ನವದೆಹಲಿ: ಅ:21: ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ನೇತೃತ್ವದ ಸರಕಾರದ ಮೊದಲ ಪ್ರಾದೇಶಿಕ ವಿಮಾನಯಾನ ಯೋಜನೆಯು ಮುಂದಿನ ವರ್ಷದ ಜನವರಿಯಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಇದರಂತೆ, ಗಂಟೆಗೆ 2500ರೂ.ಗಳಿಗೆ ವಿಮಾನಯಾನ ಕೈಗೊಳ್ಳುವ ಅವಕಾಶವಿದ್ದು, ಜನಸಾಮಾನ್ಯ ಭಾರತೀಯನಿಗೂ ವಿಮಾನಯಾನದ ಕನಸು ಹೊಂದಲು ಅವಕಾಶ ಕಲ್ಪಿಸಿಕೊಡಲಿದೆ.
ನಾವು ಮೊದಲ ಪ್ರಾದೇಶಿಕ ವಿಮಾನಗಳ ಹಾರಾಟವನ್ನು ಮುಂದಿನ ವರ್ಷದ ಜನವರಿಯ ವೇಳೆ ನಿರೀಕ್ಷಿಸಬಹುದಾಗಿದೆ ಎಂದು ವಾಯುಯಾನ ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ.
ಈ ಯೋಜನೆಯಡಿ ದೇಶದ ಪ್ರಮುಖ ವಿಮಾನನಿಲ್ದಾಣಗಳಲ್ಲಿ ಇಳಿಯುವ ವಿಮಾನಗಳ ಮೇಲೆ ಸಣ್ಣ ಸುಂಕ ವಿಸುವ ಮೂಲಕ ಜನಸಾಮಾನ್ಯರಿಗೂ ಅನುಕೂಲ ಮಾಡಿಕೊಡಲಾಗುವುದು. ಅ.31ರಂದು ಈ ಲೆವಿ ಬಗ್ಗೆ ವಿಮಾನಯಾನ ಕಾರ್ಯದಶರ್ಿ ಆರ್.ಎನ್.ಚೌಬೆ ಪ್ರಕಟಿಸಲಿದ್ದಾರೆ.
Discussion about this post