ಬೆಂಗಳೂರು: ಅ:28: ಮಳೆಯ ಅಭಾವದಿಂದ ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಾಗುತ್ತಿದ್ದು, ಇನ್ನೂ 35 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಲು ರಾಜ್ಯ ಸಕರ್ಾರ ಸಿದ್ದತೆ ನಡೆಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಬರಪಿಡೀತ ತಾಲ್ಲೂಕುಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಖಚಿತ ಪಡಿಸಿದರು.
ಈ ಮೊದಲು 64 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ನಂತರ ಸೆಪ್ಟಂಬರ್ವರೆಗೂ ನಡೆದ ಸಮೀಕ್ಷೆಯಲ್ಲಿ ಬರ ಪೀಡಿತ ತಾಲ್ಲೂಕುಗಳ ಸಂಖ್ಯೆ 110ಕ್ಕೆ ಏರಿತ್ತು. ಈ ತಿಂಗಳ ಅಂತ್ಯಕ್ಕೆ ಇನ್ನೂ 35 ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿದು ಖಚಿತವಾಗಿದೆ.
ಈಗಾಗಲೇ ಮಳೆ ಕೊರತೆಯಿಂದ 13 ಸಾವಿರ ಕೋಟಿ ರೂ.ನಷ್ಟು ಬೆಳೆ ನಷ್ಟವಾಗಿದೆ. ಮಾರ್ಗಸೂಚಿಯಂತೆ 3375 ಕೋಟಿ ರೂ.ಗಳ ಪರಿಹಾರ ನೀಡಬೇಕು ಎಂದು ರಾಜ್ಯ ಕಂದಾಯ ಸಚಿವರು ದೆಹಲಿಯಲ್ಲಿ ಕೃಷಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ನ.2ರಂದು ಕೇಂದ್ರ ಸಕರ್ಾರದ ಕೃಷಿ ಮತ್ತು ಸಹಕಾರ ಇಲಾಖೆಯ ಜಂಟಿ ಕಾರ್ಯದಶರ್ಿ ನೇತೃತ್ವದ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಜಯಚಂದ್ರ ಹೇಳಿದರು.
ಕಾವೇರಿ ನದಿ ಪಾತ್ರದಲ್ಲಿ 120 ಕೋಟಿ ನಷ್ಟ:
ಮಳೆಯ ಕೊರತೆಯಿಂದ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸಕರ್ಾರ ಘೋಷಿಸಿತ್ತು. ಇದರಿಂದ 88,884 ಎಕರೆಯಲ್ಲಿ ಬಿತ್ತನೆಯಾಗಿಲ್ಲ. ಪ್ರತಿ ಹೆಕ್ಟೇರ್ಗೆ 13500 ಸಾವಿರ ರೂ.ನಂತೆ ಕಾವೇರಿ ನದಿ ಪಾತ್ರದಲ್ಲಿ 120 ಕೋಟಿ ರೂ.ನಷ್ಟು ಬೆಳೆ ನಷ್ಟವಾಗಿದೆ. ಇದಕ್ಕೂ ಪರಿಹಾರ ನೀಡುವಂತೆ ಕೇಂದ್ರ ಸಕರ್ಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆಗೆ ಒಂದೆರಡು ಬಾರಿ ನದಿ ನೀರು ಬಿಡಲಾಗಿದೆ. ಆದರೂ ಕೆಲವೆಡೆ ಬೆಳೆ ನಷ್ಟವಾಗಿದೆ. ಇದರ ನಷ್ಟವನ್ನು ಅಂದಾಜು ಮಾಡಲಾಗುವುದು ಎಂದು ಹೇಳಿದರು.
ಈರುಳ್ಳಿಗೆ ಬೆಂಬಲ ಬೆಲೆ:
ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಯನ್ನು ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ರಾಜ್ಯ ಸಕರ್ಾರ ನಿರ್ಧರಿಸಿದೆ. ಪ್ರತಿ ಕೆ.ಜಿ.ಗೆ 6.24 ರೂ.ದರದಲ್ಲಿ ನ.3ರಿಂದ ಖರೀದಿ ಆರಂಭಿಸುವುದಾಗಿ ಜಯಚಂದ್ರ ಹೇಳಿದರು.
ಮಾರುಕಟ್ಟೆ ಮಧ್ಯ ಪ್ರವೇಶಿಸಲು ಆರ್ವತ ನಿಧಿಯಿಂದ ರಾಜ್ಯ ಸಕರ್ಾರ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಕರ್ಾರದಿಂದ 10 ಕೋಟಿ ರೂ.ಗಳು ಬರುವ ನಿರೀಕ್ಷೆಯಿದೆ. ಆದರೆ ಸದ್ಯಕ್ಕೆ ಕೇಂದ್ರದ ನೆರವಿಗೆ ಕಾಯುತ್ತಾ ಕೂರದೆ ಖರೀದಿ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮೂರೂವರೆ ಲಕ್ಷ ಎಕರೆಯಲ್ಲಿ ಸುಮಾರು 23 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಬೆಳೆಯಲಾಗಿದೆ. ಎಲ್ಲವನ್ನೂ ಖರೀದಿ ಮಾಡಲು ನಿರ್ಧರಿಸಲಾಗಿದೆ. ಈಗ ಕೈಗೆ ಬಂದಿರುವ ಈರುಳ್ಳಿ ಬೆಳೆಯನ್ನು ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಿಲ್ಲ. ಹಾಗಾಗಿ ರಫ್ತು ಮಾಡುವ ಸಂಬಂಧವೂ ವರ್ತಕರ ಜೊತೆ ಚಚರ್ೆ ನಡೆಸಲಾಗುವುದು. ಸಕರ್ಾರದ ಮಾರುಕಟ್ಟೆ ಮಧ್ಯ ಪ್ರವೇಶದಿಂದ ಈಗ ಇರುವೆ ಬೆಲೆಯಲ್ಲಿ ಚೇತರಿಕೆ ಕಾಣುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಬಿಎಸ್ವೈ ಪ್ರಕರಣದ ಬಗ್ಗೆ ನಿಧರ್ಾರವಿಲ್ಲ:
ಜಿಂದಾಲ್ನಿಂದ ಲಂಚ ಪಡೆದ ಪ್ರಕರಣದಲ್ಲಿ ಸಿಬಿಐ ಕೋಟರ್್ನಿಂದ ಖುಲಾಸೆಗೊಂಡಿರುವ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ರಾಜ್ಯ ಸಕರ್ಾರ ಯಾವುದೇ ನಿಧರ್ಾರ ಕೈ ಕೊಂಡಿಲ್ಲ ಎಂದು ಅವರು ಹೇಳಿದರು.
ಖಾಸಗಿ ದೂರು ಆಧರಿಸಿ ಪ್ರಕರಣದ ವಿಚಾರಣೆ ನಡೆದಿತ್ತು. ಪ್ರಕರಣ ಖುಲಾಸೆಗೊಂಡ ನಂತರ ದೂರುದಾರರು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಸಿಬಿಐ ಕೋಟರ್್ ವಿಚಾರಣೆ ನಡೆಸಿದ್ದರಿಂದ ಮೇಲ್ಮನವಿಗೆ ರಾಜ್ಯ ಸಕರ್ಾರದ ಅಥವಾ ಕೇಂದ್ರ ಸಕರ್ಾರದ ಅಭಿಪ್ರಾಯ ಕೇಳುತ್ತಾರೋ ಗೋತ್ತಿಲ್ಲ. ಒಂದು ವೇಳೆ ರಾಜ್ಯ ಸಕರ್ಾರದ ಅಭಿಪ್ರಾಯ ಕೇಳಿದರೆ ಸೂಕ್ತ ನಿಧರ್ಾರ ತೆಗೆದುಕೊಳ್ಳುವುದಾಗಿ ಹೇಳಿದರು.
=
Discussion about this post