No Result
View All Result
Carnatic Music Intriguing Festival of Raga Tana Pallavi copy
English Articles

RTP | An intriguing festival of Raga-Tana-Pallavi

by kalpa News
September 9, 2026
0

Kalpa Media House  |  Special Article By Rasikapriya  | In a Carnatic music concert, RTP — Ragam, Thanam and Pallavi...

Read moreDetails
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
  • Advertise With Us
  • Grievances
  • About Us
  • Contact Us
Thursday, September 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಹೊಸದೊಂದು ಕ್ರಾಂತಿಗೆ ಸಜ್ಜಾಗಿದೆ ಭಾರತ

kalpa News by kalpa News
October 18, 2016
in Army
0
Share on FacebookShare on TwitterShare on WhatsApp
ಲೇಖಕರು: ಚಕ್ರವರ್ತಿ ಸೂಲಿಬೆಲೆ
–>
ದೇಶದ ಆರ್ಥಿಕತೆ ಹೊಸದೊಂದು ದಿಕ್ಕಿಗೆ ತೆರೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದೆಯಾ? ನರೇಂದ್ರ ಮೋದಿ ನಿರ್ದಾಕ್ಷಣ್ಯವಾಗಿ ದೇಶ ಕಟ್ಟುವ ತಮ್ಮ ಹೆಜ್ಜೆಗಳನ್ನು ಬಲವಾಗಿಯೇ ಊರುತ್ತಿದ್ದಾರೆ. ‘ಒಂದು ದೇಶಕ್ಕೆ ಒಂದು ಎಲೆಕ್ಟ್ರಿಕಲ್ ಗ್ರಿಡ್’ ಕನಸು ಕಂಡರು ಅದು ಸಾಕಾರವಾಯ್ತು. ‘ಒಂದು ದೇಶಕ್ಕೆ ಒಂದೇ ತೆರಿಗೆ’ ಎಂದರು. ಎದುರು ಪಕ್ಷದ ಅಸಮ್ಮತಿಯನ್ನೂ ಸರಿಮಾಡಿಸಿಕೊಂಡು ಚಾಣಾಕ್ಷತೆಯಿಂದ ಜಿ ಎಸ್ ಟಿ ಜಾರಿಗೆ ತಂದುಬಿಟ್ಟರು. ಈಗ ಏಕರೂಪ ನಾಗರಿಕ ಸಂಹಿತೆಗೆ ಸಮಾಜದಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿ ಹೊಸದೊಂದು ಮನ್ವಂತರಕ್ಕೆ ನಾಂದಿ ಹಾಡುತ್ತಿದ್ದಾರೆ ಪ್ರಧಾನ ಮಂತ್ರಿಗಳು. ಖುಷಿಯೇ ಅಲ್ಲವೇನು? ‘ನರೇಂದ್ರ ಮೋದಿ ಜಾತಿಗಳನ್ನು ಒಡೆಯುತ್ತಾರೆ, ಕೋಮುದಳ್ಳುರಿ ಹಚ್ಚುತ್ತಾರೆ. ದೇಶವನ್ನು ತುಂಡರಿಸುತ್ತಾರೆ’ ಎಂದೆಲ್ಲ ಬೊಬ್ಬೆ ಹೊಡೆಯುವವರ ನಡುವೆ ಅವರು ಸದ್ದಿಲ್ಲದೇ ದೇಶವನ್ನು ಜೋಡಿಸಿ ಒಂದು ಮಾಡುತ್ತಿದ್ದಾರೆ, ಸಾಧ್ಯವಾದರೆ ಹಿಂದಿನವರು ಕಳೆದುಕೊಂಡಿದ್ದನ್ನು ಮರಳಿ ಜೋಡಿಸುತ್ತಿದ್ದಾರೆ ಕೂಡ!
ಬಹುಶಃ ಅವರ ಮುಂದಿನ ದೃಷ್ಟಿ ಬಲು ದೊಡ್ಡದಾದ ಆರ್ಥಿಕ ವಿಕಾಸದತ್ತ ಕೇಂದ್ರೀಕೃತವಾಗಿದೆಯೇ? ಹೇಳಿಕೆಗಳನ್ನು ನೋಡಿದರೆ ಹಾಗನಿಸುತ್ತೆ. ‘ಸೆಪ್ಟೆಂಬರ್ 30 ರೊಳಗೆ ಕಪ್ಪುಹಣ ಘೋಷಣೆ ಮಾಡದವರು ಆನಂತರ ತಮ್ಮ ಮುಖಕ್ಕೆ ಮಸಿ ಬಳಸಿಕೊಳ್ಳಲು ಸಿದ್ಧರಾಗಿ’ ಎಂದು ಹೇಳುವ ಮೂಲಕ ಪ್ರಧಾನಿಗಳು ಹೊಸ ಆಸೆಯನ್ನು ಜನ ಸಾಮಾನ್ಯರಲ್ಲಿ ಹುಟ್ಟಿಸಿಬಿಟ್ಟಿದ್ದಾರೆ. ಅಷ್ಟೇ ಅಲ್ಲ. ಆ ಗಡುವಿನ ನಂತರ ಕಠಿಣ ಆರ್ಥಿಕತೆಯ ನಿರ್ಧಾರವನ್ನೂ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಇತ್ತ ಅವರ ನಡೆಯನ್ನು ಅರಿತು ಹೆಜ್ಜೆ ಹಾಕುವ ಚಾಣಾಕ್ಷ ಚಂದ್ರಬಾಬು ನಾಯ್ಡು 500 ಮತ್ತು 1000 ದ ನೋಟು ನಿಷೇಧ ಮಾಡಿ ಭ್ರಷ್ಟಾಚಾರ ನಿಯಂತ್ರಿಸಬೇಕೆಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ಉದ್ಯಮಿಯಾಗಿದ್ದ ಅನಿಲ್ ಬೋಕಿಲ್ ಮತ್ತವರ ಮಿತ್ರರು ಭಾರತದ ಆರ್ಥಿಕ ಸ್ಥಿತಿಗತಿಗಳ ಕುರಿತಂತೆ ಬಲುವಾಗಿ ತಲೆಕೆಡಿಸಿಕೊಂಡು ಇದನ್ನು ಭ್ರಷ್ಟಮುಕ್ತ ಮಾಡುವ ಸಹಜ ವ್ಯವಸ್ಥೆಯನ್ನು ಹುಡುಕಲಾರಂಭಿಸಿದರು. ಅವರಿಗೆ ಗೋಚರವಾದ ಮಹತ್ವದ ಸಂಗತಿಯೆಂದರೆ, ಈ ದೇಶದಲ್ಲಿ ಭ್ರಷ್ಟಾಚಾರ ವ್ಯವಸ್ಥೆಗೆ ಪ್ರೇರಣೆ ಕೊಡುವುದೇ ಇಲ್ಲಿನ ತೆರಿಗೆ ವ್ಯವಸ್ಥೆ ಎನ್ನುವುದು ಅವರ ಗಮನಕ್ಕೆ ಬಂತು. ನೇರ ತೆರಿಗೆ ನೆಪಮಾತ್ರಕ್ಕೆ ಪಡೆಯುವ ಸರ್ಕಾರ ಜನರಿಗೆ ಅರಿವೇ ಇಲ್ಲದಂತೆ ಪರೋಕ್ಷ ತೆರಿಗೆಯನ್ನು ಕತ್ತುಹಿಸುಕಿ ಪಡೆಯುತ್ತಿದೆ. ಸುಮ್ಮನೆ ನಿಮ್ಮ ಅವಗಾಹನೆಗೆ ಇರಲಿ ಅಂತ. ನೀವು ಗಳಿಸಿದ ಹಣಕ್ಕೆ ಆದಾಯ ತೆರಿಗೆ ಕಟ್ಟಿದ ಮೇಲೆ, ಮನೆಗೆ ಕಂದಾಯವನ್ನು ಕಟ್ಟುತ್ತೀರಿ. ಗಾಡಿ ಕೊಂಡದ್ದಕ್ಕೆ ತೆರಿಗೆ ಕಟ್ಟಿದ್ದಲ್ಲದೇ ಅದನ್ನು ರಸ್ತೆಗಿಳಿಸಲು ರೋಡ್ ಟ್ಯಾಕ್ಸ್ ಕಟ್ಟುತ್ತೀರಿ. ಗಾಡಿಗೆ ಪೆಟ್ರೋಲ್ ಹಾಕಿದರೆ ನಾಲ್ಕಾರು ಬಗೆಯ ಸೆಸ್ಗಳೂ ಸೇರಿದಂತೆ ಅಪಾರ ತೆರಿಗೆ ಕಟ್ಟಿ, ಅಂಗಡಿಗೆ ಹೋಗಿ ಕೊಂಡುಕೊಳ್ಳುವ ವಸ್ತುಗಳಿಗೆ ವ್ಯಾಟ್ ಕಟ್ಟುತ್ತೀರಿ. ಹೋಟೆಲಿನಲ್ಲಿ ಊಟ ಮಾಡಿದರೆ ಸೇವಾ ತೆರಿಗೆ ಕಟ್ಟಬೇಕು. ಅದನ್ನು ಬಿಟ್ಟು ಸೇವೆ ಮಾಡಿದವನಿಗೆ ಟಿಪ್ಸ್ ಬೇರೆ! ಒಂದು ಅಂದಾಜಿನ ಪ್ರಕಾರ 50ಕ್ಕೂ ಹೆಚ್ಚು ರೀತಿಯ ತೆರಿಗೆಗಳು ನಮ್ಮನ್ನು ಆಳುತ್ತಿವೆ. ಹೀಗಾಗಿ ಎಲ್.ಕೆ.ಜಿ ಗೆ ಹೋಗುವ ಪೆನ್ಸಿಲ್ ಬಳಸುವ ಪುಟ್ಟ ಮಗುವಿನಿಂದ ಹಿಡಿದು ಹಾಸಿಗೆಯ ಮೇಲೆ ಮಲಗಿ ಔಷಧಿ ತಿನ್ನುವ ತೊಂಭತ್ತರ ವೃದ್ಧರವರೆಗೂ ಪ್ರತಿಯೊಬ್ಬರೂ ಈ ದೇಶದಲ್ಲಿ ತೆರಿಗೆ ಕಟ್ಟುವವರೇ.
ಮತ್ತೆ ಇದಕ್ಕೆ ಪರಿಹಾರವೇನು? ಎಲ್ಲಾ ಬಗೆಯ ತೆರಿಗೆಯನ್ನು ಮನ್ನಾ ಮಾಡಿಬಿಡುವುದಷ್ಟೇ! ಅಲ್ಲವೇ ಮತ್ತೇ? ನಾವು ಗಳಿಸಿದ್ದಕ್ಕೂ ತೆರಿಗೆ ಕಟ್ಟಬೇಕು, ಖರ್ಚು ಮಾಡಿದ್ದಕ್ಕೂ ಕಟ್ಟಬೇಕು. ಇದು ಏಕೆ? ಎಲ್ಲಾ ಬಗೆಯ ತೆರಿಗೆಯಿಂದ ಮುಕ್ತಗೊಳಿಸಿ ಎಲ್ಲರನ್ನು ಬ್ಯಾಂಕ್ ವ್ಯವಸ್ಥೆಯಡಿ ತಂದು ಅಲ್ಲಿಂದಲೇ ಎರಡೇ ಪ್ರತಿಶತ ತೆರಿಗೆಯನ್ನು ಪಾವತಿಸುವಾಗ ಕಡಿದುಕೊಂಡರಾಯ್ತು! ಈ ವ್ಯವಸ್ಥೆ ಗಳಿಕೆಗೆ ನಿರ್ಬಂಧ ಹೇರುವುದಿಲ್ಲ. ಖರ್ಚು ಮಾಡುವಲ್ಲಿ ತೆರಿಗೆ ವಸೂಲಿ ಮಾಡುತ್ತದೆ. ಇದೇ ತೆರಿಗೆಯಲ್ಲಿ ರಾಜ್ಯಕ್ಕೆ, ದೇಶಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಬ್ಯಾಂಕುಗಳಿಗೂ ಪಾಲು. ಈಗಿನ ವಹಿವಾಟಿನ ಆಧಾರದ ಮೇಲೆ ಲೆಕ್ಕ ಹಾಕಿದರೆ ಇಷ್ಟು ಅಲ್ಪಮಾತ್ರದ ತೆರಿಗೆಯಿಂದಲೇ ದೇಶದ ತೆರಿಗೆ ಸಂಗ್ರಹ ಈಗಿನ ಸಂಗ್ರಹದ ದುಪ್ಪಟ್ಟಾದರೂ ಆಗುವುದು ಖಾತ್ರಿ!
ಇದರ ಜೊತೆ ಜೊತೆಗೆ ಅನಿಲ್ ಬೋಕಿಲ್ರ ಅರ್ಥಕ್ರಾಂತಿ ತಂಡ ನೂರಕ್ಕೂ ಮೇಲ್ಪಟ್ಟ ಎಲ್ಲಾ ಮುಖ ಬೆಲೆಯ ನೋಟುಗಳನ್ನು ನಿಷೇಧಿಸುವ ಆಗ್ರಹ ಮಾಡಿಸುತ್ತಿದೆ. ಇಷ್ಟಕ್ಕೂ ದೇಶದ ಕನಿಷ್ಠ ಮುಕ್ಕಾಲು ಭಾಗ ಜನ ಬಡತನ ರೇಖೆಗಿಂತ ಕೆಳಗಿದ್ದಾರೆಂದು ಸರ್ಕಾರವೇ ಹೇಳಿದೆ. ಇವರಿಗೆ ದಿನವೊಂದಕ್ಕೆ ನೂರು ರೂಪಾಯಿ ದುಡಿಯೋದು ಕಷ್ಟ. ಇಂಥವರನ್ನು ಗಣನೆಗೆ ತೆಗೆದುಕೊಳ್ಳದೇ ಉಳಿದ ಕೆಲವೇ ಕೆಲವು ಸಿರಿವಂತರ ಉಪಯೋಗಕ್ಕೆಂದು ಐದುನೂರು, ಸಾವಿರದ ನೋಟುಗಳನ್ನು ಟಂಕಿಸಿ ಕೊಟ್ಟಿರುವುದರ ಲಾಭ ಯಾರಿಗೆ ಹೇಳಿ? ಸರ್ಕಾರಕ್ಕೆ ವಂಚಿಸಿ ಮನೆಯ ಅಡಿಯಲ್ಲಿ ಹಣ ಕೂಡಿಡುವ ಭ್ರಷ್ಟರಿಗೆ ಅಥವಾ ಈ ನೋಟುಗಳನ್ನು ಮುದ್ರಿಸಿ ನೇಪಾಳದ ಮೂಲಕ ಭಾರತಕ್ಕೆ ತುರುಕುವ ಪಾಕೀಸ್ತಾನಿ ಮಾಫಿಯಾ ಡಾನುಗಳಿಗೆ!
ಅಚ್ಚರಿಯಾದೀತು ನಿಮಗೆ. ದೇಶದಲ್ಲಿ ಮನೆಯಲ್ಲಿ ಮುಚ್ಚಿಟ್ಟಿರುವ ಕಪ್ಪು ಹಣ ಲೆಕ್ಕಕ್ಕೇ ಸಿಗದಷ್ಟು ಅಗಾಧ! ಹಾಗೆಯೇ ದೇಶದ ಒಟ್ಟಾರೆ ಕರೆನ್ಸಿಯಲ್ಲಿ ಹೆಚ್ಚು ಕಡಿಮೆ ಕಾಲುಭಾಗದಷ್ಟು ಖೋಟಾ ನೋಟುಗಳೇ. ಪಾಕೀಸ್ತಾನದಲ್ಲಂತೂ ಭಾರತದ ನೋಟುಗಳನ್ನು ಮುದ್ರಿಸಿ ಸಾಗಿಸುವ ವ್ಯವಸ್ಥಿತ ಜಾಲವೇ ಇದೆ. ಸಾವಿರವಾಗಲಿ, ಐನೂರಾಗಲಿ ಒಂದು ನೋಟನ್ನು ಮುದ್ರಿಸಿ ತಳ್ಳಲು ಸುಮಾರು ನಲವತ್ತು ರೂಪಾಯಿಯಷ್ಟು ಖರ್ಚಾಗುತ್ತದೆ. ಇನ್ನು ಅದಕ್ಕೆ ಒಂದಷ್ಟು ಕಮೀಷನ್ನು. ಹೀಗೆ ಕೂಡಿ ಕಳೆದರೂ ನೂರಾರು ರೂಪಾಯಿಗಳ ಲಾಭ. ಈಗೇನಾದರೂ ಈ ದೊಡ್ಡ ಮುಖಬೆಲೆಯ ನೋಟುಗಳನ್ನು ನಿಷೇಧಿಸಿಬಿಟ್ಟರೆ ಅಲ್ಲಿಗೆ ನೆಲಮಾಳಿಗೆಯಲ್ಲಿ ಮುಚ್ಚಿಟ್ಟ ನೋಟಿನ ಕಂತೆಗಳು ಹೊರಬರಲೇಬೇಕು ಅಥವಾ ಅದನ್ನು ಕೂಡಿಟ್ಟವರು ಅದರಲ್ಲಿಯೇ ಒಂದಷ್ಟುದಿನ ನೀರು ಕಾಯಿಸಿಕೊಂಡು ಸ್ನಾನ ಮಾಡಬೇಕು. ಹೀಗೆ ಈ ನೋಟುಗಳು ಹೊರಬಂದು ಬ್ಯಾಂಕಿಗೆ ಜಮಾವಣೆಯಾದರೆ ಬ್ಯಾಂಕುಗಳಲ್ಲಿ ಸಂಗ್ರಹಿಸಲ್ಪಟ್ಟ ಈ ಹಣ ಜನಸಾಮಾನ್ಯರ ಬಳಕೆಗೆ ಬರುತ್ತದೆ, ಅತಿ ಕಡಿಮೆ ಬಡ್ಡಿದರದಲ್ಲಿ ಸಾಲವೂ ಸಿಗುತ್ತದೆ.
ವಾಸ್ತವವಾಗಿ ಹಣ ಒಂದು ಮಾಧ್ಯಮ. ಅದು ಚಾಲ್ತಿಯಲ್ಲಿರಬೇಕೇ ಹೊರತು, ಜೇಬಿನಲ್ಲೋ, ಬೀರುವಿನಲ್ಲೋ, ನೆಲಮಾಳಿಗೆಯಲ್ಲೋ ಕೊಳೆಯಬಾರದು. ಹಾಗೆ ದೇಶದಲ್ಲಿ ಚಾಲನೆಗೆ ಬರದ ದುಡ್ಡು ದೇಹದಲ್ಲಿ ಸೂಕ್ತವಾಗಿ ಹರಿಯದ ರಕ್ತವಿದ್ದಂತೆ. ಅದು ಸ್ವಾಸ್ಥ್ಯವನ್ನು ಹಾಳುಗೆಡುವುದು ಖಾತ್ರಿ. ಸ್ವಾತಂತ್ರ್ಯ ಬಂದಾಗಿನಿಂದಲೂ ಭ್ರಷ್ಟಾಚಾರಕ್ಕೆ ಪ್ರೇರಣೆ ಕೊಟ್ಟ ರಾಜಕಾರಣಿಗಳು ಈ ದೇಶದ ಸಾಮಾನ್ಯ ಜನರ ಬದುಕು ಹಾಳು ಮಾಡಿದರು. ಈಗ ಅರ್ಥಕ್ರಾಂತಿಯ ಪ್ರಸ್ತಾವನೆ ಹೊಸದೊಂದು ಆಶಾಭಾವನೆ ಹುಟ್ಟಿಸಿದೆ. ಮೋದಿಯವರು ಇದನ್ನು ಒಪ್ಪಿಕೊಳ್ಳಬಹುದೆಂಬ ದೂರದ ಭರವಸೆಯೂ ಇದೆ. ಹೀಗಾಗಿಯೇ ಅವರು ಜನರನ್ನು ಬ್ಯಾಂಕಿನತ್ತ ಸೆಳೆದು ಆರ್ಥಿಕ ವಹಿವಾಟನ್ನು ನ್ಯಾಯಸಮಗೊಳಿಸಲು ಜನ್ಧನ್ ಯೋಜನೆಯನ್ನು ಜಾರಿಗೆ ತಂದರೆನಿಸುತ್ತದೆ. ಜಿಎಸ್ಟಿ ಜಾರಿಗೆ ತಂದು ತೆರಿಗೆ ವ್ಯವಸ್ಥೆಯನ್ನು ಹಿಡಿತಕ್ಕೆ ತಂದುಕೊಳ್ಳುವ ಯತ್ನ ಮಾಡಿದರು ಎಂದೂ ಎನಿಸುತ್ತದೆ. ಅಷ್ಟೇ ಅಲ್ಲ. ಈಗ ಚಂದ್ರಬಾಬು ನಾಯ್ಡುರಂಥವರು ಐದುನೂರು ಮತ್ತು ಸಾವಿರದ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಎನ್ನುವುದು ಅರ್ಥಕ್ರಾಂತಿಯ ಗತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿಯೇ ನವೆಂಬರ್ 11, 12, 13 ರಂದು ಪುಣೆಯ ಶನಿವಾರವಾಡಾದಲ್ಲಿ ಸೇರಲಿರುವ ಬೃಹತ್ ಜನ ಸಭೆ ಅರ್ಥಕ್ರಾಂತಿಯ ಅನುಷ್ಠಾನಕ್ಕೆ ಪ್ರಧಾನಮಂತ್ರಿಯವರಿಗೆ ಪ್ರೀತಿಯ ಆಗ್ರಹ ಮಂಡಿಸುತ್ತಿದೆ.
ಹೊಸದೊಂದು ಮನ್ವಂತರದ ಭರವಸೆ ಹೊತ್ತು ನಾವುಗಳೂ ಕಾಯುತ್ತಿದ್ದೇವೆ.
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಜ್ಯದ ರೈತರ ಸಾಲಮನ್ನಾ ಮಾಡಿ: ಬಿಎಸ್‌ವೈ ಒತ್ತಾಯ

Next Post

ಇಡೀ ವಿಶ್ವ ಇಂದು ಭಾರತೀಯ ಸೈನಿಕರ ಬಗ್ಗೆ ಮಾತನಾಡುತ್ತಿದೆ: ಮೋದಿ

kalpa News

kalpa News

Next Post

ಇಡೀ ವಿಶ್ವ ಇಂದು ಭಾರತೀಯ ಸೈನಿಕರ ಬಗ್ಗೆ ಮಾತನಾಡುತ್ತಿದೆ: ಮೋದಿ

Leave a Reply Cancel reply

Your email address will not be published. Required fields are marked *

No Result
View All Result
Carnatic Music Intriguing Festival of Raga Tana Pallavi copy
English Articles

RTP | An intriguing festival of Raga-Tana-Pallavi

by kalpa News
September 9, 2026
0

Kalpa Media House  |  Special Article By Rasikapriya  | In a Carnatic music concert, RTP — Ragam, Thanam and Pallavi...

Read moreDetails
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL