ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಸಕ್ತ ಸಾಲಿನ ಕೇಂದ್ರ ಆಯವ್ಯಯದಲ್ಲಿ ರಾಜ್ಯಕ್ಕೆ ಎರಡು ಬುಲೆಟ್ ರೈಲುಗಳ #BulletTrain ಘೋಷಣೆ ಮಾಡಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ಚಿನ್ ವೈಷ್ಣವ್ ತಿಳಿಸಿದರು.
ಈ ಕುರಿತಂತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯಕ್ಕೆ ಎರಡು ಹೈಸ್ಪೀಡ್ ರೈಲನ್ನು ಘೋಷಣೆ ಮಾಡಲಾಗಿದೆ. #Bengaluru ಬೆಂಗಳೂರು-ಚೆನ್ನೈ, #Chennai ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಹೈಸ್ಪೀಡ್ ರೈಲು ಅಂದರೆ ಬುಲೆಟ್ ರೈಲು ಘೋಷಿಸಲಾಗಿದೆ ಎಂದರು.
ಚೆನ್ನೈಯಿಂದ ಬೆಂಗಳೂರಿಗೆ ಕೇವಲ 1.30 ಗಂಟೆಯಲ್ಲೇ ಬರಬಹುದು, ಹೋಗಬಹುದು. ಇನ್ನು ಬೆಂಗಳೂರು-ಹೈದರಾಬಾದ್ ನಡುವಿನ ಪ್ರಯಾಣದ ಅವಧಿ ಕೇವಲ 2 ಗಂಟೆ ಎಂದರು.
ರಾಜ್ಯದಲ್ಲಿ ಹೈಸ್ಪೀಡ್ ಟ್ರೈನ್ ಕಾರಿಡಾರ್ ಮಾಡಲಾಗುತ್ತದೆ ಎಂದು ಹೇಳಿದರು. ಈ ಎರಡು ಹೊಸ ರೈಲುಗಳ ಸಂಚಾರದಿಂದ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಎರಡು ನಗರಗಳಲ್ಲಿ ಬಹಳಷ್ಟು ಬದಲಾವಣೆ ತರುವಲ್ಲಿ ಸಂಶಯವಿಲ್ಲ ಎಂದರು.
ಇನ್ನು, ಈ ರೈಲು ಓಡಾಟ ಬೆಂಗಳೂರಿನಲ್ಲಿ ಉತ್ಪಾದನೆ, ಐಟಿ ಸೇವೆಗಳಿಗೆ ಉತ್ತೇಜನ ಸಿಗಲಿದ್ದು, ಕರ್ನಾಟಕಕ್ಕೆ ಈ ಎರಡು ರೈಲುಗಳು ಗೇಮ್ ಚೇಂಜರ್ ಆಗಿ ಕೆಲಸ ಮಾಡುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಏಳು ಹೈಸ್ಪೀಡ್ ರೈಲು ಮಾರ್ಗ
ದೇಶದಲ್ಲಿ ರೈಲ್ವೆ ಪ್ರಯಾಣವನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಗೊಳಿಸುವ ನಿಟ್ಟಿನಲ್ಲಿ ಏಳು ಹೈಸ್ಪೀಡ್ ರೈಲು ಮಾರ್ಗವನ್ನು ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಒಟ್ಟು 78 ಮಾರ್ಗಗಳನ್ನು ಹೈಸ್ಪೀಡ್ ರೈಲು ಮಾರ್ಗದ ಎಂದು ಘೋಷಣೆ ಮಾಡುತ್ತಿದ್ದೇವೆ. ಇದರಿಂದಾಗಿ ವೇಗ ಸಂಪರ್ಕದೊಂದಿಗೆ ಅಭಿವೃದ್ಧಿಗೂ ಸಹ ಸಹಕಾರಿಯಾಗಲಿದೆ ಎಂದರು.
ಎಲ್ಲೆಲ್ಲಿ ಹೈಸ್ಪೀಡ್ ರೈಲು ಮಾರ್ಗ?
- ಬೆಂಗಳೂರು-ಹೈದರಾಬಾದ್
- ಬೆಂಗಳೂರು-ಚೆನ್ನೈ
- ಮುಂಬೈ-ಪುಣೆ
- ಪುಣೆ-ಹೈದರಾಬಾದ್
- ಹೈದರಾಬಾದ್-ಚೆನ್ನೈ
- ನವದೆಹಲಿ-ವಾರಣಾಸಿ
- ವಾರಣಾಸಿ-ಸಿಲಿಗುರಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















