ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಂದನ ಫೌಂಡೇಷನ್, ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ, ಕಲಾಜ್ಯೋತಿ ಹಾಗೂ ರಂಗಸೌರಭ ಇವರ ಸಂಯುಕ್ತಾಶ್ರಯದಲ್ಲಿ `ಆಡೋಣ ಬಾ, ರಂಗಾಗಿ ರಂಗ ಏರೋಣ ಬಾ’ ಎಂಬ ಶೀರ್ಷಿಕೆಯಡಿ ಮಕ್ಕಳ ಬೇಸಿಗೆ ಶಿಬಿರವನ್ನು Summer Camp ಏ.15ರಿಂದ ಮೇ7ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕೋಟೆ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ರಂಗ ನಿರ್ದೇಶಕಿ ಹಾಗೂ ನಾಟಕಕಾರರಾದ ಉಷಾ ನಟೇಶ್ ಕಾಸರವಳ್ಳಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 5ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿರುವ ಈ ಶಿಬಿರದಲ್ಲಿ ಕಂಸಾಳೆ, ಗಮಕ, ನಾಟಕ, ಸಂಗೀತ, ಪೂಜಾ ಕುಣಿತ, ಅಭಿನಯ, ಕಳರಿ, ರಂಗಾಟಗಳು, ಕೋಲಾಟ, ಮಕ್ಕಳ ಸಂತೆ, ಪ್ರಸಾದನ, ರಂಗೋಲಿ, ಜಾನಪದ ನೃತ್ಯ, ಯಕ್ಷಗಾನ ಹೆಜ್ಜೆಗಳು, ರಂಗ ಗೀತೆಗಳು, ಕಥೆಗಳು, ದೇಶಭಕ್ತಿಗೀತೆ, ಸಾಂಪ್ರದಾಯಕ ಆಟಗಳು, ಮುಂತಾದವುಗಳನ್ನು ಕಲಿಸಿಕೊಡಲಾಗುವುದು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ರಂಗ ನಿರ್ದೇಶಕ ಹಾಗೂ ನಾಟಕಕಾರ ಮಧುಸೂದನ ಘಾಟೆ, ನೀನಾಸಂ ಪದವೀಧರ ಹಾಗೂ ರಂಗ ನಿರ್ದೇಶಕ ಚಂದನ್ ಎನ್., ರಂಗ ನಿರ್ದೇಶಕ ಧೀರಜ್, ಶಿಬಿರದ ಆಯೋಜಕರಾದ ಮಾನಸ ಶಿವರಾಂ ಕೃಷ್ಣ, ಗಮಕವಾಚಕ ಪ್ರಸಾದ್ ಭಾರದ್ವಾಜ್, ಕಲಾವಿದೆ ಮಧುರ ಬಿ.ಎಸ್., ಜಾನಪದ ಕಲಾವಿದ ಜೋಗಿ ಭಾಗವಹಿಸಲಿದ್ದಾರೆ ಎಂದರು.
ಶಿಬಿರದ ಕೊನೆಯ ದಿನವಾದ ಏ.7ರಂದು ಸಂಜೆ ಸುವರ್ಣ ಸಂಸ್ಕೃತಿ ಭವನದಲ್ಲಿ ಶಿಬಿರದ ಚಿಣ್ಣರ ಹಾಡು ಕುಣಿತ, ನಾಟಕಗಳ ಪ್ರದರ್ಶನ, ಚಿಣ್ಣರ ವಸಂತೋತ್ಸವ ನಡೆಯಲಿದೆ. ಶಿಬಿರದ ಪ್ರವೇಶ ಶುಲ್ಕ 3000 ರೂ.ಗಳಿದ್ದು, ಸುಮಾರು 150 ಶಿಬಿರಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಹಾಗೂ 20 ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಪ್ರವೇಶವಿದೆ ಎಂದರು.
ಹೆಚ್ಚಿನ ವಿವರಗಳಿಗೆ ಮೊ.: 9886314670, 9663627089 ಅಥವಾ 7204697385ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾನಸ ಶಿವರಾಮಕೃಷ್ಣ, ಮಧುರ ಜಿ.ಎಸ್., ಚಂದನ್ ಎನ್. ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















