ಇಸ್ಲಾಮಾಬಾದ್: ಪಾಕಿಸ್ಥಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆ.ಜ.ರಿಜ್ವಾನ್ ಅಖ್ತರ್ ಅವರನ್ನು ಮುಂದಿನ ಕೆಲವೇ ವಾರಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಶನಿವಾರ ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ.
ರಿಜ್ವಾನ್ 2014ರ ಸೆಪ್ಟೆಂಬರ್ ನಲ್ಲಿ ಇಂಟರ್ ಸವರ್ಿಸಸ್ ಇಂಟೆಲಿಜೆನ್ಸ್ (ಐಎಸ್ಐ)ನ ಮಹಾನಿದರ್ೆಶಕರಾಗಿ ನೇಮಕ ಮಾಡಲಾಗಿತ್ತು.ಸಾಮಾನ್ಯವಾಗಿ 3ವರ್ಷಗಳ ಅವಧಿ ಇವರದಾಗಿರುತ್ತದೆ.ಆದರೆ ಇದೀಗ ಅವಧಿಗೆ ಮುನ್ನವೇ ಅವರನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಿಜ್ವಾನ್ ಸ್ಥಾನಕ್ಕೆ ಕರಾಚಿ ಸೇನಾ ಕಮಾಂಡರ್ ಲೆ.ಜ.ನವೀದ್ ಮುಖ್ತರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ಮಾಡಲಾಗಿದೆ.ಆದರೆ ಸೇನಾ ವಕ್ತಾರ ಲೆ.ಜ.ಅಸೀಮ್ ಬಜ್ವಾ ಮಾತ್ರ ಇದನ್ನು ಅಲ್ಲಗಳೆದು `ಅಂತಹ ಯಾವುದೇ ಸಂಗತಿ’ಇಲ್ಲ ಎಂದಿದ್ದಾರೆ.
Discussion about this post