Read - < 1 minute
ನವದೆಹಲಿ: ಇತ್ತೀಚೆಗೆ ಬಿಡುಗಡೆ ಮಾಡಿರುವ ಫಂಡ್ ಗಳನ್ನು ರಾಜ್ಯ ಅಸೋಸಿಯೇಷನ್ ಗಳು ಫಂಡ್ ಗಳನ್ನು ಯಾವುದೇ ಕಾರಣಕ್ಕೂ ವರ್ಗಾಯಿಸುವುದಾಗಲಿ ಅಥವಾ ಬಳಕೆ ಮಾಡುವುದನ್ನಾಗಲಿ ಮಾಡಬಾರದೆಂದು ಸುಪ್ರೀಂ ಕೋರ್ಟ್ ನೇಮಿತ ಲೋಧಾ ಸಮಿತಿ ಇ- ಮೇಲ್ ಮೂಲಕ ಎಚ್ಚರಿಸಿದೆ.
ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ರದ್ದಾದ ಹಿನ್ನೆಲೆಯಲ್ಲಿ ಸೆ.29ರಿಂದ ಅ.1ರ ನಡುವೆ ಬಿಸಿಸಿಐ ತುರ್ತಾಗಿ ರಾಜ್ಯ ಅಸೋಸಿಯೇಷನ್ ಗಳಿಗೆ ಮೂಲಭೂತ ಸಬ್ಸಿಡಿ ರೂಪದಲ್ಲಿ 10ರಿಂದ 20 ಕೋಟಿ ರೂ. ನೀಡಿದೆ ಎಂಬುದನ್ನು ಬ್ಯಾಂಕಗಳು ನಮಗೆ ಹೇಳಿವೆ ಎಂದು ಇ-ಮೇಲ್ ನಲ್ಲಿ ರಾಜ್ಯ ಅಸೋಸಿಯೇಷನ್ ಗಳಿಗೆ ತಿಳಿಸಿದೆ.
ಅ.6ರಂದು ಶಿಫಾರಸುಗಳ ಅಳವಡಿಸುವ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಇದರ ಮೊದಲ ಬಿಸಿಸಿಐ ರಾಜ್ಯ ಅಸೋಸಿಯೇಷನ್ ಗಳಿಗೆ ಹಣ ವರ್ಗಾಯಿಸಿ ಸಮಿತಿ ವಿರುದ್ಧವಾಗಿ ನಡೆದುಕೊಂಡಿದೆ. ಇದೀಗ ನಿಮಗೆ ತಲುಪಿರುವ ಹಣವನ್ನು ಯವುದೇ ಕಾರಣಕ್ಕೂ ಹಣ ವರ್ಗಾಯಿಸಬಾರದೆಂದು ಸೂಚಿಸುತ್ತಿದ್ದೇವೆ ಎಂದು ಲೋಧಾ ಸಮಿತಿ ತಿಳಿಸಿದೆ.
Discussion about this post