲವಾದರೂ ಬರುಬರುತ್ತಾ ಸ್ವಾಮೀಜಿಯ ಮಾತುಗಳ ಸತ್ಯತೆ ಅರ್ಥವಾಗತೊಡಗಿತು. ವಿವೇಕಾನಂದರು ಭಾರತಕ್ಕೆ ಹಿಂದಿರುಗುವ ಸಮಯ ಬಂದಿತು. ತಾನೂ ಹೋಗುವುದಾಗಿ ನಿಶ್ಚಯಿಸಿದಳು. ಹಲವು ದಿನಗಳ ಬಳಿಕ ಸ್ವಾಮೀಜಿಯಿಂದ ಸಮ್ಮತಿಯ ಪತ್ರ ಬಂದಿತು. ೧೮೯೮ರಲ್ಲಿ ಮಾರ್ಗರೇಟ್ ಭಾರತಕ್ಕೆ ಧಾವಿಸಿ ಬಂದಳು!
ಭಾರತಕ್ಕೆ ಬಂದ ಮಾರ್ಗರೇಟ್ ನೋಬೆಲ್ ಸ್ವಾಮಿ ವಿವೇಕಾನಂದರ ಸೂಚನೆಯಂತೆ ಬದುಕು ನಡೆಸತೊಡಗಿದಳು. ಅದೇ ವರ್ಷ ಮಾರ್ಚ್ ೨೫ ರಂದು ವಿವೇಕಾನಂದರು ಮಾರ್ಗರೇಟ್‌ಗೆ ದೀಕ್ಷೆಯನ್ನಿತ್ತು ನಿವೇದಿತಾ ಎಂಬ ಹೆಸರು ಕೊಟ್ಟರು. ಸ್ವಾಮಿ ವಿವೇಕಾನಂದರು ಭಾರತಮಾತೆಯ ಪದತಲಕ್ಕೆ ಅರ್ಪಿಸಿದ ಅನುಪಮ ಪುಷ್ಪ ಸೋದರಿ ನಿವೇದಿತಾ.
ಹಿಂದೂ ಸಂಸ್ಕೃತಿ ಅವಳ ಉಸಿರು, ಭರತ ಖಂಡಕ್ಕೆ ಸೋದರಿ. ದೀನ-ದಲಿತರ ನೋಡುವ ಪರಿ, ಎನಿತು ಕಾರ್ಯದ ವೈಖರಿ. ಈ ಮಾತುಗಳು ಅಕ್ಷರಶಃ ಅಕ್ಕ ನಿವೇದಿತಾಳಿಗೆ ಹೋಲಿಕೆಯಾಗುವಂಥದ್ದು. ಭಾರತವು ನಿವೇದಿತಾಳೊಂದಿಗೆ ಝೇಂಕೃತಿಗೊಳ್ಳುತ್ತದೆ ಎಂಬ ವಿವೇಕಾನಂದರ ಮಾತು ಅಕ್ಷರಶಃ ಸತ್ಯವಾಯಿತು. ಅಕ್ಕ ನಿವೇದಿತಾ ಭಾರತೀಯರಿಗಿಂತಲೂ ಭಾರತೀಯಳಾಗಿ ಬಾಳಿದಳು. ಅತ್ಯಂತ ಅಲ್ಪ ಕಾಲದಲ್ಲಿಯೇ ಹಿಂದೂ ರೀತಿ-ನೀತಿಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಆಕೆ ಯಶಸ್ವಿಯಾದಳು!
ಮಹಾಮಾರಿ ಪ್ಲೇಗ್ ಬಂಗಾಳಕ್ಕೆ ಕಾಲಿಟ್ಟಾಗ ಅಕ್ಕ ನಿವೇದಿತಾ ಹಗಲು-ರಾತ್ರಿಯೆನ್ನದೇ, ತನ್ನ ಆರೋಗ್ಯದ ಬಗ್ಗೆಯೂ ಯೋಚಿಸದೇ ರೋಗಿಗಳ ಸೇವೆ ಮಾಡಿದಳು. ಸ್ವಾಮಿ ವಿವೇಕಾನಂದರ ಆದರ್ಶವನ್ನು ಪೂರ್ಣಗೊಳಿಸುವುದೊಂದೇ ಅವಳ ಉದ್ದೇಶವಾಗಿದ್ದರೂ ಅದರಲ್ಲಿ ತನ್ನದೇ ಮಾರ್ಗವನ್ನು ಹಿಡಿದಳು ನಿವೇದಿತಾ. ಅವಳ ಭಾರತದ ಮೇಲಿನ ಪ್ರೀತಿ ಹೇಳತೀರದು. ತನ್ನ ಆಪ್ತ ಸ್ನೇಹಿತೆಯಾದ ಮಿಸ್ ಮ್ಯಾಕ್ಲಿಯೋಡ್ ಬಳಿ ನಿವೇದಿತಾ ನನ್ನ ಕರ್ತವ್ಯ ಇಡೀ ರಾಷ್ಟ್ರವನ್ನೇ ಎಚ್ಚರಗೊಳಿಸುವುದು ಎಂದು ತಿಳಿಸಿದ್ದಳು.
ಸ್ವಾಮಿ ವಿವೇಕಾನಂದರ ಮಾತಿನಂತೆ ಭಾರತದ ಸ್ತ್ರೀಯರಿಗಾಗಿಯೇ ತನ್ನ ಜೀವನವನ್ನೇ ಸಮರ್ಪಿಸಿದಳು. ವಿವೇಕಾನಂದರ ಕನಸಾದ ಭಾರತೀಯ ಸ್ತ್ರೀಯರ ಶಿಕ್ಷಣಕ್ಕೆ ನಾಂದಿ ಹಾಡಿದಳು. ೧೮೯೮ ರ ನವೆಂಬರ್‌ನಲ್ಲಿ ಹೆಣ್ಣು ಮಕ್ಕಳಿಗಾಗಿ ಒಂದು ಶಾಲೆಯನ್ನು ಪ್ರಾರಂಭಿಸಿದಳು. ಆಕೆಯ ಶಾಲೆಯಲ್ಲಿ ಆಟ-ಪಾಠಗಳ ನಡುವೆ ನೈತಿಕ ಶಿಕ್ಷಣವೂ ಇರುತ್ತಿತ್ತು. ಆಕೆ ತೀಕ್ಷ್ಣ ದೃಷ್ಟಿಯಿಂದ ಮಕ್ಕಳನ್ನು ಪರಿಶೀಲಿಸುತ್ತಿದ್ದಳು.
ಎಲ್ಲ ಕೆಲಸಗಳ ನಡುವೆ ಅಕ್ಕ ನಿವೇದಿತಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿದ್ದಳು ಎಂದೇ ಹೇಳಬಹುದು. ಭಾರತದ ಜನರಿಗಾಗಿ ಆಕೆ ತನ್ನ ಸಂಪೂರ್ಣ ಸಮಯವನ್ನು ಕೊಟ್ಟಳು! ೧೯೧೧ ರ ವೇಳೆಗೆ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸವಾಯಿತು. ಜಗದೀಶ್ ಚಂದ್ರ ಬೋಸರೊಡನೆ ಆರೋಗ್ಯದ ಸಂಬಂಧ ಆಕೆ ಡಾರ್ಜಲಿಂಗ್‌ಗೆ ತೆರಳಿದಳು. ಅಕ್ಟೋಬರ್ ೧೩, ೧೯೧೧ ರಂದು ಆಕೆ ತಾಯಿ ಕಾಳಿಯಲ್ಲಿ ಲೀನವಾದಳು! ತನ್ನದೆಲ್ಲವನ್ನೂ ಭಾರತಕ್ಕೆ ಸಮರ್ಪಿಸಿದ ನಿವೇದಿತಾ, ಭಾರತೀಯರಿಗೆಲ್ಲಾ ಭಗಿನಿ ನಿವೇದಿತಳಾಗಿ, ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಪುತ್ರಿಯಾಗಿ, ಭಾರತ ಮಾತೆಯ ಶ್ರೇಷ್ಠ ಪುತ್ರಿಯರಲ್ಲಿ ಒಬ್ಬಳಾಗಿ ಜೀವಿಸಿದಳು.
1902 ರಲ್ಲಿ ಸ್ವಾಮಿ ವಿವೇಕಾನಂದರ ಮಹಾಸಮಾಧಿಯ ನಂತರ ಅಕ್ಕ ನಿವೇದಿತಾ ಭಾರತದ ಸ್ವಾತಂತ್ರ್ಯಕ್ಕಾಗಿ ಕಾರ್ಯಮಾಡುವ ಪಣತೊಟ್ಟಳು. ತರುಣರನ್ನು ಸೇರಿಸಿ ಭಾರತದ ಶ್ರೇಷ್ಠತೆಯನ್ನು ಸಾರುತ್ತಿದ್ದಳು, ಆಂಗ್ಲರ ತಪ್ಪು ನೀತಿಗಳನ್ನು ಪತ್ರಿಕೆಗಳಲ್ಲಿ ಬರೆದು ವಿರೋಧಿಸುತ್ತಿದ್ದಳು. ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದಳು. ಅರಬಿಂದೋ ಘೋಷ್, ಬಾಗಾ ಜತಿನ್, ರಮೇಶ್ ಚಂದ್ರ ದತ್ತ, ಸತೀಶ್ ಚಂದ್ರ ಮುಖರ್ಜಿ, ಬಿಪಿನ್ ಚಂದ್ರ ಪಾಲ್, ರಾಸಬಿಹಾರಿ ಘೋಷ್, ಜಗದೀಶ್ ಚಂದ್ರ ಬೋಸ್ ಹೀಗೆ ಹಲವರ ಸಂಪರ್ಕ ಏರ್ಪಟ್ಟಿತು. ತನಗೆ ತಿಳಿದ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಳು. ಈ ಎಲ್ಲರ ನಡುವೆ ನಿವೇದಿತಾ ಭಗಿನಿ ನಿವೇದಿತಾ ಎಂದೇ ಪ್ರಖ್ಯಾತಳಾದಳು. 
 
ನಿವೇದಿತಾ ಅವರಲ್ಲಿದ್ದ ಭಾರತದ ಮೇಲಿನ ಗೌರವವನ್ನು ಕಂಡು ಗೋಪಾಲಕೃಷ್ಣ ಗೋಖಲೆಯವರು ನಿವೇದಿತಾ ಭಾರತದ ಕರೆಗೆ ಓಗೊಟ್ಟು ನಮ್ಮಲ್ಲಿಗೆ ಬಂದಳು. ಆಕೆ ಭಾರತಕ್ಕೆ ತನ್ನ ಹೃದಯದ ಪೂಜೆಯನ್ನು ಸಲ್ಲಿಸುವುದಕ್ಕೆ ಬಂದಳು; ನಮ್ಮ ಮುಂದಿರುವ ಶ್ರೇಷ್ಠ ಕಾರ್ಯದಲ್ಲಿ ಭಾರತದ ಪುತ್ರ-ಪುತ್ರಿಯರ ನಡುವೆ ಸ್ಥಾನ ಗಳಿಸುವುದಕ್ಕೆ ಬಂದಳು ಎಂದು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರೇ ಇಂಗ್ಲೆಂಡಿನ ನನ್ನ ಕಾರ್ಯಲತೆಯ ಅತ್ಯಂತ ಸುಂದರ ಪುಷ್ಪ ನಿವೇದಿತಾ ಎಂದು ಹೇಳಿರುವುದು ಆಕೆಯ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಪ್ರತಿಬಿಂಭಿಸುತ್ತದೆ.
 *ಲೇಖಕರು: ಪ್ರಿಯಾ, ಶಿವಮೊಗ್ಗ
Previous Post

ಕಣಿವೆ ರಾಜ್ಯದ ಶಿಕ್ಷಣಕ್ಷೇತ್ರ ಸವಾಲಿನಲ್ಲಿ: ಸುಟ್ಟುಹೋದ ಶಾಲೆಗಳು, ಗೊಂದಲದಲ್ಲಿ ಶಿಕ್ಷಣ ಇಲಾಖೆ,ವಿದ್ಯಾರ್ಥಿಗಳು

Next Post

‘ವರ್ಧನ’ ಮುಕ್ತಾಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

‘ವರ್ಧನ’ ಮುಕ್ತಾಯ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಭಾರತ ಸಂವಿಧಾನ ವಿಶ್ವದಲ್ಲೇ ಶ್ರೇಷ್ಟವಾದದ್ದು: ಬಂಡೆಪ್ಪ ಖಾಶೆಂಪುರ್ ಅಭಿಪ್ರಾಯ

December 6, 2023

ಸಾಂಸ್ಕೃತಿಕ ನೆಲೆಯ ಭಾರತ, ಶಾಸ್ತ್ರ-ಸಂಪತ್ತುಗಳಿಂದಲೂ ಸಮೃದ್ಧ: ಚಿದಾನಂದಸ್ವಾಮಿ ಅಭಿಪ್ರಾಯ

December 6, 2023

ಮಾನವೀಯತೆಯ ಔಷಧಿ ನೀಡಿದ ಸಾಮಾಜಿಕ ವೈದ್ಯ ಅಂಬೇಡ್ಕರ್: ಡಾ. ಅರ್ಜುನ ಗೋಳಸಂಗಿ ಅಭಿಪ್ರಾಯ

December 6, 2023

ಡಿ.8ರಂದು ಸಾರ್ಥಕ ಸುವರ್ಣ: ಸಂಸದ ರಾಘವೇಂದ್ರ ಅವರಿಗೆ ಅಭಿನಂದನಾ ಕಾರ್ಯಕ್ರಮ

December 6, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಾರತ ಸಂವಿಧಾನ ವಿಶ್ವದಲ್ಲೇ ಶ್ರೇಷ್ಟವಾದದ್ದು: ಬಂಡೆಪ್ಪ ಖಾಶೆಂಪುರ್ ಅಭಿಪ್ರಾಯ

December 6, 2023

ಸಾಂಸ್ಕೃತಿಕ ನೆಲೆಯ ಭಾರತ, ಶಾಸ್ತ್ರ-ಸಂಪತ್ತುಗಳಿಂದಲೂ ಸಮೃದ್ಧ: ಚಿದಾನಂದಸ್ವಾಮಿ ಅಭಿಪ್ರಾಯ

December 6, 2023

ಮಾನವೀಯತೆಯ ಔಷಧಿ ನೀಡಿದ ಸಾಮಾಜಿಕ ವೈದ್ಯ ಅಂಬೇಡ್ಕರ್: ಡಾ. ಅರ್ಜುನ ಗೋಳಸಂಗಿ ಅಭಿಪ್ರಾಯ

December 6, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!