ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿನ ಏನ್ವೆಂಚರ್ ಇಂಜಿನಿಯರಿಂಗ್ ಎಲ್’ಎಲ್’ಪಿ ಕಂಪೆನಿಯು ಶಿವಮೊಗ್ಗ #Shivamogga ಜಿಲ್ಲೆಯ ಪ್ರತಿಷ್ಠಿತ ಪಿಇಎಸ್`ಐಟಿಎಂ #PESITM ಇಂಜಿನಿಯರಿಂಗ್ ಕಾಲೇಜಿನಲ್ಲಿ ತನ್ನ ಮೂರನೆಯ ಶಾಖೆಯನ್ನು ಆರಂಭಿಸಿದೆ.
ಕಂಪೆನಿಯ ಅಧ್ಯಕ್ಷರಾದ ಅನಿಲ್ ಶಿವದಾಸ್ ಹಾಗೂ ಪಿಇಎಸ್ ಸಂಸ್ಥೆಯ ಸಿಇಒ ಎಸ್.ವೈ. ಉಮಾದೇವಿ ಅವರು ಈ ಶಾಖೆಯಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಶಿವದಾಸ್ ಅವರು, ಏನ್ವೆಂಚರ್ ಸಂಸ್ಥೆಯು 2000 ರಲ್ಲಿ ಸ್ಥಾಪಿಸಲ್ಪಟ್ಟಿದ್ದು, ಜಗತ್ತಿನಾದ್ಯಂತ 300 ಕ್ಕೂ ಹೆಚ್ಚು ಗ್ರಾಹಕರನ್ನು ಹಾಗೂ 250 ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಪಿಇಎಸ್’ನ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ಎಂಜಿನಿಯರಿಂಗ್ #Engineering ವಿಭಾಗಗಳ 25 ವಿದ್ಯಾರ್ಥಿಗಳಿಂದ ಶುರುವಾದ ಈ ಘಟಕವು ಮುಂದಿನ ದಿನಗಳಲ್ಲಿ 250ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಲಿದೆ ಎಂದು ತಿಳಿಸಿದರು.
ಕಂಪನಿಯ ಎಂಜಿನಿಯರಿಂಗ್ ಸೇವೆಗಳ ಉಪಾಧ್ಯಕ್ಷರಾದ ಗಿರೀಶ್ ಚಂದ್ರ ಬಾಬು ಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ಈ ಕಂಪೆನಿಯು, ಭಾರತ #India ದೇಶ ಒಳಗೊಂಡಂತೆ ಅಮೆರಿಕಾ #America ಹಾಗೂ ಇನ್ನಿತರ ದೇಶಗಳಲ್ಲಿ, ವಿವಿಧ ನಿರ್ಮಾಣ ಕಾರ್ಯಗಳ ಪ್ರಾಜೆಕ್ಟ್ ಅನ್ನು ಹೊಂದಿದ್ದು, ಈ ಆಯ್ಕೆಯಾದ ವಿದ್ಯಾರ್ಥಿಗಳು ಈ ಡಿಜಿಟಲ್ ನಿರ್ಮಾಣ ಕಾರ್ಯಗಳಲ್ಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.ಪಿಇಎಸ್ ಸಂಸ್ಥೆಯ ಸಿಇಓ ಆದ ಎಸ್.ವೈ. ಉಮಾದೇವಿ ಅವರು ಮಾತನಾಡಿ, ಮಲೆನಾಡಿನ ಈ ಭಾಗದಲ್ಲಿ ಪ್ರಾರಂಭವಾದ ಈ ಘಟಕವು ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ಬೆಂಗಳೂರಿನಲ್ಲಿ ಪದವೀಧರರಿಗೆ ದೊರಕುವ ಆಕರ್ಷಕ ಸಂಬಳವನ್ನು, ಈ ಕಂಪನಿಯು ಇಲ್ಲಿ ನೀಡುತ್ತಿದೆ ಎಂದು ತಿಳಿಸಿದರು.
ಪಿಇಎಸ್ ಟ್ರಸ್ಟ್ ಆಡಳಿತಾಧಿಕಾರಿ ಡಾ. ನಾಗರಾಜ ಆರ್ ಅವರು ಪಿಇಎಸ್ ಸಂಸ್ಥೆಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ತಿಳಿಸಿದರು.
ಪಿಇಎಸ್’ಐಟಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ವಿ. ಚೈತನ್ಯಕುಮಾರ್ ಅವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೆಲಸದಲ್ಲಿ ಬೇಕಾಗುವ ಬದ್ಧತೆ, ಪರಿಶ್ರಮದ ಬಗ್ಗೆ ಕಿವಿಮಾತು ಹೇಳಿದರು. ಕಂಪನಿಯ ಸಿಓ ಓ ವಿಲಫರ್ಡ್ ಫೆರ್ನಾಂಡಿಸ್, ಪಿಇಎಸ್’ಐಟಿಎಂ ನ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಆಯ್ಕೆಯಾದ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ಪಿಇಎಸ್ ಸಂಸ್ಥೆಯ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಡಾ. ಟಿ.ಎಂ. ಪ್ರಸನ್ನ ಕುಮಾರ್ ಅವರು ಸ್ವಾಗತ ಭಾಷಣ ಮಾಡಿದರು. ಏನ್ವೆಂಚರ್ ಇಂಜಿನಿಯರಿಂಗ್ ಎಲ್’ಎಲ್’ಪಿ ಬೆಂಗಳೂರು ಕಂಪನಿಯ ಮಾನವ ಸಂಪನ್ಮೂಲ ನಿರ್ದೇಶಕರಾದ ರವಿ ಶಂಕರ್ ಅವರು ವಂದನಾರ್ಪಣೆಯನ್ನು ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post