ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಜಯಗಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ತಮ್ಮ ಗೆಲುವಿನ ರಹಸ್ಯವನ್ನು ಬಿಚ್ಚಿಟ್ಟಲ್ಲದೇ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಹುಮ್ಮಸ್ಸಿನಲ್ಲಿ ಅಂದು ನಕಲಿ ಮತದಾನ ನಡೆದಿದ್ದನ್ನು ಬಹಿರಂಗವಾಗಿಯೇ ಹೇಳಿಕೊಂಡರು.
ಅಂದಿನ ಉಪಚುನಾವಣೆಯಲ್ಲಿ ಸತ್ತವರ ಓಟು ಪಡೆದ ಬಗ್ಗೆ ಜನರ ಜೊತೆ ಖುಷಿ ಹಂಚಿಕೊಂಡರು.
ನಗು ನಗುತ್ತಲೇ ಚುನಾವಣೆಯಲ್ಲಿನ ಅಕ್ರಮ ಮತದಾನದ ಬಗ್ಗೆ ಪ್ರಶ್ನೆ ಹುಟ್ಟುಹಾಕಿದರು,
ಹಾಗಿದ್ದರೆ ಅಂದಿನ ಉಪ ಚುನಾವಣೆಯಲ್ಲಿ ಸಿಎಂಗೆ ಅಕ್ರಮ ಮತದಾನದ ಲಾಭವಾಗಿತ್ತಾ ಎಂಬ ಬಗ್ಗೆ
ಕೆಂಪೇಗೌಡನ ಹುಂಡಿಯಲ್ಲಿನ ಸಿಎಂ ನೀಡಿದ ಹೇಳಿಕೆಯಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಚಚರ್ೆ ಆರಂಭವಾಗಿದೆ.
ಭಾಷಣದ ಸಾರಾಂಶ:
ಈ ಊರಿನ ಜನರು ನನಗೆ 100ಕ್ಕೆ 100ಓಟು ಹಾಕಿದ್ದೀರಿ.
ಉಪಚುನಾವಣೆಯಲ್ಲಿ ಸತ್ತಿದ್ದವರ ಓಟನ್ನು ನನಗೆ ಹಾಕಿಸಿದ್ದೀರಿ.
ಈ ಊರಿನಲ್ಲಿದ್ದ 687 ಓಟುಗಳನ್ನು ನನಗೆ ಹಾಕಿದ್ದೀರಿ.
1977 ರಿಂದಲೂ ನನ್ನ ಮೇಲೆ ಅಭಿಮಾನ ಇಟ್ಟಿದ್ದೀರಿ.
ಹಾಗಾಗಿ ಈ ಊರಿನ ಜನರೆಂದರೆ ನನಗೆ ತುಂಬಾ ಪ್ರೀತಿ…
Discussion about this post