Read - < 1 minute
ಶ್ರೀನಗರ: ಕಾಶ್ಮೀರ ವಿಚಾರದ ಕುರಿತಾಗಿ ಹೋರಾಟ ಮಾಡುತ್ತಿರುವ ಪ್ರತ್ಯಾಕತಾವಾದಿಗಳಿಗೆ ತಿರುಗೇಟು ನೀಡಿರುವ ಕಾಶ್ಮೀರಿ ಯುವಕರು, ಸೇನೆ ಸೇರಲು ನಾಮುಂದು, ತಾಮುಂದು ಎಂದು ಮುಂದೆ ಬಂದಿದ್ದಾರೆ.
ಭದ್ರತಾ ಪಡೆಗಳು ನಡೆಸುವ ನೇಮಕಾತಿ ರ‌್ಯಾಲಿಯನ್ನು ಬಹಿಷ್ಕರಿಸುವಂತೆ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿ ಕರೆ ನೀಡಿದ್ದಾರೆ. ಆದರೆ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಸುಮಾರು ೬೦೦ ಯುವಕರು ಪಾಲ್ಗೊಂಡಿದ್ದರು.
ಭಾರತೀಯ ಸೇನೆಯಲ್ಲಿ ಯೋಧರಾಗಿ ಹಾಗೂ ಗುಮಾಸ್ತರಾಗಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಯುವಕರನ್ನು ನೇಮಿಸಿಕೊಳ್ಳಲು ಈ ರ‌್ಯಾಲಿ ಆಯೋಜಿಸಲಾಗಿತ್ತು. ನೇಮಕಾತಿ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ಇಚ್ಛೆ ವ್ಯಕ್ತಪಡಿಸಿ ೧೨ ಸಾವಿರ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕೇವಲ ಶೇ.೫ ರಷ್ಟು ಜನರಿಗೆ ಮಾತ್ರ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುವುದು ಬೇಕಾಗಿರುವುದು ಎಂದಿದ್ದಾರೆ.
Discussion about this post