No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
  • Advertise With Us
  • Grievances
  • About Us
  • Contact Us
Monday, September 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮೈಸೂರಿನ ಶ್ರೀ ಸಪ್ತಮಾತೃಕಾ ಚೌಡೇಶ್ವರಿ ಸನ್ನಿಧಿಗೆ 20ರ ಸಂಭ್ರಮ | ಶಕ್ತಿ ಪೀಠದಲ್ಲಿ ಸಾಮಾಜಿಕ ಕಳಕಳಿ

4 ದಿನ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ -2025 | ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಅನುಗ್ರಹದಿಂದ ಸಕಲ ಸೇವಾ ಕಾರ್ಯ ಸಂಪನ್ನ

kalpa News by kalpa News
May 28, 2025
in Special Articles
0
ಮೈಸೂರಿನ ಶ್ರೀ ಸಪ್ತಮಾತೃಕಾ ಚೌಡೇಶ್ವರಿ ಸನ್ನಿಧಿಗೆ 20ರ ಸಂಭ್ರಮ | ಶಕ್ತಿ ಪೀಠದಲ್ಲಿ ಸಾಮಾಜಿಕ ಕಳಕಳಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ಶಿವಮೊಗ್ಗ ರಘುರಾಮ  |

ದುಷ್ಟ ಸಂಹಾರಕ್ಕಾಗಿ ಅವತಾರ ಎತ್ತಿದ ಮಾತೆ ನಿತ್ಯವೂ ಭಕ್ತ ಜನರ ಸಂಕಷ್ಟಗಳನ್ನು ಪರಿಹಾರ ಮಾಡಲು ಅನುಗ್ರಹಿಸುತ್ತಾಳೆ. ಭಕ್ತಿಯಿಂದ ಬೇಡಿ ಬಂದವರಿಗೆ ಅಭಯ ನೀಡುವ ಅಮ್ಮನವರು ಬದುಕಿಗೆ ಬೆಳಕಾಗಿದ್ದಾರೆ. ಇತಿಹಾಸ ಮತ್ತು ಪರಂಪರೆ ಪ್ರತೀಕವಾಗಿರುವ ನಗರದ ಶಕ್ತಿ ಪೀಠವೊಂದು ದೇವಿಯ ಪೂಜೆ, ಆರಾಧನೆಯೊಂದಿಗೆ ಲೌಕಿಕ ಸಮಸ್ಯೆಗಳಿಗೂ ಸ್ಪಂದಿಸಿ ಆಶ್ರಯವಾಗಿ ನಿಂತಿರುವುದು ಮಾದರಿಯಾಗಿದೆ. ಇದುವೇ ಶ್ರೀ ಸಪ್ತಮಾತೃಕಾ ಚೌಡೇಶ್ವರಿ ದೇವಾಲಯ. ಜನ ಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮೈಸೂರಿನ ವಿಜಯನಗರ ಮೂರನೇ ಹಂತ, 6ನೇ ಮುಖ್ಯರಸ್ತೆಯಲ್ಲಿರುವ ಸನ್ನಿಧಿಯು ಈಗ 20ನೇ ಪ್ರತಿಷ್ಠಾ ವರ್ಧಂತಿ ಉತ್ಸವದ ಸಂಭ್ರಮದಲ್ಲಿದೆ.

ಚಾಮರಾಜನಗರ ತಾಲೂಕು ಕಮರವಾಡಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಸಪ್ತಮಾತೃಕೆ ಸನ್ನಿಧಿ (ಅಗಸ್ತ್ಯ ಮುನಿ ಪ್ರತಿಷ್ಠಾಪಿತ)ಯಿಂದ ಅನುಗ್ರಹೀತರಾದ ಭಕ್ತರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಒಂದು ಗುಡಿ ನಿರ್ಮಿಸಲು ಸಂಕಲ್ಪಿಸಿದರು. ವಿಜಯನಗರದಲ್ಲಿ ಇದಕ್ಕಾಗಿ ಜಾಗ ನಿಗದಿಮಾಡಿಕೊಂಡು ಭವ್ಯ ಆಲಯ ನಿರ್ಮಿಸಿದರು. ಕಮರವಾಡಿಯಂತೆಯೇ ಇಲ್ಲೂ ಸಪ್ತ ಮಾತೃಕೆಯರಿಗೆ ವೈಭವೋಪೇತ ಉತ್ಸವಾದಿಗಳು ನಡೆಯಲು ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥರು ಚಾಲನೆ ನೀಡಿದರು. ಶ್ರದ್ಧಾಂವಂತ ಹಿರಿಯರು ದೇಗುಲದ ಟ್ರಸ್ಟಿನಲ್ಲಿದ್ದು ಶಕ್ತಿ ಪೀಠದ ಸಾಧನಾ ಪಥಕ್ಕೆ ಮಾರ್ಗದರ್ಶಿಯಾಗಿರುವುದು ವಿಶೇಷವಾಗಿದೆ.ವಿಶೇಷ ಪೂಜೆಗಳು
ಅಮ್ಮನವರ ಸನ್ನಿಧಾನದಲ್ಲಿ ನಿತ್ಯವೂ ದ್ವಿಕಾಲ ಪೂಜೆ, ಶುಕ್ರವಾರ ದುರ್ಗಾಹೋಮ, ಗುರುವಾರ ದಕ್ಷಿಣಾಮೂರ್ತಿ ಪೂಜೆ, ಹುಣ್ಣಿಮೆ ಪುರುಷಸೂಕ್ತ ಹೋಮ ಮತ್ತು ಸತ್ಯನಾರಾಯಣ ಪೂಜೆ, ಅಮಾವಾಸ್ಯೆ ಶ್ರೀಸೂಕ್ತ ಹೋಮ ಮತ್ತು ಕಾಲಭೈರವ ಪೂಜೆ, ಸಂಕಷ್ಟಿಯಂದು ಬೆಳಗ್ಗೆ ಗಣಹೋಮ, ಸಂಜೆ ಸಂಕಷ್ಟಹರ ಗಣಪತಿ ಪೂಜೆ ನೆರವೇರುತ್ತದೆ.

ನವರಾತ್ರಿ ಸಂದರ್ಭ 9 ದಿನವೂ ವಿಶೇಷ , ಅಲಂಕಾರ, 10 ದಿನ ಹೋಮ ನೆರವೇರುತ್ತದೆ. ಕಾರ್ತಿಕ ಹುಣ್ಣಿಮೆ ಉತ್ಸವ ಮೂರ್ತಿಗೆ ಅಭಿಷೇಕ, ಅಮಾವಾಸ್ಯೆ ಲಕ್ಷ ದೀಪೋತ್ಸವ, ವೈಶಾಖ ಬಹುಳ ಸಪ್ತಮಿ ಪ್ರತಿಷ್ಠಾ ವಾರ್ಷಿಕೋತ್ಸವ ನೆರವೇರುತ್ತದೆ. ಉಳಿದಂತೆ ಭಾರತೀಯ ಸಂಪ್ರದಾಯದ ಎಲ್ಲ ಹಬ್ಬ-ಹರಿದಿನ ಪೂಜಾದಿಗಳು ವಿಜೃಂಭಿಸುತ್ತವೆ. ವಿವರಗಳಿಗೆ 94490 12113 ಸಂಪರ್ಕಿಸಬಹುದು.

ಸಾಮಾಜಿಕ ಸೇವಾ ಚಟುವಟಿಕೆ
ಈಗಾಗಲೇ 20 ವಸಂತ ಕಂಡ ದೇವಾಲಯದಲ್ಲಿ ಪ್ರತಿ ವರ್ಷವೂ ಹಲವು ಸಾಮಾಜಿಕ ಸೇವಾಕಾರ್ಯಗಳನ್ನು ನಡೆಸಲಾಗುತ್ತಿದೆ. ವೈಶಾಖ ಮಾಸ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ, 1ಸಾವಿರ ಗ್ರಾಮೀಣ, ಬಡ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್ ಸೇರಿದಂತೆ ಲೇಖನ ಸಾಮಗ್ರಿ ವಿತರಿಸಲಾಗುತ್ತದೆ. ಸ್ಕಾಲರ್‌ಶಿಪ್‌ನೊಂದಿಗೆ ಶಾಲಾ ಮತ್ತು ಪರೀಕ್ಷಾ ಶುಲ್ಕವನ್ನೂ ಅನೇಕ ಬಡ ವಿದ್ಯಾರ್ಥಿಗಳಿಗೆ ಭರಿಸಲಾಗಿದೆ. ಜ್ಞಾನ ಶಾರದಾ ಆ್ಯಪ್ ಅಡಿ ಸಿಇಟಿ/ಜೆಇಇ/ ನೀಟ್ ಪರೀಕ್ಷಾರ್ಥಿಗಳಿಗೆ ತರಬೇತಿ, ನಗರ, ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು, ಬಡವರಿಗೆ ಉಚಿತ ಡಯಾಲಿಸಿಸ್ ವಾತ್ಸಲ್ಯ ಯೋಜನೆಯಡಿ ಹಿರಿಯರಿಗೆ ದೇಗುಲದ ಆವರಣದಲ್ಲಿ ಆಟೋಟ, ಸಾಮೂಹಿಕ ಶಾರದಾಪೂಜೆ ಇತ್ಯಾದಿ ಸಾಂಗವಾಗಿ ಸಾಗುತ್ತಿದೆ.ವಿವಿಧ ದೇವರ ನೆಲೆ
ದೇವಸ್ಥಾನದಲ್ಲಿ ಶ್ರೀಚಕ್ರದ ಮೇಲೆ ಸಪ್ತ ಮಾತೃಕೆಯರು ನೆಲೆಸಿದ್ದಾರೆ. ಅಲ್ಲಿಯೇ ದೇವಿಯ ಉತ್ಸವ ಮೂರ್ತಿ, ಶಕ್ತಿ ಗಣಪತಿ, ದಕ್ಷಿಣಾಮೂರ್ತಿ, ಶ್ರೀ ಸತ್ಯನಾರಾಯಣ, ಕಾಲಭೈರವರ ಮೂರ್ತಿಗಳಿವೆ. ಮೇ 19ರಿಂದ ಪ್ರತೀ ಸಪ್ತಮಿಯಂದು ಅನ್ನದಾನ ಸೇವೆ ಆರಂಭ ಮಾಡಲಾಗಿದೆ. ಭಕ್ತರು, ದಾನಿಗಳು ಸಹಕರಿಸಿದರೆ ನಿತ್ಯವೂ ಅನ್ನದಾನ ಮಾಡುವ ಯೋಜನೆ ಟ್ರಸ್ಟ್‌ಗೆ ಇದೆ.

ವಿವಿಧ ರೋಗಗಳ ನಿವಾರಣೆ, ವಿದ್ಯೆ, ವಿವಾಹ, ಸಂತಾನ ಪ್ರಾಪ್ತಿಗಾಗಿ ಭಕ್ತರು ದೇವಿಯಲ್ಲಿ ಹರಕೆ ಮಾಡಿಕೊಳ್ಳುತ್ತಾರೆ.

ಇಷ್ಟಾರ್ಥ ಸಿದ್ಧಿಸಿದ ನಂತರ ಸನ್ನಿಧಿಗೆ ಬಂದು ಮಡಿಲಕ್ಕಿ ಸಮರ್ಪಣೆ, ನಿಂಬೆಹಣ್ಣು ದೀಪೋಜ್ವಲನ, ಪ್ರಾಕಾರೋತ್ಸವ ಮತ್ತು ಮಂಡಲ ಹೆಜ್ಜೆ ನಮಸ್ಕಾರ ಸಮರ್ಪಣೆ ಮಾಡುತ್ತಾರೆ. ದೇವಾಲಯದಲ್ಲಿ ಯಾವುದೇ ಹರಕೆಗಳ ಪಟ್ಟಿ ಇಲ್ಲ. ಭಕ್ತರು ಅವರ ಮನೋಭೀಷ್ಠಕ್ಕೆಅನುಗುಣವಾಗಿ ದೇವಿಗೆ ಭಕ್ತಿ ಸಮರ್ಪಣೆ ಮಾಡುತ್ತಾರೆ. ಫಲ ಕಂಡವರು ಹೊರ ಜಿಲ್ಲೆ, ರಾಜ್ಯಗಳಿಂದಲೂ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.

ಶೃಂಗೇರಿ ಶ್ರೀ ಶಾರದಾ ಪೀಠದ ಪದ್ಧತಿಗಳ ಅನ್ವಯ ದೇವಾಲಯದಲ್ಲಿ ಸಕಲ ಪೂಜಾವಿಧಿಗಳು, ಆಚರಣೆಗಳು ಸಂಪನ್ನಗೊಳ್ಳುತ್ತಿವೆ.ದೇವಿ ಕೃಪೆ ಮತ್ತು ಜಗದ್ಗುರುಗಳ ಅನವರತ ಅನುಗ್ರಹವೇ ಇಲ್ಲಿನ ಎಲ್ಲ ಚಟುವಟಿಕೆಗಳಿಗೆ ಪ್ರೇರಣೆ. ಅನುಷ್ಠಾನ, ಅರ್ಚನೆ, ಆರಾಧನೆ, ಅನ್ನದಾನ ನಮ್ಮ ಪರಮ ಧ್ಯೇಯ. ಸಕಲ ಭಕ್ತರೂ ಸಂತಸ ಮತ್ತು ಸಂಭ್ರಮದಿಂದ ಜೀವಿಸಬೇಕು ಎಂಬುದು ನಮ್ಮ ಆಶಯ. ಕಳೆದ 20 ವರ್ಷಗಳಿಂದ ಇವೆಲ್ಲವೂ ನೆರವೇರಿದೆ. ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರವಾಗಿರುವ ದೇಗುಲವು ಗರಿಷ್ಠ ಸಾಮಾಜಿಕ ಸೇವೆ ಮಾಡುವ ನಿಟ್ಟಿನಲ್ಲೂ ಮುಂದಾಗಿದೆ.
-ಭಾಸ್ಕರ್, ದೇವಾಲಯದ ಟ್ರಸ್ಟಿ 

ಎಂದೆಂದು- ಏನೇನು ಕಾರ್ಯಕ್ರಮ
ಮೈಸೂರಿನ ವಿಜಯನಗರ ಮೂರನೇ ಹಂತ, 6ನೇ ಮುಖ್ಯರಸ್ತೆಯ ಶ್ರೀ ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನದ 20ನೇ ವಾರ್ಷಿಕೋತ್ಸವದ ಅಂಗವಾಗಿ ಮೇ 28ರಿಂದ 31ರವರೆಗೆ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ 28 ರಂದು ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಸಹಸ್ರ ಮೋದಕ ಹೋಮ ನೆರವೇರಲಿದೆ. ಮೇ 29ರಂದು ಬೆಳಗ್ಗೆ 8ಕ್ಕೆ ಶ್ರೀ ರುದ್ರಏಕಾದಶನಿ ಹೋಮ ಮತ್ತು ಮೇ 30ರಂದು ಬೆಳಗ್ಗೆ 8ಗಂಟೆಗೆ ಶ್ರೀ ನವ ಚಂಡಿಕಾ ಹೋಮ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಧಾರ್ಮಿಕ ಸಮಾರಂಭದಲ್ಲಿ ಶೃಂಗೇರಿ ಶಂಕರ ಮಠದ ವೇದ ವಿದ್ವಾಂಸರು ಮತ್ತು ಋತ್ವಿಜರು ನೇತೃತ್ವ ವಹಿಸಲಿದ್ದಾರೆ. ಶೃಂಗೇರಿ ಪೀಠದ ಶ್ರೀ ಜಗದ್ಗುರುಗಳ ಆದೇಶ ಮತ್ತು ಅನುಗ್ರಹದಿಂದ ಎಲ್ಲ ವಿಧಿ, ವಿಧಾನಗಳು ನೆರವೇರಲಿವೆ ಎಂದು ದೇವಾಲಯದ ಟ್ರಸ್ಟಿ ಎಸ್.ಕೆ. ಭಾಸ್ಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇ 31 ರಂದು ಬೆಳಗ್ಗೆ 9:30ಕ್ಕೆ ದೇವಿ ಸನ್ನಿಧಿಯಲ್ಲಿ ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ ಇದೇ ಸಂದರ್ಭ ಒಂದು ಸಾವಿರ ಬಡ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ನೆರವಾಗಲು ನೋಟ್ ಪುಸ್ತಕ ಸೇರಿದಂತೆ ಹಲವಾರು ಬರವಣಿಗೆಯ ಸಾಮಗ್ರಿಗಳನ್ನು ವಿತರಣೆ ಮಾಡಲಾಗುವುದು. 20ನೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ಪ್ರತಿ ಸಪ್ತಮಿಯಂದು ಉಚಿತ ಅನ್ನದಾನ ಸೇವೆಯನ್ನು ಆರಂಭಿಸಲಾಗಿದೆ. 4 ದಿನಗಳ ಕಾರ್ಯಕ್ರಮಕ್ಕೆ ಎಲ್ಲ ಸಮುದಾಯದ ದೇವಿ ಭಕ್ತರು, ಸಾರ್ವಜನಿಕರು ಆಗಮಿಸಬೇಕು ಎಂದು ದೇವಾಲಯದ ಟ್ರಸ್ಟಿ ಎಸ್.ಕೆ. ಭಾಸ್ಕರ ವಿನಂತಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: ChamarajanagarKannada News WebsiteLatest News KannadamysoreSpecial ArticleSringeriಚಾಮರಾಜನಗರಮೈಸೂರುಶೃಂಗೇರಿಶ್ರೀ ಭಾರತೀ ತೀರ್ಥರು
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕಸದ ಶುಲ್ಕ ಹೆಸರಿನಲ್ಲಿ ಬೆಂಗಳೂರಿನ ಜನರಿಂದ ಹಣ ಲೂಟಿ: ಪ್ರತಿಪಕ್ಷ ನಾಯಕ ಆರ್‌. ಅಶೋಕ ಆಕ್ರೋಶ

Next Post

ಮೇ 31ರಂದು ಶ್ರೀರಾಮಚಂದ್ರಾಪುರ ಮಠದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ

kalpa News

kalpa News

Next Post
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ರಾಘವೇಶ್ವರ ಶ್ರೀಗಳ ಸಂಕಲ್ಪ

ಮೇ 31ರಂದು ಶ್ರೀರಾಮಚಂದ್ರಾಪುರ ಮಠದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ

Leave a Reply Cancel reply

Your email address will not be published. Required fields are marked *

No Result
View All Result
Hyderabad Pink Power Run 35K Breast Cancer Awareness copy
English Articles

Hyderabad Runs Pink : 35,000 Unite For Breast Cancer Awareness

by kalpa News
September 27, 2026
0

Kalpa Media House  |  Hyderabad  | 35,000 Unite in Hyderabad for Pink Power Run 3.0 MEIL and Sudha Reddy Foundation jointly...

Read moreDetails
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL