ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಮರ್ಷಿಯಲ್ ಸಿಲಿಂಡರ್ #CommercialCylinder ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ನಡುವೆಯೇ ನಗರದ ಪ್ರತಿಷ್ಠಿತ ವಿಧಾತ್ರಿ ಕೆಫೆಯಲ್ಲಿ ಗೃಹಬಳಕೆಯ ಸಿಲಿಂಡರ್’ಗಳು ಪತ್ತೆಯಾಗಿದ್ದು, ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ನೆಹರು ಕ್ರೀಡಾಂಗಣದ ಬಳಿ ಇರುವ ವಿಧಾತ್ರಿ ಕೆಫೆಯಲ್ಲಿ ಗೃಹ ಬಳಕೆಯ ಸಿಲಿಂಡರ್’ಗಳನ್ನು ಉಪಯೋಗಿಸುತ್ತಿದ್ದ ವೇಳೆ ಆಹಾರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ #DomesticCylinder ಗೃಹ ಬಳಕೆಯ ಸಿಲಿಂಡರ್’ಗಳು ಪತ್ತೆಯಾಗಿದ್ದು, ಅವರುಗಳನ್ನು ಸೀಜ್ ಮಾಡಿದ್ದಾರೆ.
ಅಗತ್ಯ ವಸ್ತು ಕಾಯ್ದೆ ಮತ್ತು ಎಲ್’ಪಿಜಿ ಆಕ್ಟ್ 2000 ಅಡಿಯಲ್ಲಿ ಮೂರು ಸಿಲಿಂಡರ್’ಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಕ್ಕೆ ಪಡೆದ ಸಿಲಿಂಡರ್’ಗನ್ನು ಅಮಾನತು ಪಡಿಸಿ ಸಂಬಂಧ ಪಟ್ಟ ಗ್ಯಾಸ್ ಕಂಪನಿಯಲ್ಲಿ ಇರಿಸಿದ್ದು ಮುಂದಿನ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಫುಡ್ ಸಹಾಯಕ ನಿರ್ದೇಶಕರಾದ ಲಕ್ಷ್ಮೀ ಮತ್ತು ಆಹಾರ ನಿರೀಕ್ಷಕರಾದ ರಾಜಪ್ಪ ಹಾಗೂ ಮನೋಜ್ ರಾವ್ ಭಾಗವಹಿಸಿದ್ದರು.
ಅಡುಗೆ ಅನಿಲ ವಿತರಣೆಯಲ್ಲಿ ವ್ಯತ್ಯಾಸವಾಗುತ್ತಿದೆ. ವಾಣಿಜ್ಯ ಬಳಕೆಯ ಸಿಲಿಂಡರ್’ಗಳ ಕೊರತೆ ಇರುವುದರಿಂದ ಕೆಲವು ಕಡೆ ವಾಣಿಜ್ಯ ಉದ್ದೇಶಕ್ಕೆ ಗ್ರಹ ಬಳಕೆಯ ಸಿಲಿಂಡರ್’ಗಳನ್ನು ಬಳಸುತ್ತಿರುವುದು ದೂರಿನ ಹಿನ್ನೆಲೆಯಲ್ಲಿ ಇದು ಅಪರಾಧವಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ನಗರದ ಹಲವೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















